ಗಬ್ಬೂರಿಗೆ ಪದವಿ ಕಾಲೇಜ ಹಾಗೂ ಹಾಸ್ಟೆಲ್ ಮಂಜೂರಾತಿಗಾಗಿ ಒತ್ತಾಯಿಸಿ ಡಿಸಿಗೆ ಮನವಿ

ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಬ್ಬೂರು ಹೋಬಳಿ ಸುಮಾರು 40 ಹಳ್ಳಿಗಳ ಒಳಗೊಂಡ ಬಹು ದೊಡ್ಡ ಹೋಬಳಿ, ಈ ಗ್ರಾಮೀಣ ಭಾಗದ ಸಾಕಷ್ಟು ವಿದ್ಯಾರ್ಥಿಗಳಿಗೆ ಯಾವುದೇ ಉನ್ನತ ಶಿಕ್ಷಣದ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ರಾಯಚೂರು, ದೇವದುರ್ಗ ನಗರಗಳಿಗೆ ತೆರಳುತ್ತಾರೆ, ಗಬ್ಬೂರಿನಲ್ಲಿಯೆ ಪದವಿ ಕಾಲೇಜು ಹಾಗೂ ಹಾಸ್ಟೆಲ್ ಇಲ್ಲದ ಕಾರಣ ಕೆಲವು ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಮಾಡದೆ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಗಬ್ಬೂರು ಹೋಬಳಿ ಕೇಂದ್ರದಲ್ಲಿ ಪದವಿ ಕಾಲೇಜು, ಹಾಸ್ಟೆಲ್ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ದೇವದುರ್ಗ ತಾಲೂಕಿನ ಅತಿ ದೊಡ್ಡ ಗಬ್ಬೂರು ಹೋಬಳಿ 40 ಹಳ್ಳಿಗಳನ್ನು ಒಳಗೊಂಡ ದೊಡ್ಡ ವಾಣಿಜ್ಯ ಕೇಂದ್ರ ಸ್ಥಾನ ಈ ಭಾಗದ 40 ಹಳ್ಳಿಗಳ ಜನರು ವಿದ್ಯಾರ್ಥಿಗಳು ತಮ್ಮ ಕೆಲಸ ಕಾರ್ಯಗಳಿಗೆ ಹಾಗೂ ವಿದ್ಯಾಭ್ಯಾಸಕ್ಕಾಗಿ ಈ ಕೇಂದ್ರ ಸ್ಥಾನ ಅವಲಂಬಿಸಿದ್ದಾರೆ, ದಿನನಿತ್ಯ ಸಾವಿರಾರು ಮಕ್ಕಳು ತಮ್ಮ ಕಾಲೇಜ್ ಹಾಗೂ ಉನ್ನತ ವಿದ್ಯಾಭ್ಯಾಸಕ್ಕಾಗಿ ಗಬ್ಬೂರಿನಿಂದ ರಾಯಚೂರಿಗೆ 30 ಕಿ.ಮೀ ಹಾಗೂ ಗಬ್ಬೂರಿನಿಂದ ದೇವದುರ್ಗಕ್ಕೆ 30 ಕಿ.ಮೀ ದೂರ ಪ್ರಯಾಣಿಸಿ ಉನ್ನತ ಶಿಕ್ಷಣ ಪಡೆಯಲು ನಿತ್ಯ ಹರ ಸಾಹಸ ಪಡುತ್ತಿದ್ದಾರೆ. ಹಳ್ಳಿಗಳಿಂದ ಬರುವ ಮಕ್ಕಳಿಗೆ ಸರಿಯಾಗಿ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಉನ್ನತ ಶಿಕ್ಷಣದಿಂದ ಮಕ್ಕಳು ವಂಚಿತವಾಗುತ್ತಿದ್ದಾರೆ. ಮತ್ತು ವಿದ್ಯಾರ್ಥಿನಿಯರಿಗೆ ದೂರದ ಪ್ರಯಾಣ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣದಿಂದ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಲು ಸರ್ಕಾರಿ ಪದವಿ ಕಾಲೇಜ್ ಇಲ್ಲದಿರುವುದರಿಂದ ಅದಕ್ಕೆ ಶಾಲೆ ಬಿಟ್ಟು ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹಕ್ಕೆ ಬಲಿಯಾಗುತ್ತಿದ್ದಾರೆ. ಹಾಗೂ ವಿದ್ಯಾರ್ಥಿಗಳು ಕಾಲೇಜು ವಿದ್ಯಾಭ್ಯಾಸದಿಂದ ವಂಚಿತರಾಗಿ ನಿರುದ್ಯೋಗಿಯಾಗುತ್ತಿದ್ದು ಮಾದರಿಯಾಗುವ ಮಕ್ಕಳು ಮಾರಕವಾಗುವುದು ಈ ಭಾಗದ ದುರಂತ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು
ಗಬ್ಬೂರು ಕೇಂದ್ರ ಸ್ಥಾನದಲ್ಲಿ 2024 ರ ಶೈಕ್ಷಣಿಕ ವರ್ಷದಲ್ಲಿಯೆ ಸರ್ಕಾರಿ ಪದವಿ ಕಾಲೇಜ್ ಹಾಗೂ ವಸತಿ ನಿಲಯ ಮಂಜೂರಿ ಮಾಡಿ ಕಾಲೇಜು ಮಕ್ಕಳಿಗೆ ಅನುಕೂಲ ಕಲ್ಪಿಸಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಜಪ್ಪ ಸಿರವಾರಕರ್, ಮಲ್ಲಪ್ಪಗೌಡ ಮಾಲಿ ಪಾಟೀಲ್ ಗಬ್ಬೂರು, ಹನುಮಂತ ಮನ್ನಪೂರಿ, ವಿಜಯರಾಣಿ ಸಿರವಾರ, ಬುರಪ್ಪ ಮರೆಡ್ಡಿ, ರಾಜು ಬೊಮ್ಮನಾಳ, ಶಾಂತಕುಮಾರ ಹೊನ್ನಟಗಿ, ಬಸವರಾಜ ಜಗ್ಲಿ, ತೂಕರಾಮ ಎನ್.ಗಣೇಕಲ್, ಮಾರ್ತಾಂಡ ಗಬ್ಬೂರು, ಮುತ್ತುರಾಜ ಮ್ಯಾತ್ರಿ ಗಬ್ಬೂರು, ಜಾಕೋಬ್ ಟೇಲರ್ ಬೊಮ್ಮನಾಳ, ರಮೇಶ ಖಾನಾಪೂರ, ಹುಲ್ಲಿಗೆಪ್ಪ ಹೊನ್ನಟಗಿ, ಮರೆಪ್ಪ ಮಲದಕಲ್, ರಾಜಹುಲಿ ಸಿಂಗ್ರಿ, ಬಸವಲಿಂಗ ಹೊನ್ನಟಗಿ, ನಾಗರಾಜ ಖಾನಾಪೂರ, ಮಹಾಂತೇಶ ಗಬ್ಬೂರು, ನರಸಪ್ಪ ಎನ್.ಗಣೇಕಲ್, ಬೂದೆಪ್ಪ, ಶಾಂತರಾಜ ಬೊಮ್ಮನಾಳ, ಸಂಗಪ್ಪ ಮ್ಯಾತ್ರಿ, ತಾಯಪ್ಪ ಶಿರಡ್ಡಿ, ಬಾಬು ಹೊನ್ನಟಗಿ ಸೇರಿದಂತೆ ಅನೇಕರಿದ್ದರು.

About The Author