ಪರಿಸರ ಇಂಜಿನಿಯರ್ ವರ್ಗಾವಣೆಗೆ ಆಗ್ರಹ

ಶಹಾಪುರ : ನಗರಸಭೆಯಲ್ಲಿ ಪರಿಸರ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಹರೀಶ್ ಸಜ್ಜನ್ ರವರನ್ನು ವರ್ಗಾವಣೆಗೊಳಿಸುವಂತೆ ಪ್ರದೀಪ್ ಅಣಬಿ ಆಗ್ರಹಿಸಿದ್ದಾರೆ.

ಇಂದು ಜಿಲ್ಲಾಧಿಕಾರಿಗಳು ಮತ್ತು ನಗರಸಭೆಯ ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಮಾತನಾಡಿದ ಪ್ರದೀಪ್ ಅಣಬಿ, ಹರೀಶ್ ಸಜ್ಜನ್ ಹಲವಾರು ವರ್ಷಗಳಿಂದ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಘನ ತ್ಯಾಜ್ಯ ವಿಲೇವಾರಿ ಘಟಕ, ಸ್ವಚ್ಛ ಭಾರತ ಸೇರಿದಂತೆ ಹಲವು ಸರ್ಕಾರದ ಯೋಜನೆಗಳಲ್ಲಿ ಬ್ರಷ್ಟಾಚಾರಗೈದಿದ್ದು, ಪ್ರಭಾವಿ ವ್ಯಕ್ತಿಗಳ ಸಹಕಾರದಿಂದ ನಗರಸಭೆಯಲ್ಲಿಯೇ ಉಳಿದುಕೊಂಡಿದ್ದಾನೆ.

ಕೂಡಲೇ ಈತನ ಮೇಲೆ ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ಬೇರೆಡೆ ವರ್ಗಾಯಿಸುವಂತೆ ಆಗ್ರಹಿಸಿದರು.

Leave a Reply

Your email address will not be published. Required fields are marked *