ಆಶ್ರಯ ಮನೆಗಳ ಹಂಚಿಕೆಯ ವಿಡಿಯೋ ವೈರಲ್ : ಗೋನಾಲ ಪಿಡಿಓ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತ ಸಂಘ ಒತ್ತಾಯ

Yadagiri ವಡಗೇರಾ : ತಾಲೂಕಿನ ಗೋನಾಲ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಶಿವರಾಜ್ ಸಗರ ಎಂಬವರು ಆಶ್ರಯ ಮನೆಗಳ ಹಂಚಿಕೆ ಸಮಯದಲ್ಲಿ ಲಂಚ ಕೇಳಿರುವುದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಕೂಡಲೆ ಪಿಡಿಓ ಮೇಲೆ ಕ್ರಮಕೈಗೊಳ್ಳಬೇಕೆಂದು ರಾಜ್ಯ ರೈತ ಸಂಘ ಹಸಿರು ಸೇನೆ ವಾಸುದೇವ ಮೇಟಿ ಬಣ ವಡಗೇರಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಸರಕಾರ ಬಡವರಿಗಾಗಿ ಆಶ್ರಯ ಯೋಜನೆ ಮನೆಗಳು ನೀಡಿದೆ. ಆದರೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಲಂಚದ ಬೇಡಿಕೆ ಇಟ್ಟಿದ್ದು ತೀವ್ರ ಖಂಡನೀಯ.ಲಂಚದ ಹಣವನ್ನು ಜಿಲ್ಲಾ ಪಂಚಾಯತಿ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೂ ಕೊಡಬೇಕು ಎಂದು ವಿಡಿಯೋ ಸಂಭಾಷಣೆಯಲ್ಲಿ ಹೇಳಿರುವುದು ಸ್ಪಷ್ಟತೆಯಿಂದ ಕೂಡಿದೆ. ಮೇಲಾಧಿಕಾರಿಗಳು ಕೂಡ ಇದರಲ್ಲಿ ಶಾಮೀಲಾಗಿದ್ದಾರಾ ಎಂಬ ಅನುಮಾನವೂ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇಂಥಹ ತಪ್ಪಿತಸ್ಥ  ಅಧಿಕಾರಿ ವಿರುದ್ಧ ಮೇಲ್ಮಟ್ಟದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಪಿಡಿಓ ಅವರನ್ನು ಅಮಾನತು ಮಾಡಬೇಕು. ಒಂದು ವೇಳೆ ವಿಳಂಬ ಮಾಡಿದ್ದಲ್ಲಿ ವಡಗೇರಾ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ತಾಲೂಕು ಗೌರವಾಧ್ಯಕ್ಷ ಶರಣು ಜಡಿ, ಕ್ರಿಷ್ಣಾ ಟೇಲರ್,ಸತೀಶ್ ಪೂಜಾರಿ, ಹಳ್ಳೆಪ್ಪ ತೇಜೇರ, ಮಲ್ಲು ನಾಟೇಕರ್, ವೆಂಕಟೇಶ್ ಇಟಗಿ, ತಿರುಮಲ ಮುಸ್ತಾಜಿರ, ಮಹ್ಮದ್ ಹಾಗೂ ಇನ್ನಿತರ ಉಪಸ್ಥಿತರಿದ್ದರು.

About The Author