ಅದ್ದೂರಿಯಾಗಿ ಜರುಗಿದ ಹೆಮರಡ್ಡಿ ಮಲ್ಲಮ್ಮ ಜಯಂತಿ:ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಬದುಕು ಮಾನವ ಜನಾಂಗಕ್ಕೆ ಮಾದರಿ-ದರ್ಶನಾಪುರ

ಶಹಾಪುರ: ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮಾನವ ಜನಾಂಗಕ್ಕೆ ಆದರ್ಶವಾಗಿ ಬದುಕಿ ತೋರಿಸಿದಾಕೆ.ಅಂತವರ ಆದರ್ಶ ಇಂದಿನ ಸಮಾಜಕ್ಕೆ ಸ್ಪೂರ್ತಿಯಾಗಿದೆ ಹಾಗೂ ಮಾನವ ಕುಲಕ್ಕೆ ಮಾದರಿ ಎಂದು ಶಾಸಕರಾದ ಶರಣಬಸ್ಸಪ್ಪಗೌಡ ದರ್ಶನಾಪುರ ಹೇಳಿದರು.ನಗರದ ಆರಬೊಳ ಕಲ್ಯಾಣ ಮಂಟಪದಲ್ಲಿ ನಡೆದ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ಏರ್ಪಡಿಸಲಾಗಿದ್ದ  ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು. ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರು ಸಮಾನತೆಯ ಸಹಬಾಳ್ವೆ ಅಳವಡಿಸಿಕೊಂಡು ಮಾದರಿಯಾದರು.ರೆಡ್ಡಿ ಸಮಾಜದ ಅಭಿವೃದ್ದಿಗೆ ಮುಂದಾಗಿ ಬಡವರಿಗೆ, ನಿರ್ಗತಿಕರಿಗೆ, ಸಹಾಯ ಮಾಡುವದರೊಂದಿಗೆ ಸಹಕಾರಿಯಾಗಬೇಕು ಎಂದು ತಿಳಿಸಿದರು.ಇವರ ತತ್ವ ಸಿದ್ದಾಂತಗಳನ್ನು ಮೈಗೂಡಿಸಕೊಳ್ಳಬೇಕು.ಜಿಲ್ಲೆ,ತಾಲುಕಾ ಮಟ್ಟದಲ್ಲಿ  ಕಲ್ಯಾಣ ಮಂಟಪ ಮತ್ತು ದೇವಸ್ಥಾನಗಳನ್ನು ನಿರ್ಮಾಣ ಮಾಡುವದಕ್ಕೆ ಸಹಕಾರ ನೀಡಬೇಕು ಎಂದರು.

ಸಮಾರಂಭದ ಸಾನಿಧ್ಯವನ್ನು ಶ್ರೀ ಚರಬಸವೇಶ್ವರ ಸಂಸ್ಥಾನದ ಪಿಠಾಧಿಪತಿಗಳಾದ ವೇ.ಬಸ್ಸಯ್ಯ ಶರಣರು, ಶ್ರೀ ಫಕೀರೇಶ್ವರ ಮಠದ ಪೂಜ್ಯ ಗುರುಪಾದ ಮಹಾಸ್ವಾಮಿಗಳು ವಹಿಸಿದ್ದರು. ಶಾಸಕರಾದ ವೆಂಕಟರಡ್ಡಿ ಮುದ್ನಾಳ,ಮಾಜಿ ಶಾಸಕರಾದ ವೀರಬಸವಂತರೆಡ್ಡಿ ಮುದ್ನಾಳ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಚೆನ್ನಾರಡ್ಡಿ ತುನ್ನೂರ,, ನಗರಸಭೆ ಅಧ್ಯಕ್ಷರಾದ  ಕಮಲಬಾಯಿ ಚಂದ್ರಶೇಖರ ಲಿಂಗದಳ್ಳಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಡಾ.ಸುದತ್ ದರ್ಶನಾಪುರ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ರಾಯಪ್ಪಗೌಡ ಹುಡೆದ,ನ್ಯಾಯಾಧೀಶರಾದ ಸ್ನೇಹ ಪಾಟೀಲ್, ಗುರುನಾಥರಡ್ಡಿ ಪಾಟೀಲ ಹಳಿಸಗರ, ಡಾ.ಕಿರಣ ಜಕ್ಕರಡ್ಡಿಯವರನ್ನು ಸನ್ಮಾನಿಸಲಾಯಿತು.

ಡಾ.ಮಲ್ಲಣಗೌಡ ಉಕ್ಕಿನಾಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಸನಗೌಡ ಮರಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಅಮರಯ್ಯ ಜಾಲಿಮೆಂಚಿ ಕಾರ್ಯಕ್ರಮ ನಿರೂಪಿಸಿದರು.

About The Author