ಮಹಾಶೈವ ಧರ್ಮಪೀಠದಲ್ಲಿ 80 ನೆಯ ‘ಶಿವೋಪಶಮನ ಕಾರ್ಯ : ವಿಶ್ವೇಶ್ವರ ಶಿವನ ಭಕ್ತೋದ್ಧಾರ ಲೀಲಾ ಪ್ರಸಂಗಗಳು

ರಾಯಚೂರು  : ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ  ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ 2024 ರ ಫೆಬ್ರವರಿ 11 ರ ರವಿವಾರದಂದು 80 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ವಿಶ್ವೇಶ್ವರ ಶಿವನ ಕೃಪಾಕಟಾಕ್ಷವನ್ನರಸಿ ಶ್ರೀಕ್ಷೇತ್ರ ಕೈಲಾಸಕ್ಕೆ ಬಂದಿದ್ದ ಭಕ್ತರುಗಳಿಗೆ ಶಿವಾನುಗ್ರಹವನ್ನು ಕರುಣಿಸಿದರು.
     ಇಂದಿನ ಶಿವೋಪಶಮನ ಕಾರ್ಯದಲ್ಲಿ ವಿಶ್ವೇಶ್ವರ ಶಿವನ ಭಕ್ತೋದ್ಧಾರ ಲೀಲೆಯಾದ ಮೂರುಪ್ರಸಂಗಳು ಭಕ್ತಜನರಲ್ಲಿ ವಿಶ್ವೇಶ್ವರ ಶಿವನಲ್ಲಿ ಶ್ರದ್ಧೆ,ಭಕ್ತಿಗಳು ನೂರ್ಮಡಿಸಲು ಕಾರಣವಾದವು.ಮದುವೆಯಾಗಿಹತ್ತೊಂಬತ್ತು ವರ್ಷಗಳಾಗಿಯೂ ಮಕ್ಕಳಾಗದೆ ಇದ್ದ ಮಲದಕಲ್ಲಿನ ಚಿತ್ರಶೇಖರ ಪತ್ತಾರ,ಶ್ರೀದೇವಿ ದಂಪತಿಗಳು ಅವಳಿ ಹೆಣ್ಣುಮಕ್ಕಳನ್ನು ಪಡೆದದ್ದು, ಕಂಕಣಭಾಗ್ಯ ಕೂಡಿ ಬರದೆ ಕಂಡಕಂಡ ದೇವರು ಮಠ ಮಂದಿರಗಳನ್ನು ಸುತ್ತಿ ನಿರಾಶರಾಗಿದ್ದ ಸೈದಾಪುರದ ಗಂಗಾಧರಸ್ವಾಮಿ ಮತ್ತು ಶಿವಶರಣ ಹಡಪದ ಅವರು ವಿಶ್ವೇಶ್ವರ ಶಿವನ ಅನುಗ್ರಹದಿಂದ ಇಂದು ಮದುವೆಮಾಡಿಕೊಂಡು ನವಜೀವನಕ್ಕೆ ಕಾಲಿರಿಸಿದ ಪ್ರಸಂಗಗಳು ಮಹಾಶೈವ ಧರ್ಮಪೀಠದ ಭಕ್ತಸಮೂಹದಲ್ಲಿ ಚರ್ಚಿಸಲ್ಪಡುತ್ತಿದ್ದವು.
      ಗಬ್ಬೂರಿನ ಪಕ್ಕದ ಮಲದಕಲ್ ಗ್ರಾಮದವರಾದ ಚಿತ್ರಶೇಖರ ಅವರಿಗೆ ಮದುವೆಯಾಗಿ ಹತ್ತೊಂಬತ್ತು ವರ್ಷಗಳಾಗಿದ್ದರೂ ಮಕ್ಕಳಾಗಿರಲಿಲ್ಲ.ಎಲ್ಲ ಮಠ ಮಂದಿರ,ಸ್ವಾಮಿ ಸಂತರ ಬಳಿ ತಿರುಗಿ ನಿರಾಶರಾಗಿ ಕೊನೆಗೆ ವಿಶ್ವೇಶ್ವರ ಶಿವನಲ್ಲಿ ಶರಣು ಬಂದಿದ್ದರು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಮಹಾಶೈವ ಧರ್ಮಪೀಠದಲ್ಲಿ 2023 ರ ಫೆಬ್ರವರಿ 04 ನೇ ತಾರೀಖಿನ ರವಿವಾರದಂದು ನಡೆದಿದ್ದ 48 ನೆಯ ‘ ಶಿವೋಪಶಮನ ಕಾರ್ಯ’ ದಲ್ಲಿ ಚಿತ್ರಶೇಖರ ಪತ್ತಾರ -ಶ್ರೀದೇವಿ ದಂಪತಿಗಳಿಗೆ ಶಿವಾನುಗ್ರಹವನ್ನು ಕರುಣಿಸಿದ್ದರು.ನಿನ್ನೆ ಅಂದರೆ ಫೆಬ್ರವರಿ 10 ರಂದು ಶ್ರೀದೇವಿ ಅವರು ಇಲಕಲ್ಲಿನ ಹೆರಿಗೆ ಆಸ್ಪತ್ರೆಯಲ್ಲಿ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಾರೆ.ಮದುವೆಯಾಗಿ ಹತ್ತೊಂಬತ್ತು ವರ್ಷಗಳಾಗಿ ಮಕ್ಕಳಾಗದೆ ಪರಿತಪಿಸುತ್ತಿದ್ದ ಚಿತ್ರಶೇಖರ ಪತ್ತಾರ ಮತ್ತು ಶ್ರೀದೇವಿ ದಂಪತಿಗಳಿಗೆ  ವಿಶ್ವೇಶ್ವರ ಶಿವನು ತನ್ನ ಅನುಗ್ರಹನಿರೀಕ್ಷಿಸಿ ಮಹಾಶೈವ ಧರ್ಮಪೀಠಕ್ಕೆ ಬಂದ ಒಂದು ವರ್ಷದಲ್ಲಿಯೇ ಅವಳಿ ಮಕ್ಕಳನ್ನು ನೀಡಿ ಅವರ ಬದುಕಿನಲ್ಲಿ ಭರವಸೆ ತುಂಬಿ ತನ್ನ ಭಕ್ತೋದ್ಧಾರ ಲೀಲೆ ಮೆರೆದಿದ್ದಾನೆ.
        ಸೈದಾಪುರದ ಗಂಗಾಧರಸ್ವಾಮಿ ಮದುವೆಯಾಗದೆ ಪರಿತಪಿಸುತ್ತಿದ್ದನು.ವರನೋಡಿ ಹೋದವರು ಮದುವೆಯ ಪ್ರಸ್ತಾಪವನ್ನು ಒಪ್ಪುತ್ತಿರಲಿಲ್ಲ.ಡಿಸೆಂಬರ್ 2023 ರಲ್ಲಿ ಮಹಾಶೈವ ಧರ್ಮಪೀಠದ ವಿಶ್ವೇಶ್ವರ ಶಿವನ ಸನ್ನಿಧಿಗೆ ಬಂದು ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರಿಂದ ಶಿವಾಭಯಪಡೆದು ಇಂದು ಕಲಬುರ್ಗಿಯ ಶ್ರೀಮತಿ ಜಗದೇವಿ ಸಿದ್ದಯ್ಯಸ್ವಾಮಿ ಹಿರೇಮಠ ಬಿದನೂರು ಅವರ ಮಗಳಾದ ಭ್ಯಾಗ್ಯಶ್ರೀಯವರನ್ನು ಸೈದಾಪುರದ ಬಸವರಾಜಪ್ಪಗೌಡ ಐರೆಡ್ಡಿ ಕಲ್ಯಾಣಮಂಟದಲ್ಲಿ ಧರ್ಮಪತ್ನಿಯನ್ನಾಗಿ ಸ್ವೀಕರಿಸಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
    ಗಬ್ಬೂರಿನ ಶಿವಶರಣ ಹಡಪದ ಕೂಡ ವಧುನೋಡುತ್ತ ಕಾಲಕಳೆಯುತ್ತಿದ್ದ.ಆದರೆ ಕಂಕಣಬಲ ಕೂಡಿ ಬಂದಿರಲಿಲ್ಲ.2023 ರ ನವರಾತ್ರಿಯ ನಂತರ ಮಹಾಶೈವ ಧರ್ಮಪೀಠಕ್ಕೆ ಬಂದು ಪೀಠಾಧ್ಯಕ್ಷರಲ್ಲಿ ಶಿವಾಭಯ ಕೋರಿದ ಹದಿನೈದು ದಿನಗಳಲ್ಲೇ ನಿಶ್ಚಿತಾರ್ಥ ನಡೆದಿತ್ತು.ಇಂದು ಗಬ್ಬೂರಿನ ಮಹಾನಂದೀಶ್ವರ ದೇವಸ್ಥಾನದಲ್ಲಿ ಕೊಪ್ಪಳ ಜಿಲ್ಲೆಯ ಕಾರಟಗಿ ಗ್ರಾಮದ ಅಮರೇಶ ಹಡಪದ ಅವರ ಪುತ್ರಿ ರಾಜೇಶ್ವರಿಯನ್ನು ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿ ದಾಂಪತ್ಯಜೀವನಕ್ಕೆ ಕಾಲಿರಿಸಿದ್ದಾರೆ.
         ವಿಶ್ವೇಶ್ವರ ಶಿವನು ಮದುವೆಯಾಗದ ತರುಣ ತರುಣಿಯರಿಗೆ ಕಂಕಣಭಾಗ್ಯವನ್ನು ಕರುಣಿಸುತ್ತಿರುವುದನ್ನರಿತು ಇಂದು ಸಹ ಎಂಟ್ಹತ್ತು ಜನ ತರುಣರು ಮದುವೆಗೆ ಶಿವಾನುಗ್ರಹವನ್ನರಸಿ ಮಹಾಶೈವ ಧರ್ಮಪೀಠಕ್ಕೆ ಬಂದಿದ್ದರು.ವಿಶ್ವೇಶ್ವರ ಶಿವ ವಿಶ್ವೇಶ್ವರಿ ದುರ್ಗಾದೇವಿಯರ ನಿತ್ಯಪೂಜೆಗೆ ಅವಶ್ಯಕವಿರುವ ಜಲಾಭಿಷೇಕ ಕುಂಭ ಮತ್ತು ಪರಿಕರಗಳ ಕಾಣಿಕೆ ಸಮರ್ಪಿಸಿದ ಶಿವಕುಮಾರ ವಸ್ತಾರ ಅವರನ್ನು ಪೀಠಾಧ್ಯಕ್ಷರು ಶಿವಾನುಗ್ರಹಪೂರ್ವಕವಾಗಿ ಸನ್ಮಾನಿಸಿ,ಆಶೀರ್ವದಿಸಿದರು.
        ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ,ಮೂಲ ಕಾರ್ಯಕರ್ತ ಗೋಪಾಲ ಮಸೀದಪುರ,ದಾಸೋಹಸಮಿತಿಯ ಅಧ್ಯಕ್ಷ ಗುರುಬಸವ ಹುರಕಡ್ಲಿ,ಗಾಯತ್ರಿ ಪೀಠದ ಅಧ್ಯಕ್ಷ ಉದಯಕುಮಾರ ಪಂಚಾಳ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶರಣಗೌಡ ಹೊನ್ನಟಗಿ, ವಿರುಪಾಕ್ಷಪ್ಪಗೌಡ ಹೊನ್ನಟಗಿ, ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಸಿದ್ರಾಮಯ್ಯಸ್ವಾಮಿ ಹಳ್ಳಿ, ವೀರಭದ್ರಯ್ಯ ಸ್ವಾಮಿ ಹಳ್ಳಿ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ,ಮಲ್ಲಯ್ಯ ಹಿರೇಮಠ ಶಹಾಪುರ,ಜಗದೀಶರಾವ ಕಲ್ಬುರ್ಗಿ,ಯಲ್ಲಪ್ಪ ಕರಿಗಾರ,ಮನೋಜ ಧರಣಿ,ರಂಗನಾಥ ಮಸೀದಪುರ,ವೆಂಕಟೇಶ,ಮರಿಲಿಂಗ ಸುಂಕೇಶ್ವರಾಳ,ಶಿವಕುಮಾರ ವಸ್ತಾರ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರು ಉಪಸ್ಥಿತರಿದ್ದರು.

About The Author