ಭಾರತೀಯ ಸಂವಿಧಾನ ಅಶೋತ್ತರಗಳನ್ನು ಅರ್ಥೈಹಿಸಿಕೊಳ್ಳಬೇಕು —ತಹಶಿಲ್ದಾರ ಹಳ್ಳೆ ಅಭಿಮತ

ಶಹಾಪುರ : ಪ್ರಜಾಪ್ರಭುತ್ವದ ತಳಹದಿಯಲ್ಲಿ ವೈವಿಧ್ಯತೆಯಲ್ಲಿ ಏಕತೆಯ ರಾಷ್ಟ್ರವಾಗಿರುವ ಭಾರತ ದೇಶದ ಸಂವಿಧಾನದ ಅಶೋತ್ತರಗಳನ್ನು ಸರ್ವರು ಅರ್ಥೈಹಿಸಿಕೊಳ್ಳಬೇಕು.ಭಾರತ ರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ  ಸಂವಿಧಾನ ದೇಶದ ಪವಿತ್ರ ಮಹಾನ್ ಗ್ರಂಥವಾಗಿದೆ ಎಂದು ತಹಶಿಲ್ದಾರ ಉಮಾಕಾಂತ ಹಳ್ಳೆ ಅಭಿಪ್ರಾಯ ವ್ಯಕ್ತಪಡಿಸಿದರು.
     ಶಹಾಪುರ ನಗರದ ತಾಲುಕಾ ಆಡಳಿತ ಆಶ್ರಯದಲ್ಲಿ  ಸಿಪಿಎಸ್ ಶಾಲಾ ಮೈದಾನದಲ್ಲಿ ನಡೆದ ಸಂವಿಧಾನ ಜಾಗ್ರತಿ ಜಾಥಾ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಪ್ರತಿಯೊಂದು ಜೀವ ಸಂಕುಲಕ್ಕೂ ಅಧಿಕಾರದ ಹಕ್ಕು ನೀಡಿದ ಸಂವಿಧಾನದ ಪಿತಾಮಹ ಡಾ. ಬಾಬಾಸಾಹೇಬರು ನಮ್ಮಗಳ ಬಾಳಿಗೆ ಬೆಳಕಾಗಿದ್ದಾರೆ. ಅವರ ಮಾರ್ಗದಲ್ಲಿ ಮುನ್ನೆಡದುಕೊಂಡು ದೇಶದಲ್ಲಿ ಸಂವಿಧಾನಿಕ ಬದ್ದತೆಗೆ ಪಣತೊಡಬೇಕು ಎಂದು ಕರೆ ನೀಡಿದರು.ಪ್ರಥಮದಲ್ಲಿ ಸಂವಿಧಾನ ಪೀಠಿಕೆಯನ್ನು ಸರ್ವರು ಪ್ರತಿಜ್ಞಾ ಸ್ವೀಕಾರ ಮಾಡಿದರು.
ವೇದಿಕೆಯಲ್ಲಿ ತಾಪಂ.ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರೆದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಸಬಾ ಜಿಲಿಯನ್, ಬಿಆರ್ಸಿ ಶ್ರೀಮತಿ ರೇಣುಕಾ ಪಾಟೀಲ್, ತಾಲುಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ಧೆಶಕರಾದ ರಾಹುತಪ್ಪ ಹವಾಲ್ದಾರ, ಖಜಾನೆ ಇಲಾಖೆಯ ಸಹಾಯಕ ನಿರ್ಧೆಶಕರಾದ ಡಾ.ಮೋನಪ್ಪ ಶಿರವಾಳ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ರಾಯಪ್ಪಗೌಡ ಹುಡೆದ, ತಾಲೂಕು ಹಿಂದುಳಿದ ವರ್ಗಗಳ ಅಧಿಕಾರಿ ಚೆನ್ನಪ್ಪಗೋಳ, ಎಪಿಎಮ್ಸಿ  ಕಾರ್ಯದರ್ಶಿಗಳಾದ ಶಿವುಕುಮಾರ, ಅರಣ್ಯ ಇಲಾಖೆ ಅಧಿಕಾರಿ ಶಿವಾನಿ, ಸಿಡಿಪಿಓ ಮಲ್ಲಣ್ಣ ದೇಸಾಯಿ ಉಪಸ್ಥಿತರಿದ್ದರು.ವಿಶೇಷ ಉಪನ್ಯಾಸಕರಾಗಿ ಉಪನ್ಯಾಸಕರಾದ ಭೀಮಣ್ಣ ಅಂಚೆಸುಗೂರು, ಸಂವಿಧಾನ ಮತ್ತು ಡಾ.ಬಾಬಾಸಾಹೇಬರ ಕುರಿತು ಮಾತನಾಡಿದರು.  ಅನೇಕ ದಲಿತ ಮುಖಂಡರು, ದಲಿತಪರ ಸಾಮೂಹಿಕ ಸಂಘಟನೆಗಳ ಪಧಾಧಿಕಾರಿಗಳು, ಕಾರ್ಯಕರ್ತರು, ಶಾಲಾ ಶಿಕ್ಷಕರು, ವಿಧ್ಯಾರ್ಥಿಗಳು ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

About The Author