ಅನರ್ಹ ಫಲಾನುಭವಿಗಳನ್ನು ಆಯ್ಕೆ ಖಂಡಿಸಿ ಮನವಿ

ರಮೇಶ್ ಖಾನಾಪುರ

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಮಲದಕಲ್ ಗ್ರಾ.ಪಂ. ವ್ಯಾಪ್ತಿಯ ಎನ್ ಗಣೇಕಲ್ ಗ್ರಾಮದ ಭೂಮಿಯನ್ನು ಎನ್ ಗಣೇಕಲ್ ಗ್ರಾಮದಲ್ಲಿ ಅರ್ಹ ಫಲಾನುಭವಿಗಳಿದ್ದರು ನೀಲಗಲ್ ಗ್ರಾಮದ ಅನರ್ಹ ಫಲಾನುಭವಿಗಳನ್ನು ಪ್ರತಿ ಫಲಾನುಭವಿಗಳಿದ್ದರು ಒಂದು ಲಕ್ಷ ದಿಂದ ಎರಡು ಲಕ್ಷದ ವರೆಗೆ ವಸೂಲಿ ಮಾಡಿ ನಮ್ಮ ಗ್ರಾಮದ ಭೂಮಿಯನ್ನುಬೇರೆ ಗ್ರಾಮದವರಿಗೆ ಭೂ-ಒಡೆತನ ಯೋಜನೆಯಲ್ಲಿ ಮಂಜೂರಿ ಮಾಡಲು ಇಲಾಖೆ ಅಧಿಕಾರಿಗಳು ಈ ಗೋಲ್ ಮಾಲ್ ನಲ್ಲಿ ಶಾಮೀಲಾಗಿದ್ದು ಕೂಡಲೇ ನೀಲಗಲ್ ಫಲಾನುಭವಿ ಪಟ್ಟಿ ರದ್ದು ಪಡಿಸಿ ಎನ್ ಗಣೇಕಲ್ ಗ್ರಾಮದ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕೆಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಮುಖಂಡರು ಆದಿಜಾಂಭವ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿದೇರ್ಶಕರಿಗೆ ಮನವಿ ಪತ್ರ ಸಲ್ಲಿಸಿದರು.

ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿಯ ಮಲದಕಲ್ ಗ್ರಾಮ ಪಂ. ವ್ಯಾಪ್ತಿಯ ಎನ್ ಗಣೇಕಲ್ ಗ್ರಾಮದ ಸ.ನಂ.135 2 ಎಕರೆ 29 ಗುಂಟೆ ಹಾಗೂ ಸ.ನಂ 136+ 4 ಎಕರೆ 18 ಗುಂಟೆ ಭೂಮಿ ಭೂ-ಒಡೆತನ ಯೋಜನೆಯಲ್ಲಿ ಆದಿಜಾಂಭವ ಅಭಿವೃದ್ಧಿ ನಿಗಮಕ್ಕೆ ಮಾರಟ ಮಾಡಲು ಅರ್ಜಿ ಸಲ್ಲಿಸಿದ್ದು, ಎನ್ ಗಣೇಕಲ್ ಗ್ರಾಮದಿಂದ 1. ಕಿ.ಮಿ. ದೂರದಲ್ಲಿರುವ ಭೂಮಿಯನ್ನು 5 ಕಿ.ಮಿ. ದೂರ ಇರುವ ನೀಲಗಲ್ ಗ್ರಾಮದ ಅನರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಪ್ರತಿ ಫಲಾನುಭವಿಯಲ್ಲಿ 1 ರಿಂದ 2 ಲಕ್ಷದ ವರೆಗೆ ಹಣ ವಸೂಲಿ ಮಾಡಿ ನಮ್ಮ ಗ್ರಾಮದಲ್ಲಿ ಮಾದಿಗ ಸಮಾಜದ ಅರ್ಹ ಫಲಾನುಭವಿಗಳಿದ್ದರು ದಲ್ಲಾಳಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿ ಹಣ ವಸೂಲಿ ದಂದೆಯಲ್ಲಿ ತೊಡಗಿ ಈ ಗೋಲ್ ಮಾಲ್ ನಡೆಸಿದ್ದಾರೆ. ಈ ವರ್ತನೆಯನ್ನು ಮಾದಿಗ ಮೀಸಲಾತಿ ಹೋರಾಟ ಸಮಿತಿಯು ಬಲವಾಗಿ ಖಂಡಿಸುತ್ತೇವೆ. ಭೂ-ಒಡೆತನ ಯೋಜನೆಯಲ್ಲಿ ಅಕ್ರಮಕ್ಕೆ ಕಾರಣವಾಗಿರುವ ದಲ್ಲಾಳಿಗಳು ಹಾಗೂ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಅವರ ಮೇಲೆ ಕ್ರಿಮಿಲ್ ಪ್ರಕರಣ ದಾಖಲಿಸಿ ಗ್ರಾಮದ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಸೂಕ್ತ ನ್ಯಾಯ ಒದಗಿಸಬೇಕು ಇಲ್ಲದಿದ್ದರೆ ತಮ್ಮ ಕಾರ್ಯಾಲಯ ಮುಂದೆ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಏಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ನರಸಪ್ಪ ಎನ್.ಗಣೇಕಲ್, ತೂಕರಾಮ ಎನ್.ಗಣೇಕಲ್, ಅಮರೇಶ ಎನ್.ಗಣೇಕಲ್, ಬಸವಲಿಂಗ ಎನ್.ಗಣೇಕಲ್, ಸೇರಿದಂತೆ ಅನೇಕರಿದ್ದರು.

ನಮಗೆ ಯಾವುದೇ ಭೂಮಿ ಇಲ್ಲ ಸುಮಾರು ವರ್ಷಗಳಿಂದ ನಾವು ಕೂಲಿ ಮಾಡಿ ಬದುಕುತ್ತಿದ್ದೆವೆ ನಮ್ಮ ಸಮಾಜಕ್ಕೆ ಸರ್ಕಾರ ಭೂಮಿ ನೀಡಿಲ್ಲ ಆದರೆ ನಮ್ಮ ಗ್ರಾಮದ ಭೂಮಿ ಬೇರೆ ಊರಿನ ಅನರ್ಹ ಫಲಾನುಭವಿಗಳಿಗೆ ಅಧಿಕಾರಿಗಳು ಹಣದ ಆಸೆ ಪಟ್ಟು ಭೂಮಿ ಮಂಜೂರು ಮಾಡಲು ಮುಂದಾಗಿರುವುದು ತಪ್ಪು, ಕೂಡಲೇ ಅದನ್ನು ರದ್ದು ಪಡಿಸಿ ಮರು ನಮ್ಮ ಗ್ರಾಮದ ಸೂಕ್ತ ಫಲಾನುಭವಿಗಳನ್ನು ಆಯ್ಕೆ ಮಾಡಬೇಕೆಂದು ಆಗ್ರಹಿಸಿದರು.

ಗ್ರಾಮದ ಅರ್ಹ ಫಲಾನುಭವಿ
ಲಕ್ಷ್ಮೀ.