ಸಂವಿಧಾನ ಜಾಗೃತಿ ಜಾಥದ ಸ್ತಬ್ಧ ಚಿತ್ರದ ಮೆರವಣಿಗೆಯ ಯಶಸ್ವಿಗೆ ಸಹಕರಿಸಿ- ಮೈನುದ್ದೀನ

ಸುದ್ದಿ ; ರಮೇಶ್ ಖಾನಾಪುರ 

ದೇವದುರ್ಗ : ತಾಲೂಕಿನ ಗಬ್ಬೂರು ಗ್ರಾಮಕ್ಕೆ ಸಂವಿಧಾನ ಜಾಗೃತಿ ಜಾಥ ಆಗಮಿಸುವ ಅಂಗವಾಗಿ ಪೂರ್ವಭಾವಿ ಸಭೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಲ್ಲಮ್ಮ ಮನೋಹರ ಅಧ್ಯಕ್ಷತೆಯಲ್ಲಿ ಶನಿವಾರ ಗಬ್ಬೂರು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಚುನಾಯಿತ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಯಿತು.
ಸಂವಿಧಾನ ಜಾರಿಗೆ ಬಂದು 75 ನೇ ವರ್ಷ ಪ್ರಯುಕ್ತ ದಿನಾಂಕ 06.02.2024 ರಿಂದ 09.02.2024.ರ ವರೆಗೆ 4 ದಿನ ದೇವದುರ್ಗ ತಾಲೂಕಿನಲ್ಲಿ ಸಂಚರಿಸುತ್ತಿದ್ದು ಮೊದಲನೇ ದಿನ ಮಂಗಳವಾರ ಸಂಜೆ 6. ಗಂಟೆಗೆ 06.02.2024 ರಂದು ಗಬ್ಬೂರು ಗ್ರಾಮದಲ್ಲಿ ಚಾಲನೆ ನೀಡುವ ಮೂಲಕ ದೇವದುರ್ಗ ತಾಲೂಕಿಗೆ ಸ್ವಾಗತಿಸಲಾಗುತ್ತಿದೆ.
ಈ ರಥವು ಮೊದಲನೆಯ ದಿನ ಗಬ್ಬೂರು ಗ್ರಾಮದಲ್ಲಿ ವಾಸ್ತವ್ಯ ಇರುತ್ತದೆ.
ಪ್ರತಿ ದಿನ ಸಂವಿಧಾನ ರಥಕ್ಕೆ ಜಾಲನೆ ನೀಡುವ ಮೊದಲು ಸಂವಿಧಾನ ಪೀಠಿಕೆ ಓದುವುದರ ಮೂಲಕ ಚಾಲನೆ ನೀಡಬೇಕು ಹಾಗೂ ಸಂವಿಧಾನ ಜಾಗೃತಿ ಜಾಥದ ಯಶಸ್ವಿಗೆ ಪ್ರತಿಯೊಬ್ಬ ನಾಗರಿಕರು ಈ ಕಾರ್ಯಕ್ರಮಕ್ಕೆ ಪಕ್ಷತೀತವಾಗಿ ಕೈ ಜೋಡಿಸಬೇಕೆಂದರು ಮತ್ತು ವಿವಿಧ ಕಲಾವಿದರಿಂದ ಕಲಾ ನೃತ್ಯಗಳು, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಮೈನುದ್ದೀನ್ ಅವರು ಹೇಳಿದರು.

ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಲಿಂಗಪ್ಪ, ಪಿಯು ಕಾಲೇಜು ಪ್ರಿನ್ಸಿಪಲ್ ಜಗದೀಶ, ಅಂಗನವಾಡಿ ಸುಪ್ರವೇಜರ್ ಲತಾ, ವಿವಿಧ ಶಾಲೆಯ ಶಿಕ್ಷಕರು, ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆರು, ಅಂಗನವಾಡಿ ಕಾರ್ಯಕರ್ತರು ಗ್ರಾ.ಪಂ ಸದಸ್ಯರು, ಸ್ತ್ರೀ ಶಕ್ತಿ ಗುಂಪಿನ ಸದಸ್ಯರು. ಗಂಗಪ್ಪ ಸಿಂಗ್ರಿ, ಬಸವರಾಜ ಸೂರಿ, ಬಸವರಾಜ ಜಗ್ಲಿ, ಮುತ್ತುರಾಜ ಮ್ಯಾತ್ರಿ, ಮಾರ್ತಾಂಡ ಗಬ್ಬೂರು, ಸಂಘಟನೆಯ ಮುಖಂಡರು ಸೇರಿದಂತೆ ಅನೇಕರಿದ್ದರು.