ಜೆಸಿಬಿ ಮೂಲಕ ನರೇಗಾ ಕಾಮಗಾರಿ: ಲಕ್ಷಾಂತರ ರೂ. ದುರುಪಯೋಗ

ವರದಿ -ರಮೇಶ ಖಾನಾಪುರ 

ರಾಯಚೂರು: ರಾಜ್ಯದಲ್ಲಿ ಕೆಲವು ಕಡೆ ಬರಗಾಲ ಘೋಷಣೆಯಾಗಿದ್ದರಿಂದ ಸರ್ಕಾರ ಯಾರು ಕೂಡ ಕೂಲಿ ಕಾರ್ಮಿಕರು ಗುಳ್ಳೆ ಹೋಗಬಾರದೆಂದು ರಾಯಚೂರು ಜಿಲ್ಲೆಯಲ್ಲಿ ಮಾನವದಿನಗಳು ಸರ್ಕಾರ ಹೆಚ್ಚಾಗೆ ಮಾಡಿದೆ ಆದರೆ ಪಿಡಿಒ ನಿರ್ಲಕ್ಷ್ಯದಿಂದ ತಾಲೂಕಿನ ಜಾಗೀರವೆಂಕಟಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ರಘುನಾಥಹಳ್ಳಿ ಗ್ರಾಮದ ಸೀಮಾಂತರದಲ್ಲಿ ಕೃಷಿ ಹೊಂಡದ ಕಾಮಗಾರಿ ಕೂಲಿ ಕಾರ್ಮಿಕರ ಕೈಯಲ್ಲಿ ಮಾಡಿಸದೆ ನರೇಗಾ ಕಾಮಗಾರಿಯನ್ನು ಜೆಸಿಬಿ ಯಂತ್ರದ ಮೂಲಕ ಮಾಡಿಸಿ ಹಣ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಹಾಗೂ ಸುಲ್ತಾನಪೂರ ಗ್ರಾಮದ ಅಂಗನವಾಡಿ ಕಾಮಗಾರಿ ಅರೆಬರೆ ಕಾಮಗಾರಿಗೆ ಬೆಂಬಲಿಸುವ ಪಿಡಿಒ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದರು ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಕೃಷಿ ಹೊಂಡ ನಿರ್ಮಾಣ ಕಾಮಗಾರಿಯನ್ನು ಜೆಸಿಬಿ ಮೂಲಕ ನಡೆಸಲಾಗಿದೆ. ನರೇಗ ಯೋಜನೆಯ ಕಾಮಗಾರಿಗಳಿಗೆ ಒಂದು ದಿನ ಜನರನ್ನು ಬಳಸಿಕೊಂಡು ಅವರಿಗೆ ಕಡಿಮೆ ಹಣ ನೀಡಿ ಕಾಮಗಾರಿ ಸ್ಥಳದಲ್ಲಿ ಪೋಟೋ ತೆಗೆದು ಅಪ್ಲೋಡ್ ಮಾಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಜನರು ಆರೋಪಿಸಿದರು.

ಕೂಲಿ ಕಾರ್ಮಿಕರ ಹೆಸರಲ್ಲಿ ನರೇಗಾ ಯೋಜನೆ ಕಾಮಗಾರಿಗಳನ್ನು ಜೆಸಿಬಿ ಯಂತ್ರದ ಮೂಲಕ ಮಾಡಿಸಿ ನಂತರ ಇತರೆ ಜನರನ್ನು ಕಾಮಗಾರಿ ಸ್ಥಳದಲ್ಲಿ ನಿಲ್ಲಿಸಿ ಪೋಟೋ ತೆಗೆದು ಕೂಲಿ ಕಾರ್ಮಿಕರು ಕೆಲಸ ಮಾಡಿದ್ದಾರೆಂದು ಸುಳ್ಳು ದಾಖಲೆ ಸೃಷ್ಟಿಸಿ ಲಕ್ಷಾಂತರ ಹಣ ಅವ್ಯವಹಾರ ಮಾಡುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿದೆ. ಸರ್ಕಾರದ ನಿಯಮ ಉಲ್ಲಂಘಿಸಿ ಆದೇಶ ಗಾಳಿಗೆ ತೂರಿ ಕೂಲಿ ಕಾರ್ಮಿಕರಿಗೆ ಹಾಗೂ ಸರ್ಕಾರದ ಹಣ ಜೆಸಿಬಿ ಯಂತ್ರಗಳ ಮೂಲಕ ನರೇಗಾ ಕಾಮಗಾರಿ ಮಾಡಿಸಿ ದುರುಪಯೋಗ ಮಾಡಿಕೊಂಡ ಪಿಡಿಒ ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ಪ್ರಗತಿಪರ ದಲಿತ ಸಂಘಟನೆಯ ಮುಖಂಡರಾದ ಜಾಕೋಬ್ ಟೇಲರ್, ಮರೆಪ್ಪ ಮಲದಕಲ್, ಶಾಂತಕುಮಾರ ಹೊನ್ನಟಗಿ, ಮುತ್ತುರಾಜ ಮ್ಯಾತ್ರಿ, ಮಾರ್ತಾಂಡ, ತೂಕರಾಮ ಎನ್.ಗಣೇಕಲ್, ಬಸವಲಿಂಗ, ನರಸಪ್ಪ ಎನ್.ಗಣೇಕಲ್, ಸಂಗಪ್ಪ ಮ್ಯಾತ್ರಿ ಸೇರಿದಂತೆ ಅನೇಕರಿದ್ದರು.