ಗ್ರಾಮ ಪಂಚಾಯಿತಿ ನಿರ್ಲಕ್ಷ : ಆರಂಭವಾಗದ ಸ್ವಚ್ಛ ಭಾರತ ವಾಹನ

ವಡಗೇರಾ : ಗ್ರಾಮೀಣ ಪ್ರದೇಶಗಳನ್ನು ಸ್ವಚ್ಛವಾಗಿರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 5 ರಿಂದ 6 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ವಚ್ಛ ವಾಹಿನಿ ಎನ್ನುವ ವಾಹನವನ್ನು ಪ್ರತಿ ಗ್ರಾಮ ಪಂಚಾಯಿತಿಗೆ ಒದಗಿಸಲಾಗಿದೆ. ಆದರೆ ವಡಗೇರಾ ತಾಲೂಕಿನ ಹಯ್ಯಳ ಬಿ ಗ್ರಾಮದಲ್ಲಿ ಸ್ವಚ್ಛ ವಾಹಿನಿ ವಾಹನವು ನಿಂತಲ್ಲಿ ನಿಂತು ಗುಜರಿಗೆ ಹೋಗುವ ಸ್ಥಿತಿ ಬರಬಹುದು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಆರಂಭದಲ್ಲಿ ಒಂದೆರಡು ದಿನಗಳನ್ನು ಹೊರತುಪಡಿಸಿದರೆ ಇದುವರೆಗೂ ಒಂದು ದಿನವಾದರೂ ಗ್ರಾಮದೊಳಗೆ ಕಸ ತೆಗೆದುಕೊಂಡು ಹೋಗಲು ಸ್ವಚ್ಛ ವಾಹಿನಿ ಬಂದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಸ್ವಚ್ಛ ಭಾರತ್ ವಾಹನಕ್ಕೆ ಚಾಲಕರ ಕೊರತೆ ಇದೆ ಇರಲಾಗಿದ್ದು ಕೆಲವು ದಿನಗಳ ಹಿಂದೆ ಮಹಿಳೆಯನ್ನು ಚಾಲಕರನ್ನಾಗಿ ನೇಮಿಸಿಕೊಳ್ಳಲಾಗಿದೆ ಎನ್ನಲಾಗಿದ್ದು !, ಆದರೂ ವಾಹನವನ್ನು ಏಕೆ ಆರಂಭಿಸಿಲ್ಲ ಎನ್ನುವುದು ಪ್ರಶ್ನೆಯಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಆಡಳಿತದ ನಿರ್ಲಕ್ಷವೇ ಇದಕ್ಕೆ ಕಾರಣವೆಂದು ಹೇಳಲಾಗಿದೆ.
ಸರಕಾರದ ಹಲವಾರು ಯೋಜನೆಗಳು ಅಭಿವೃದ್ಧಿ ಮತ್ತು ಕಾರ್ಯಗತವಾಗದಿರಲು ಸರಕಾರಿ ಅಧಿಕಾರಿಗಳೇ ಕಾರಣ ಎನ್ನುವುದಕ್ಕೆ ಹಯ್ಯಳ ಬಿ ಗ್ರಾಮ ಪಂಚಾಯಿತಿಯೆ ಉದಾಹರಣೆ. ಕೆಲವು ದಿನಗಳಿಂದ ಸ್ವಚ್ಛ ಭಾರತ ವಾಹನದ ಬಗ್ಗೆ ಎಚ್ಚರಿಸಿದರೂ ಗ್ರಾಮ ಪಂಚಾಯಿತಿಯ ಆಡಳಿತದ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳ ದೀರ್ಘ ನಿರ್ಲಕ್ಷದಿಂದ ಸರಕಾರಕ್ಕೆ ಕೋಟಿಗಟ್ಟಲೆ ಹಣ ವ್ಯರ್ಥವಾಗುತ್ತಿದೆ. ಇದನ್ನು ವೀಕ್ಷಿಸಲು ಯಾವ ಜಿಲ್ಲಾ ಮಟ್ಟದ ತಾಲೂಕು ಮಟ್ಟದ ಅಧಿಕಾರಿಗಳು ಬಾರದ ಕಾರಣ ಗ್ರಾಮೀಣ ಪ್ರದೇಶದ ಆಡಳಿತ ವ್ಯವಸ್ಥೆ ಹೇಳಿದಂತೆ ಕೇಳುವಂತಾಗಿದೆ. ಗ್ರಾಮೀಣ ಭಾಗದಲ್ಲಿ ರಸ್ತೆಗೆ ಮೇಲೆ ಕಸ ಹಾಕುತ್ತಿದ್ದಾರೆ. ಚರಂಡಿಗಳು ಕಸದಿಂದ ತುಂಬಿ ತುಳುಕುತ್ತಿವೆ. ಅದನ್ನು ಸ್ವಚ್ಛವಗೊಳಿಸಲು ಸರಕಾರ ಈ ಮಹತ್ವದ ಯೋಜನೆ ಜಾರಿಗೆ ತಂದಿದೆ. ಆದರೆ ಗ್ರಾಮ ಪಂಚಾಯಿತಿಯ ನಿರ್ಲಕ್ಷದಿಂದ ಸರಕಾರದ ಯೋಜನೆಗಳು ನಿಷ್ಕ್ರಿಯವಾಗಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

About The Author