ಜಾತಿ ಆಧಾರಿತ ಜಯಂತಿಯಿಂದ ಸಮಾಜ ಸುಧಾರಿಸಲು ಅಸಾಧ್ಯ : ನಾರಾಯಣ ಸ್ವಾಮಿ

ಶಹಾಪುರ:ಜಾತಿ ಆಧಾರಿತ ಜಯಂತಿಯಿಂದ ಸಮಾಜ ಸುಧಾರಿಸಲು ಅಸಾಧ್ಯ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಎ.ನಾರಾಯಣಸ್ವಾಮಿಯವರು ಹೇಳಿದರು.ತಾಲೂಕು ಶಿವಶರಣ ಮಾದರ ಚೆನ್ನಯ್ಯನವರ 979 ನೇ ಜನ್ಮದಿನ ಹಾಗೂ ಡಾ. ಬಾಬು ಜಗಜೀವನ್ ರಾಮಂ ರವರ 115ನೇ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮತದಾನದ ಅರಿವು, ಭರವಸೆಯ ಮಾತುಗಳಿಂದ ಪ್ರಗತಿಯು ಸಾಧ್ಯವಿಲ್ಲ. ಮತದಾನದ ಮೌಲ್ಯವನ್ನು ಅರಿತುಕೊಳ್ಳಬೇಕಿದೆ.ಇದರಿಂದ ಶೋಷಿತ ಜನಾಂಗದವರು ದುರಾಸೆಗೆ ಮರುಳಾಗುತ್ತಿದ್ದಾರೆ. ಮತದಾನವನ್ನು ನಾವು ಮಾರಿಕೊಳ್ಳುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಿದಂತೆ ಎಂದು ಹೇಳಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಸಿದ್ದಬಸವ ಕಬೀರಾನಂದ ಸ್ವಾಮಿಗಳು ವಹಿಸಿದ್ದರು.ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಕುಡಿಯುವ ನೀರು ಒಳಚರಂಡಿ ಮಂಡಳಿ ನಿಗಮದ ಅಧ್ಯಕ್ಷರು ಸುರಪುರದ ಶಾಸಕರಾದ ರಾಜುಗೌಡರು ಮಾತನಾಡುತ್ತಾ,ಸಮಾಜದಲ್ಲಿ ಒಡಕುಂಟು ಮಾಡದೆ ಸಂಘಟಿತ ಮನೋಭಾವನೆಗಳನ್ನು ಬೆಳಸಿಕೊಳ್ಳಬೇಕು.ಸಮಾಜದಲ್ಲಿ ಮೇಲು ಕೀಳು ಎನ್ನುವ ಕಿಳಿರಿಮೆ ಬೇಡ.ಪಾಲಕರು ದೇವರಿಗೆ ಹರಕೆ ಹೊರುವ ಬದಲು ಮಕ್ಕಳಿಗೆ ಶಿಕ್ಷಣ ಕಲಿಸಿ.ಮಕ್ಕಳು ಅಕ್ಷರಸ್ಥರಾದಲ್ಲಿ ಕುಟುಂಬ ಸುರಕ್ಷಿತವಾಗಿರುತ್ತದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರು ಕೆಪಿಸಿಸಿ ಉಪಾಧ್ಯಕ್ಷರಾದ ಆರ್,ಬಿ ತಿಮ್ಮಾಪುರಿ ಮಾತನಾಡುತ್ತಾ ಶೋಷಿತ ಸಮಾಜದ ಬಹುದಿನದ ಬೇಡಿಕೆಯಾದ ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೊಳಿಸಬೇಕು ಎಂದರು.ಶಾಸಕರಾದ ಶರಣಬಸಪ್ಪ ಗೌಡ ದರ್ಶನಾಪುರ,ಹೈಕೋರ್ಟ ವಕೀಲರಾದ ಪಾವಗಡದ ರಾಮು, ಮಾಜಿ ಶಾಸಕರಾದ ಗುರುಪಾಟೀಲ ಶಿರವಾಳ, ಬಿಜೆಪಿ ನಾಯಕರಾದ ಅಮೀನರಡಿ ಯಾಳಗಿ, ಹನುಮೇಗೌಡ ಬಿರನಕಲ್,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮರಿಗೌಡ ಹುಲಕಲ್, ಜಯಂತೋತ್ಸವ ಸಮಿತಿ ಅಧ್ಯಕ್ಷರಾದ ರುದ್ರಪ್ಪ ಹುಲಿಮನಿ ಅಧ್ಯಕ್ಷತೆ ವಹಿಸಿದ್ದರು.ಸಿಂಡಕೆಟ್ ಸದಸ್ಯರಾದ ಡಾ,ಧರ್ಮಣ್ಣ ಬಡಿಗೇರ, ಜಿಲ್ಲಾ ವಕ್ತಾರರಾದ ಮಲ್ಲಣ್ಣ ಹುಳುಂಡಿಗೇರಿ ಗೋಗಿ. ಭೀಮರಾಯ ಕದರಾಪುರ, ಶಿವುಕುಮಾರ ದೊಡಮನಿ ಇತರರು ಇದ್ದರು.

About The Author