ಡಿಡಿಯು ಕಾನ್ವೆಂಟ್ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ

ಶಹಾಪುರ : ನಗರದ ಡಿಡಿಯು ಶಿಕ್ಷಣ ಸಂಸ್ಥೆಯಾದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುವ ಡಿಡಿಯು ಕಾನ್ವೆಂಟ್ ಸ್ಕೂಲ್ ನಲ್ಲಿ ವಿಜ್ಞಾನ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ: ಭೀಮಣ್ಣ ಮೇಟಿ ಉದ್ಘಾಟಿಸಿದರು. ಇಂದಿನ ಆಧುನಿಕ ಯುಗದಲ್ಲಿ ವಿಜ್ಞಾನದ ಪಾತ್ರ ಬಹುಮುಖ್ಯವಾಗಿದೆ.ಅನೇಕ ವಿಜ್ಞಾನದ ಮಾದರಿಗಳನ್ನು ವೀಕ್ಷಿಸಿ ಅದರ ಪರಿಪೂರ್ಣ ಜ್ಞಾನವನ್ನು ಪಡೆದುಕೊಳ್ಳಬೇಕು. ಭಾರತದ ಉಜ್ವಲ ಭವಿಷ್ಯಕ್ಕಾಗಿ ಮಕ್ಕಳು ಮಾಡಿದ ಮಾದರಿಗಳು ಗುರುತಿಸುವಂತಾಗಲಿ.ದೊಡ್ಡ ದೊಡ್ಡ ವಿಜ್ಞಾನಿಗಳಾಗಿ. ನಮ್ಮ ಸಂಸ್ಥೆಯಿಂದ  ಕೊಡುಗೆ ನೀಡಲಿ ಎಂದು ಹಾರೈಸಿದರು.
 ಸಂಸ್ಥೆಯ ಕಾರ್ಯದರ್ಶಿಗಳಾದ ದೇವೇಂದ್ರಪ್ಪ ಮೇಟಿ ಮಾತನಾಡಿ ನಮ್ಮ ಸಂಸ್ಥೆಯು ಶೈಕ್ಷಣಿಕವಾಗಿ ಉನ್ನತ ಮಟ್ಟಕ್ಕೆ ಬೆಳೆಯಲು ಮಕ್ಕಳು ಮಾಡಿರುವ ವಿಜ್ಞಾನದ ಮಾದರಿಗಳೇ ಸಾಕ್ಷಿ ಎಂದು ಹೇಳಿದರು.
 ಶಾಲೆಯ ಮುಖ್ಯೋಪಾಧ್ಯಾಯರಾದ ಜಸ್ಟಿನ್,ಮಹಾನಂದ ,ಸಲೀನ,ಭೀಮಲ್, ಮಂಜುಳಾ, ಅಕ್ಕಮಹಾದೇವಿ,ರಹಮಾನ್,ಕಲಾವತಿ,ಸ್ನೇಹ,ವಿಶ್ವಾರಾಧ್ಯ,ವಿಧ್ಯಾ,ಸುನೀಲ್,ಸೂರ್ಯಕಾಂತಿ, ಶ್ರೀನಿವಾಸ,ರಾಜೇಶ, ಜ್ಯೋತಿ, ಸಹ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಮಾಡಿದ ವಿಜ್ಞಾನ ಪ್ರದರ್ಶನಗಳನ್ನು ಪೋಷಕರು ಬಂದು ಮಕ್ಕಳು ಮಾಡಿರುವ ಮಾದರಿಗಳನ್ನು ವೀಕ್ಷಿಸಿದರು.

About The Author