ನಮ್ಮ ಕರ್ನಾಟಕ ಸೇನೆ ಸ್ಥಾಪನೆಯಾಗಿ ಒಂದು ವರ್ಷ : ಜ. 28ರಂದು ಅದ್ದೂರಿ ಕಾರ್ಯಕ್ರಮ : ಸಾಧಕರಿಗೆ ಸನ್ಮಾನ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ

ಶಹಾಪುರ : ಬೆಂಗಳೂರಿನ ಗಾಯತ್ರಿ ವಿಹಾರ ಗೇಟ್ ನಂ. ನಾಲ್ಕು ಅರಮನೆ ಮೈದಾನದಲ್ಲಿ ಬಸವರಾಜ ಪಡಕೋಟೆಯವರ ನೇತೃತ್ವದಲ್ಲಿ ನಮ್ಮ ಕರ್ನಾಟಕ ಸೇನೆ ಕನ್ನಡಪರ ಸಂಘಟನೆ ಸ್ಥಾಪನೆಯಾಗಿ ಒಂದು ವರ್ಷ ಪೂರೈಸಿದ ನಿಮಿತ್ತ ಅದ್ದೂರಿಯಾಗಿ ಕಾರ್ಯಕ್ರಮ ನೆರವೇರಲಿದ್ದು ರಾಜ್ಯದ ಕನ್ನಡ ಪರ ಸಂಘಟನೆಗಳು ಗಣ್ಯ ವ್ಯಕ್ತಿಗಳು ರಾಜಕೀಯ ಮುಖಂಡರು ಸಾಧಕರು ಪಾಲ್ಗೊಳ್ಳಲಿದ್ದು ಜೀ-ಕನ್ನಡ ಮತ್ತು ಕಲರ್ಸ್ ಕನ್ನಡದಲ್ಲಿ ಹೆಸರುವಾಸಿಯಾದ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ನಮ್ಮ ಕರ್ನಾಟಕ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಬಸವರಾಜ ಪಡುಕೊಟೆ ತಿಳಿಸಿದರು.

ನಮ್ಮ ಕರ್ನಾಟಕ ಸೇನೆ ಒಂದು ಕೂಸು. ಇದನ್ನು ಬೆಳೆಸಿರುವವರು ಬೆಳೆಸುತ್ತಿರುವವರು ರಾಜ್ಯದ ಜನತೆ. ಕನ್ನಡಪರರು. ಒಂದು ವರ್ಷದಲ್ಲಿ ನಾವು ಹಲವಾರು ಹೋರಾಟಗಳನ್ನು ಮಾಡಿದ್ದೇವೆ. ರಾಜ್ಯ, ಜಿಲ್ಲೆಯಾದ್ಯಂತ ಸಂಘಟನೆ ಮಾಡಿದ್ದೇವೆ. ನಮ್ಮ ಸ್ಲೋಗನ್ ” ಕನ್ನಡವೇ ಕಾಯಕ– ಕನ್ನಡವೇ ಕೈಲಾಸ ” ಎಂದಿದೆ.ಕನ್ನಡಕ್ಕೆ ನಮ್ಮ ಮೊದಲ ಆದ್ಯತೆ ಎಂದು ತಿಳಿಸಿದರು.

ಮೊದಲ ವರ್ಷದಲ್ಲಿ ನಮ್ಮ ಕರ್ನಾಟಕ ಸೇನೆಯ ಹೋರಾಟದ ಹಾದಿ.

* ಮಹಾರಾಷ್ಟ್ರ ಬ್ಯಾಂಕ್ ಮುತ್ತಿಗೆ,
*ಮೆಟ್ರೋ ಕಾಮಗಾರಿ ನಡೆಯುವ ಸಂದರ್ಭದಲ್ಲಿ ನಡೆದ ದುರ್ಘಟನೆಯಲ್ಲಿ ಸಾವನ್ನಪ್ಪಿದ ತಾಯಿ ಮತ್ತು ಮಗುವಿನ
ಸಂಬಂಧಿಕರಿಗೆ ಪರಿಹಾರ ನೀಡಲು ಹೋರಾಟ
* ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಚಾಲನೆ ರದ್ದು ಮಾಡಿದ ಸಂದರ್ಭದಲ್ಲಿ ಹೋರಾಟ ಮಾಡಿ ಚಾಲನೆಗೆ ಪರವಾನಿಗೆ ಅನುಮತಿ ಕೊಡಿಸಲಾಗಿದೆ.
” ಕನ್ನಡ ಭಾಷೆ ಬಳಸದೆ ಇದ್ದದ್ದಕ್ಕೆ ಮಸಿ ಬಳಿದು ಹೋರಾಟ ಮಾಡಲಾಗಿದೆ.
* ಕಟ್ಟಡ ಕಾರ್ಮಿಕರಿಗೆ ದುರ್ಘಟನೆ ನಡೆದ ಸಂದರ್ಭದಲ್ಲಿ ಪರಿಹಾರ ವಿತರಣೆ ಮಾಡಲಾಗಿದೆ
* ಕಾಟನ್ ಪೇಟೆಯಲ್ಲಿ ಕಾರ್ಮಿಕರ ಮಗು ಬ್ಯಾಂಕಿನಲ್ಲಿ ಬಿದ್ದು ಸಾವನ್ನಪ್ಪಿದ ಸಂದರ್ಭದಲ್ಲಿ 7.5 ಲಕ್ಷ ಪರಿಹಾರ ವಿತರಿಸಲಾಗಿದೆ.
* ಬೆಂಗಳೂರು ನಗರ ಹೆಬ್ಬಾಳದಲ್ಲಿ ಸಿಲಿಂಡರ್ ಸ್ಫೋಟದಿಂದ 12 ವರ್ಷ ಬಾಲಕ ಪೋಷಕರಿಗೆ ಪರಿಹಾರ ನೀಡಲಾಗಿದೆ
* ವಿಶ್ವ ಬಾಲ ಕಾರ್ಮಿಕರ ಪದ್ಧತಿ ವಿರೋಧಿಸಿ ಹೋರಾಟ ಮಾಡಲಾಗಿದೆ.
* ಕರ್ನಾಟಕ ರಾಜ್ಯದಲ್ಲಿ ಅನೇಕ ತಾಲೂಕು ಮತ್ತು ಜಿಲ್ಲೆಗಳಲ್ಲಿ ರಸ್ತೆ ವಿದ್ಯುತ್ ಸಂಪರ್ಕದಲ್ಲಿ ಹೋರಾಟ ಮಾಡಲಾಗಿದೆ
* ಪುಲಕೇಶಿ ನಗರದಲ್ಲಿ ಸ್ವಾತಂತ್ರ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಪುಸ್ತಕ ಬ್ಯಾಗ್ ವಿತರಣೆ ಮಾಡಲಾಗಿದೆ.
* ಕಲಬುರ್ಗಿಯ ನೂತನ ಜಿಲ್ಲಾ ಕಚೇರಿಗೆ ಉದ್ಘಾಟನಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ.
* ಮಾಲೂರು ತಾಲೂಕು ಕೋಲಾರ ಜಿಲ್ಲೆಯಲ್ಲಿ ರೈತಪರ ಹೋರಾಟ.

ಜನವರಿ 28ರಂದು ನಡೆಯುವ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ನಮ್ಮ ಕರ್ನಾಟಕ ಸೇನೆಯ ಅಧ್ಯಕ್ಷರಾದ ನಾನು ಬಸವರಾಜ ಪಡ್ಕೋಟೆಯವರು ಅಧ್ಯಕ್ಷತೆ ವಹಿಸುತ್ತೇವೆ.

ಖ್ಯಾತ ಸಂಖ್ಯಾಶಾಸ್ತ್ರಜ್ಞರಾದ ಶ್ರೀ ಮಹರ್ಷಿ ಜಯ ಶ್ರೀನಿವಾಸನ್ ಗುರೂಜಿಯವರು ಸೇರಿದಂತೆ ಜಗದ್ಗುರು ವೇದಾಂತಚಾರ್ಯ ಪರಮಪೂಜ್ಯ ಮಂಜುನಾಥ ಭಾರತಿ ಸ್ವಾಮೀಜಿ ಗೋಸಾಯಿ ಮಹಾಸಂಸ್ಥಾನ ಮಠ ಶ್ರೀ ಭವಾನಿ ದತ್ತಪೀಠ ಗವಿಪುರ ಬೆಂಗಳೂರು, ಪರಮಪೂಜ್ಯ ಆದಿ ಅಡವಿಲಿಂಗ ಮಹಾರಾಜರು ಆದಿಮೌನೇಶ್ವರ ವೀರಗೋಟ್ಟ ದೇವದುರ್ಗ, ಪರಮಪೂಜ್ಯ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಕೈಲಾಸ ಆಶ್ರಮ ಹೋತಪೇಟೆ ಶಹಪುರ, ಪರಮಪೂಜ್ಯ ಶ್ರೀ ವರಲಿಂಗ ಸ್ವಾಮೀಜಿ ಪುಣ್ಯಕೋಟಿ ಆಶ್ರಮ ಗೊರವಗುಂಡಗಿ ಯಡ್ರಾಮಿ, ಪರಮಪೂಜ್ಯ ಶ್ರೀ ಮಲ್ಲಿಕಾರ್ಜುನ ಮುತ್ಯಾ ಮಹಲರೋಜಾ ಶಹಪುರ,ಪರಮಪೂಜ್ಯ ಮೌಲಾನ ಸೂಫಿ ವಾಲಿಬಾ ಖಾದ್ರಿ ರಾಜ್ಯಾಧ್ಯಕ್ಷರು ಅಖಿಲ ಕರ್ನಾಟಕ ಸೂಫಿ ಸಂತರು ಸಂಘ ಸಾನಿಧ್ಯ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಅಶ್ವಥ್ ನಾರಾಯಣ,ಮಾಜಿ ಶಾಸಕರಾದ ನರಸಿಂಹ ನಾಯಕ ರಾಜುಗೌಡ ಹಾಗೂ ಪಿ ಸಿ ಮೋಹನ ಲೋಕಸಭಾ ಸದಸ್ಯರು ಬೆಂಗಳೂರು, ಶಿವರಾಜ ಪಾಟೀಲ್ ಶಾಸಕರು ರಾಯಚೂರು ನಗರ, ಅರವಿಂದ್ ಲಿಂಬಾವಳಿ ಮಾಜಿ ಸಚಿವರು, ಗಾಲಿ ಜನಾರ್ದನ ರೆಡ್ಡಿ ಶಾಸಕರು, ಕಟ್ಟಾ ಸುಬ್ರಮಣ್ಯನಾಯ್ಡು ಮಾಜಿ ಸಚಿವರು, ಮುನಿಸ್ವಾಮಿ ಸಂಸದರು ಕೋಲಾರ,ತಾರಅನುರಾಧ ವಿಧಾನ ಪರಿಷತ್ ಸದಸ್ಯರು, ಭಾಸ್ಕರ್ ರಾವ್ ಬಿಜೆಪಿ ಮುಖಂಡರು, ಎಂಟಿಬಿ ನಾಗರಾಜ್ ಮಾಜಿ ಸಚಿವರು, ಬೈರತಿ ಬಸವರಾಜ ಶಾಸಕರು, ಮಾನಪ್ಪ ವಜ್ಜೆಲ್ ಶಾಸಕರು, ವೈಸ್ನಾಥ್ ಬಿರಾದಾರ್ ಚಲನಚಿತ್ರ ನಟರು, ಕಿರಣ್ ರೆಡ್ಡಿ ಸಮಾಜ ಸೇವಕ, ಅಖಂಡ ಶ್ರೀನಿವಾಸ ಮೂರ್ತಿ ಮಾಜಿ ಸಚಿವ,ಅಮೀನ ರೆಡ್ಡಿ ಯಾಳಗಿ ಜಿಲ್ಲಾಧ್ಯಕ್ಷರು ಬಿಜೆಪಿ ಘಟಕ ಯಾದಗಿರಿ, ಸುರೇಶ ಸಜ್ಜನ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರು ಕಲಬುರ್ಗಿ, ನಿರಂಜನ ನಿರ್ದೇಶಕರು ಮಣಿಪಾಲ ಆಸ್ಪತ್ರೆ, ಜಯಶಂಕರ ಮ್ಯಾನೇಜರ್ ಮಣಿಪಾಲ ಆಸ್ಪತ್ರೆ, ರವಿಶಂಕರ ವಕೀಲರು ಉಚ್ಚ ನ್ಯಾಯಾಲಯ, ಕೆ ಜಿ ಹನುಮಂತಯ್ಯ ಸಮಾಜಸೇವಕ, ಗೌತಮ ಜೈನ್ ಮಾಜಿ ಮಹಾಪೌರರು ಬಿಬಿಎಂಪಿ, ಹೇಮಲತಾ ಅಕ್ಕನನಮನೆ ರಾಜ್ಯಾಧ್ಯಕ್ಷರು ಮಹಿಳಾ ಶಕ್ತಿ ಘಟಕ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ, ಭೀಮಾಶಂಕರ ಪಾಟೀಲ್ ರಾಜ್ಯಾಧ್ಯಕ್ಷರು ಯುವ ಘಟಕ ಕಲ್ಯಾಣ ರಾಜ್ಯ ಪ್ರಗತಿಪಕ್ಷ, ಎಸ್ ರಮೇಶ್ ಬಿಜೆಪಿ ಮುಖಂಡರು ಎಚ್ ಎಂ ಎಲ್, ಟೆಂಟ್ ರಮೇಶ್ ಬಿಬಿಎಂಪಿ ಮಾಜಿ ಸದಸ್ಯರು, ಪ್ರಕಾಶ್ ಅಂಗಡಿ ಅಧ್ಯಕ್ಷರು ಸಗರನಾಡು ಸೇವಾ ಪ್ರತಿಷ್ಠಾನ.

ಅತಿಥಿಗಳಾಗಿ ವಾಟಾಳ್ ನಾಗರಾಜ್ ಹಿರಿಯ ಕನ್ನಡಪರ ಹೋರಾಟಗಾರರು ಕನ್ನಡ ಚಳುವಳಿ ವಾಟಾಳ್ ಪಕ್ಷ ಅಧ್ಯಕ್ಷರು, ಸಾರಾ ಗೋವಿಂದು ರಾಜ್ಯಾಧ್ಯಕ್ಷರು ಅಖಿಲ ಕರ್ನಾಟಕ ಡಾ. ರಾಜಕುಮಾರ ಅಭಿಮಾನಿಗಳ ಸಂಘ, ಕೆ ಆರ್ ಕುಮಾರ್ ರಾಜ್ಯಾಧ್ಯಕ್ಷರು ಕನ್ನಡ ಸೇನೆ, ಪಾಲನೆತ್ರ ಅಧ್ಯಕ್ಷರು ಕರ್ನಾಟಕ ವಿಚಾರ ವೇದಿಕೆ, ರಮೇಶ್ ಗೌಡ ರಾಜ್ಯಾಧ್ಯಕ್ಷರು ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ಶಿವರಾಮೇಗೌಡ ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ), ಪ್ರವೀಣ್ ಕುಮಾರ್ ಶೆಟ್ಟಿ ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಕೃಷ್ಣ ಕನ್ನಡಪರ ಹೋರಾಟಗಾರರು, ಗುಣರಂಜನ್ ಶೆಟ್ಟಿ ಕರ್ನಾಟಕ ರಾಜ್ಯ ಕುಸ್ತಿ ಅಸೋಸಿಯೇಷನ್ ಸಮಿತಿ ಅಧ್ಯಕ್ಷರು, ಡಿ ಎನ್ ಜಗದೀಶ್ ರಾಜ್ಯಾಧ್ಯಕ್ಷರು ಜಯ ಕರ್ನಾಟಕ, ಎನ್ ಎಂ ಸುರೇಶ್ ಅಧ್ಯಕ್ಷರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ರಘು (ಡಿಎಸ್ಎಸ್) ದಲಿತ ಸಂಘರ್ಷ ಸಮಿತಿ (ರಘುಬಣ), ಹೆಚ್ ಎನ್ ದೀಪಕ್ ರಾಜ್ಯಾಧ್ಯಕ್ಷರು ಕರುನಾಡ ವಿಜಯ ಸೇನೆ,ಕೆಸಿ ಮೂರ್ತಿ ರಾಜ್ಯಾಧ್ಯಕ್ಷರು ಕನ್ನಡ ಕರ್ನಾಟಕ ರಕ್ಷಣಾ ವೇದಿಕೆ, ಎನ್ ಮೂರ್ತಿ ಡಿಎಸ್ಎಸ್ ದಲಿತ ಸಂಘರ್ಷ ಸಮಿತಿ )ಎನ್ ಮೂರ್ತಿ ಬಣ), ಹೂಡಿ ರಾಮಚಂದ್ರಪ್ಪ ರಾಜ್ಯಾಧ್ಯಕ್ಷರು ಭಾರತೀಯ ಸೇವಾ ಸಮಿತಿ, ಪಿ ಮೂರ್ತಿ ರಾಜ್ಯಾಧ್ಯಕ್ಷರು ಅಂಬೇಡ್ಕರ್ ಸೇನೆ ,ವೀರಕಪುತ್ರ ಶ್ರೀನಿವಾಸ್ ರಾಜ್ಯಾಧ್ಯಕ್ಷರು ವಿಷ್ಣು ಸೇನಾ ಸಮಿತಿ, ಕಮಲೇಶ್ ಪಡುತ್ತಾರೆ ವಿ ಎಸ್ ಎಸ್ ಸೇನೆ ರಾಜ್ಯಧ್ಯಕ್ಷರು, ಹರೀಶ್ ಭೈರಪ್ಪ ರಾಜ್ಯಾಧ್ಯಕ್ಷರು ಕರ್ನಾಟಕ ರಣಧೀರ ಪಡೆ, ರೂಪೇಶ್ ರಾಜಣ್ಣ ಯುವ ಕರ್ನಾಟಕ ವೇದಿಕೆ (ಬಿಗ್ ಬಾಸ್ ಫೆನಾಲಿಸ್ ಸ್ಪರ್ಧಿ), ಲಯನ್ ಡಾ. ಕೆ ವಿ ಬಾಲಕೃಷ್ಣ ರಾಜ್ಯಾಧ್ಯಕ್ಷರು ದಲಿತ ಸಂರಕ್ಷಕ ಸಮಿತಿ (ಲಯನ್ಸ ವಾಯ್ಸ್),ನಾಗಲೇಖ ಸಂಪಾದಕರು ಬಾಲ್ಯ ಚೇತನ ಮಕ್ಕಳ ಮಾಸಪತ್ರಿಕೆ ಮುಖ್ಯಸ್ಥರು ಜನಸಿರಿ ಫೌಂಡೇಶನ್, ಮಂಜು ಅಲಸೂರು ಕರ್ನಾಟಕ ಸಂರಕ್ಷಣಾ ಸಂಘ, ಲೋಕೇಶ್ ಗೌಡ ರಾಜ್ಯಾಧ್ಯಕ್ಷರು ಕರುನಾಡ ಸೇವಕರು ಯಶ್ ಅಭಿಮಾನಿಗಳ ಸಂಘ, ಮರಿಯಪ್ಪ ಲಾರಿ ಮಾಲಕರು ಬಿ ಎಲ್ ಎನ್ ನಿರ್ದೇಶಕರು, ರೇಷ್ಮೆ ನಾಡು ಶ್ರೀನಿವಾಸ ಸಂಸ್ಥಾಪಕ ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಅಭಿಮಾನಿಗಳ ಬಳಗ, ರಾಜಪ್ಪ ಜೈ ಕರ್ನಾಟಕ ರಕ್ಷಣಾ ಸೇನೆ, ವೆಂಕಟಪ್ಪ ಸುವರ್ಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ರಾಜ್ಯಾಧ್ಯಕ್ಷರು.

ಸಮಾಜ ಸೇವೆ ಸೇರಿದಂತೆ ಇತರ ಸೇವೆಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪುರಸ್ಕೃತ ಮಾಡಲಾಗುತ್ತದೆ.

ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದವರಿಗೆ ಡಾ. ಬಿ ಕೆಂಪರಾಜು ಎಂಬಿಬಿಎಸ್ ವೈದ್ಯಕೀಯ ಅಧೀಕ್ಷಕರು ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಸಂಶೋಧನ ಸಂಸ್ಥೆ ಬೆಂಗಳೂರು ನಾಡಪ್ರಭು ಕೆಂಪೇಗೌಡ ಪ್ರಶಸ್ತಿ,

ದಕ್ಷಿಣ ಪಥೇಶ್ವರ ಇಮ್ಮಡಿ ಪುಲಕೇಶಿ ಪ್ರಶಸ್ತಿ. ಕನ್ನಡಪರ ಹೋರಾಟದಲ್ಲಿ ಅಪ್ರತಿಮ ಸೇವೆಗಾಗಿ ಟಿ ಎ ನಾರಾಯಣ ಗೌಡ ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ.

ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಮಾತಾ ಮಂಜಮ್ಮ ಜೋಗತಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಲಾವಿದರು ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷರು ಬೆಂಗಳೂರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ. ಆರಕ್ಷಕ ಇಲಾಖೆಯಲ್ಲಿ ಗಣನೀಯ ಸೇವೆಗಾಗಿ ಐಪಿಎಸ್ ಅಧಿಕಾರಿಯಾದ ರವಿ ಡಿ ಚೆನ್ನಣ್ಣನವರ್ ಡೆಪ್ಯೂಟಿ ಇನ್ಸಪೆಕ್ಟರ್ ಜನರಲ್ ಆಫ್ ಪೊಲೀಸ್ ಬೆಂಗಳೂರು.

ಸಂತ ಶಿಶುನಾಳ ಶರೀಫ್ ಪ್ರಶಸ್ತಿ ಜಾನಪದ ಕ್ಷೇತ್ರದಲ್ಲಿ ಗಣನೀಯ ಸೇವೆಗಾಗಿ ಜಾನಪದ ಜಂಗಮ ಗುರುರಾಜ ಹೊಸಕೋಟೆ ಹಿರಿಯ ಜಾನಪದ ಕಲಾವಿದರು.

ಸರ್ ಎಂ ವಿಶ್ವೇಶ್ವರಯ್ಯ ಪ್ರಶಸ್ತಿ ಉದ್ಯಮಿ ಕ್ಷೇತ್ರದಲ್ಲಿ ಗಣನೀಯ ಸೇವೆಗಾಗಿ ಡಾ. ಎಸ್ ಪಿ ದಯಾನಂದ ನಿರ್ದೇಶಕರು ಡಿಎಸ್ ಮ್ಯಾಕ್ಸ್.

ರಾಜಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆಗಾಗಿ ವೀರೇಂದ್ರ ಪಾಟೀಲ್ ಪ್ರಶಸ್ತಿ ಶರಣಬಸಪ್ಪ ಗೌಡ ದರ್ಶನಾಪುರ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವರು ಕರ್ನಾಟಕ ಸರ್ಕಾರ

ಸಿನಿಮಾ ಕ್ಷೇತ್ರದಲ್ಲಿ ಸೇವೆಗೈದ ಆಟೋ ರಾಜ ಶಂಕರ್ ನಾಗ್ ಪ್ರಶಸ್ತಿ ರಾಮಚಂದ್ರ ರಾಜು (ಗರುಡ) ಖ್ಯಾತ ಚಲನಚಿತ್ರ ನಟ ಕೆಜಿಫ್.

ರೈತ ಚಳುವಳಿ ಸೇವೆಯಲ್ಲಿ ಗಣನೀಯ ಸೇವೆಗಾಗಿ ಅಂದಾನಪ್ಪ ದೊಡ್ಡಮೇಟಿ ಪ್ರಶಸ್ತಿ ಜೆ ಎಂ ವೀರ ಸಂಗಯ್ಯ ಕಾರ್ಯಾಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ ನೀಡಲಾಗುತ್ತದೆ.

ಕಾರ್ಯಕ್ರಮದಲ್ಲಿ ರಾಜ್ಯ ಪದಾಧಿಕಾರಿಗಳು ಎಲ್ಲಾ ಜಿಲ್ಲೆಯ ಜಿಲ್ಲಾಧ್ಯಕ್ಷರು ಬೆಂಗಳೂರು ಪದಾಧಿಕಾರಿಗಳು ಉಪಸ್ಥಿತರಿರುವರು ಎಂದು ತಿಳಿಸಿದರು.

About The Author