ಶಹಾಪುರ ; ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ವಿತರಿಸುವ 49ಕೋಟಿ, 73 ಲಕ್ಷದಲ್ಲಿ ಏಳು ಸಾವಿರ ಲ್ಯಾಪ್‌ಟಾಪ್ ಖರೀದಿಯಲ್ಲಿ ಅಕ್ರಮವಾಗಿರುವುದು ಮೇಲ್ಕುನೋಟಕ್ಕೆ ಕಂಡು ಬಂದಿದ್ದು ಕೂಡಲೆ ತನಿಖೆ ನಡೆಸುವಂತೆ ತಹಶೀಲ್ದಾರ್ ಮೂಲಕ ಕಾರ್ಮಿಕ ಆಯುಕ್ತರು,
ಕಾರ್ಮಿಕ ಇಲಾಖೆ ಬೆಂಗಳೂರು ಇವರಿಗೆ ಸರ್.ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷರಾದ ಪ್ರದೀಪ್ ಅಣಬಿ ಮನವಿ ಮಾಡಿದ್ದಾರೆ.
ಮೇಲೆ ತಿಳಿಸಿದ ಹಣದಲ್ಲಿ ಇನ್ನೂ ಹೆಚ್ಚಿನ ಲ್ಯಾಪ್‌ಟಾಪ್ ಖರೀದಿಸಲು ಅವಕಾಶವಿದ್ದು, ಗುಣಮಟ್ಟದ ಲ್ಯಾಪ್‌ಟಾಪ್ ಖರೀದಿಸಿ ಬಡ ಕಾರ್ಮಿಕರ ಮಕ್ಕಳಿಗೆ ಇದರಿಂದ ಉನ್ನತ ಶಿಕ್ಷಣ ಮಾಡಲು ಅನುಕೂಲವಾಗುತ್ತದೆ. ಇದರಲ್ಲಿಯೂ ಕೂಡ ಹಣ ದುರ್ಬಳಕೆಯಾದ ಕುರಿತು, ಶಂಕೆ ವ್ಯಕ್ತವಾಗಿದೆ. ಆದ್ದರಿಂದ ಕಾರ್ಮಿಕ ಆಯುಕ್ತರು ತನಿಖಾ ತಂಡವನ್ನು ನೇಮಿಸಿ, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಕಂಪನಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಸುನೀಲ್ ಹಳಿಸಗರ,ಹನ್ಮಂತ,ಜೈ ಭೀಮ್ ಭೀಮರಾಯ, ಪರಶುರಾಮ,ಅಂಬರೀಶ ಶಿರವಾಳ,ಪ್ರಕಾಶ್, ಭೋಜಪ್ಪ,ಕಾಳಪ್ಪ ಸೇರಿದಂತೆ ಇತರರು ಇದ್ದರು.
Post Views: 217