ಅದ್ದೂರಿಯಾಗಿ ಜರುಗಿದ ಅತ್ತನೂರು ದಿಡ್ಡಿ ಬಸವೇಶ್ವರ ಜಾತ್ರೆ
ರಾಯಚೂರು:ಜಿಲ್ಲೆಯ ಸಿರವಾರ ತಾಲೂಕಿನ ಅತ್ತನೂರು ಗ್ರಾಮದ ಶ್ರೀ ದಿಡ್ಡಿ ಬಸವೇಶ್ವರ ಜಾತ್ರೆ ಅದ್ದೂರಿಯಾಗಿ ಜರುಗಿತು. ಮಂಗಳವಾರದಂದು ಜೋಡು ರಥೋತ್ಸವ ನಡೆಯಿತು.
Video Player
00:00
00:00
ಕಳೆದ ಎರಡು ವರ್ಷಗಳಿಂದ ಕೊರೊನಾದಿಂದ ಕಳೆಗುಂದಿದ್ದ ಜಾತ್ರೆ ಇಂದು ಹರ್ಷ ಸಂಭ್ರಮದಿಂದ ಕೂಡಿತ್ತು.ಅಪಾರ ಸಂಖ್ಯೆಯ ಭಕ್ತರು ಬಸವೇಶ್ವರನ ಕೃಪೆಗೆ ಪಾತ್ರರಾದರು. ಪೂಜ್ಯರಾದ ಶ್ರೀ 108 ಸಾವಿರ ದೇವರ ಷ.ಬ್ರ.ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು,ಶ್ರೀ.ಷ.ಬ್ರ.ಅಭಿನವ ರಾಚೋಟಿವೀರ ಶಿವಾಚಾರ್ಯ ಮಹಾಸ್ವಾಮಿಗಳು ರಾಯಚೂರು ಮತ್ತು ಅತ್ತನೂರು, ಶ್ರೀ.ಷ.ಬ್ರ.ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಸಂಸ್ಥಾನ ಮಠ ನವಲಕಲ್, ಶ್ರೀ
ಷ.ಬ್ರ.ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಸಂಸ್ಥಾನ ಬ್ರಹನ್ಮಠ ನೀಲಗಲ್,ಪೂಜ್ಯರಾದ ಜಾಗಟಗಲ್ ಶರಣರರಿಗೆ ಶ್ರೀದಿಡ್ಡಿಬಸವೇಶ್ವರ ದೇವಸ್ಥಾನ ಕಮೀಟಿಯ ಅಧ್ಯಕ್ಷರಾದ ವೀರಭದ್ರಯ್ಯ ಸ್ವಾಮಿ ಮತ್ತು ಇತರರು ಸನ್ಮಾನಿಸಿ ಗೌರವಿಸಿದರು.
Video Player
00:00
00:00
ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ. ಬೂದೆಯ್ಯ ಸ್ವಾಮಿ ಗುರುಮಠ,ವಿರುಪಾಕ್ಷಯ್ಯಸ್ವಾಮಿ, ಬಸವಲಿಂಗಯ್ಯ ಸ್ವಾಮಿ, ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ರಾದ ಮಹಾಂತೇಶ ಪಾಟೀಲ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಬಸವರಾಜಪ್ಪ ಗೌಡ, ರಾಯಚೂರು ನಗರಸಭೆಯ ಆಪ್ತ ಸಹಾಯಕರಾದ ಸೂಗೂರಯ್ಯಸ್ವಾಮಿ ಸೇರಿದಂತೆ ಅಪಾರ ಭಕ್ತ ಸ್ತೋಮ ಜಾತ್ರೆಯಲ್ಲಿ ಸೇರಿದ್ದರು.