ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಸಾಹಿತಿ ಚನ್ನಬಸಪ್ಪ ಬಾಗ್ಲಿ ಆಯ್ಕೆ

yadagiri ವಡಗೇರಾ : ತಾಲೂಕಿನ ಐಕೂರ ಗ್ರಾಮದ ಸೃಜನಶೀಲ ಯುವಕವಿ ಎಂದು ಗುರುತಿಸಿಕೊಂಡಿರುವ ಚನ್ನಬಸಪ್ಪ ಬಾಗ್ಲಿ ಅವರ ಅರಿವಿನ ಬಾಗಿಲು ಚೊಚ್ಚಲ ಕವನ ಸಂಕಲನ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ  ಆಯ್ಕೆಯಾಗಿರುವುದಕ್ಕೆ ತಾಲೂಕಿನ ಯುವ ಸಾಹಿತಿ ಡಾ.ಗಾಳೇಪ್ಪ ಪೂಜಾರಿ ಸಂತಸ ವ್ಯಕ್ತಪಡಿಸಿದ್ದಾರೆ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹಲವಾರು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕವನಗಳನ್ನು ವಾಚಿಸುವ ಮೂಲಕ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಆಯ್ಕೆಯಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ.  ಗ್ರಾಮೀಣ ಭಾಗದ ಯುವ ಸಾಹಿತಿಗಳಿಗೆ ಸರ್ಕಾರದ ಸಹಕಾರ ಪ್ರೋತ್ಸಾಹದ ಅಗತ್ಯವಿದೆ ಎಂದು ಅವರು ಹೇಳಿದರು.
 ಯಾದಗಿರಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಿದ್ದಪ್ಪ ಹೊಟ್ಟಿ, ವಡಗೇರಾ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಕರಿಕಳ್ಳಿ,ಸಿದ್ದರಾಮ ಹೊನಕಲ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಆರೀಫ್ ರಾಜ ರಾಯಚೂರು,ಬೌದ್ಧ ಸಾಹಿತಿ ಬುದ್ಧಘೋಷ್ ದೇವೇಂದ್ರ ಹೆಗಡೆ, ಶರಣ ಸಾಹಿತಿ ಶಿವಣ್ಣ ಇಜೇರಿ, ಡಾ.ಮರಿಯಪ್ಪ ನಾಟೇಕಾರ,ಡಾ.ಬಸವರಾಜ ಕಲೆಗಾರ,. ಡಾ.ಮಹಮದ್ ಫೀರಪಾಷ ಶರಣಬಸಪ್ಪ ಯಾಳವಾರ ಸೇರಿದಂತೆ ಇತರರು
  ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

About The Author