ಚಾಲಕ ವಿರೋಧಿ ಕಾಯ್ದೆ. ಕೇಂದ್ರ ಮೋಟಾರ್ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ಪ್ರತಿಭಟನೆ : ಚಾಲಕರ ಬದುಕಿನ ಜೊತೆ ಕೇಂದ್ರ ಸರ್ಕಾರ ಚೆಲ್ಲಾಟ

ಶಹಾಪುರ : ಚಾಲಕ ವಿರೋಧಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡುವ ಮೂಲಕ ಚಾಲಕರ ಕುಟುಂಬದ ಜೊತೆ ಚೆಲ್ಲಾಟವಾಡುತ್ತಿದೆ. ಕೇಂದ್ರದ ಹಿಟ್ ಅಂಡ್ ರನ್​​ ಕಾನೂನು,ವಿರೋಧಿಸಿ  ಸಿದ್ದಾರ್ಥ ಟಿಪ್ಪರ್ ಚಾಲಕರ ಸಂಘ ಜಿಲ್ಲಾ ಸಮಿತಿ ಯಾದಗಿರಿ, ಶಹಪುರ ತಾಲೂಕ ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ, ಟ್ಯಾಕ್ಸಿ ಡ್ರೈವರ್ ಗಳ ಸಂಘ, ಆಟೋ ಚಾಲಕರ ಸಂಘದ ವತಿಯಿಂದ ನಗರದ ಬಸವೇಶ್ವರ ವೃತ್ತದಿಂದ ಹೊಸ ತಹಸಿಲ್ ಕಚೇರಿ ಇವರಿಗೆ ಪ್ರತಿಭಟನೆ ನಡೆಸಿ ತಹಸಿಲ್ದಾರ್ ಗ್ರೇಡ್ 2 ಸೇತು ಮಾಧವ ಕುಲಕರ್ಣಿ ಅವರ ಮೂಲಕ ಸಾಜಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
 ಈ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಗುಂಡಪ್ಪ ತುಂಬಿಗಿ ಅವರು,
ಚಾಲಕರ ಜೀವನದ ಬಗ್ಗೆ ಸರ್ಕಾರ ಯೋಚಿಸಿಲ್ಲ, ಚಾಲಕರು ಯಾವ ಪರಿಸ್ಥಿತಿಯಲ್ಲಿ ಬದುಕುತ್ತಾರೆ, ಹೇಗೆ ಬದುಕುತ್ತಾರೆ, ಅವರ ಭವಿಷ್ಯವೇನು, ಅವರ ಪರಿಸ್ಥಿತಿ ಏನು ಎಂದು ಯಾರೂ ಯೋಚಿಸಿಲ್ಲ, ಅಪಘಾತಗಳಿಗೆ ಚಾಲಕರಲ್ಲ, ಅಲ್ಲಿನ ಪರಿಸ್ಥಿತಿ ಕಾರಣವಾಗಿದೆ. ಸರ್ಕಾರ ಮತ್ತು ಆಡಳಿತದ ತಪ್ಪು ನೀತಿಗಳು ದೇಶದಲ್ಲಿ ಸಂಚಾರ ನಿಯಮಗಳು ಸರಿಯಾಗಿಲ್ಲ. ಚಾಲಕ ವಿರೋಧಿ ಕಾಯ್ದೆಯನ್ನು ತಕ್ಷಣ  ಸರಕಾರ ಹಿಂಪಡೆಯಬೇಕು. ಇಲ್ಲದೆ ಹೋದರೆ ಅನಿರ್ದಿಷ್ಟ ಮುಷ್ಕರ ಮುಂದುವರಿಯುತ್ತದೆ ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಇದೆ ವೇಳೆ ಮಾತನಾಡಿದ ಟಿಪ್ಪರ್ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ರೆಡ್ಡಿ ದೋರನಹಳ್ಳಿ ಅವರು,
ಹೊಸ ನಿಯಮದ ಪ್ರಕಾರ, ಚಾಲಕನು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಓಡಿಹೋದರೆ, 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು, ಅದು ಅವರ ಕುಟುಂಬವನ್ನು ಆತ್ಮಹತ್ಯೆಯಿಂದ ಸಾಯುವಂತೆ ಮಾಡುತ್ತದೆ. 5,000-10 ರೂಪಾಯಿ ಸಂಬಳ ಪಡೆಯುವ ಚಾಲಕ, ಅಪಘಾತದ ಸಂದರ್ಭದಲ್ಲಿ ಲಕ್ಷ ರೂಪಾಯಿಗಳ ದಂಡವನ್ನು ಹೇಗೆ ಸಂಗ್ರಹಿಸಲು ಸಾಧ್ಯವಾಗುತ್ತದೆ? ಬಹುತೇಕ ಚಾಲಕರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ ಹಲವರು ಕೊಳೆಗೇರಿಗಳಲ್ಲಿ ಸ್ವಂತ ಮನೆಗಳನ್ನು ಹೊಂದಿದ್ದಾರೆ.
ದಂಡ ಕಟ್ಟಲು ಅವುಗಳನ್ನು ಮಾರಿದರೆ, ಅವರ ಕುಟುಂಬ ಬೀದಿಗೆ ಬೀಳುತ್ತದೆ. ಸರ್ಕಾರವು ಈ ತಪ್ಪು ನಿಯಮಗಳನ್ನು ತಿದ್ದುಪಡಿ ಮಾಡಬೇಕು. ಮತ್ತು ಭಾರತದ ಎಲ್ಲಾ ಚಾಲಕರಿಗೆ ನ್ಯಾಯವನ್ನು ನೀಡಬೇಕು. ಇಲ್ಲದೆ ಹೋದರೆ ದೇಶಾದ್ಯಂತ ಅನಿರ್ದಿಷ್ಟವಾಗಿ ಮುಷ್ಕರ ಮುಂದುವರೆಯಲಿದೆ ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ತಾಲೂಕು ಕಾರ್ಯದರ್ಶಿ ಶಿವರಾಜ ಜಯಶೆಟ್ಟಿ, ಜಿಲ್ಲಾ ಗೌರವಾಧ್ಯಕ್ಷ ಶಿವಕುಮಾರ್, ಜಿಲ್ಲಾ ಕಾರ್ಯದರ್ಶಿ ಶಿವಪ್ಪ ಹೊಸ್ಕೆರಾ, ಇಬ್ರಾಹಿಂ ಹೊತ್ಪೆಟ್, ಮೊಹಮ್ಮದ್ ಜಾಹಿರ್ ಪಾಶ, ಹಣಮಂತ  ಹತ್ತಿಗೂಡೂರು, ಸುಖಪ್ಪ ಬೇವಿನಹಳ್ಳಿ, ಮಹಮ್ಮದ್ ಕಲಿಲ್, ಮೊಹಮ್ಮದ್ ಹಮಿಮುದ್ದೀನ್, ಶರಣಪ್ಪ ಪೂಜಾರಿ, ರಾಜು ಅಬ್ದುಲ್ ಅಜೀಮ್, ಭೀಮಣ್ಣ ವಿಬೂತಹಳ್ಳಿ, ಎಲ್ಲಪ್ಪ, ರವಿ ಸಿಂಗನಹಳ್ಳಿ, ಚಂದಪ್ಪ ಗೋಗಿ, ಭೀಮರಾಯ, ಕುಮಾರ್, ಹುಸೇನಿ, ರವಿ ಸೇರಿದಂತೆ ವಿವಿಧ ವಾಹನಗಳ ಚಾಲಕರು ಭಾಗವಹಿಸಿದ್ದರು.

About The Author