ಅಂಗನವಾಡಿ ಬಿಸಿ ಊಟ ನೌಕರರಿಂದ ಜ. 23 ರಂದು ಸಂಸದರ ಕಚೇರಿ ಚಲೋ

ಶಹಾಪುರ : ಅಂಗನವಾಡಿ, ಬಿಸಿ ಊಟ ನೌಕರರಿಂದ  ಜನವರಿ 23 ರಂದು ರಾಜ್ಯಾದ್ಯಂತ ಸ್ಕೀಮ್ ನೌಕರರ ಸಂಘಟನೆಗಳು ಮತ್ತು ಸಿಐಟಿಯು ನೇತೃತ್ವದಲ್ಲಿ ಪ್ರತಿ ಜಿಲ್ಲಾ ಕೇಂದ್ರದಲ್ಲಿರುವ ಸಂಸದರ ಕಚೇರಿ ಚಲೋ ನಡೆಸುವ ಮೂಲಕ ಪ್ರತಿಭಟನೆ ನಡೆಸಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಶಿಶು ಅಭಿವೃದ್ಧಿ ಯೋಜನೆ
ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಮಾಹಿತಿಯ ಮನವಿ ಪತ್ರ ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ತಾಲೂಕ ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ ಮಾತನಾಡಿ,ಆಹಾರ,
ಆರೋಗ್ಯ, ಶಿಕ್ಷಣಕ್ಕಾಗಿ ಇರುವ ಯೋಜನೆಗಳಾದ ಐ.ಸಿ.ಡಿ.ಎಸ್, ಎಂ.ಡಿ.ಎಂ, ಎನ್.ಹೆಚ್.ಎಂ, ಐ.ಸಿ.ಪಿ.ಎಸ್,
ಎಸ್.ಎಸ್.ಎ, ಎಂ.ಎನ್.ಆರ್.ಇ.ಜಿ. ಮುಂತಾದ ಯೋಜನೆಗಳನ್ನು ಖಾಯಂ ಮಾಡುವ ಮುಖಾಂತರ ಈ ಹಕ್ಕುಗಳನ್ನು
ಸಾರ್ವತ್ರಿಕಗೊಳಿಸಬೇಕು. 3 ರಿಂದ 6 ವರ್ಷದ ಒಳಗಿನ ಮಕ್ಕಳಿಗೆ ಉಚಿತ ಕಡ್ಡಾಯ ಮತ್ತು ಸಾರ್ವತ್ರಿಕವಾಗಿ
ಪೂರ್ವಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ನೀಡಲು ಕಾನೂನು ರಚಿಸಬೇಕು. ತಕ್ಷಣಕ್ಕೆ ಎನ್.ಇ.ಪಿ
ನಿಲ್ಲಿಸಬೇಕು. ಸುಮಾರು 49 ವರ್ಷಗಳಿಂದ ದುಡಿಯುತ್ತಿರುವ ಅಂಗನವಾಡಿ ನೌಕರರು, 21 ವರ್ಷಗಳಿಂದ ದುಡಿಯುತ್ತಿರುವ
ಬಿಸಿಯೂಟ ನೌಕರರಿಗೆ ಆಶಾ ಮತ್ತು ಇತರೆ ಸಿಬ್ಬಂದಿಗಳಿಗೆ 31 ಸಾವಿರ ಕನಿಷ್ಟ ವೇತನ ಜಾರಿ ಮಾಡಬೇಕು. ನಿವೃತ್ತಿ
ಸೌಲಭ್ಯಗಳನ್ನು ಮಾಸಿಕ ಕನಿಷ್ಟ ರೂ.10,000/- ಪಿಂಚಣಿ ನೀಡಬೇಕು. ಅಲ್ಲದೇ, ನಿವೃತ್ತಿ ಹೊಂದಿದ ಎಲ್ಲಾ ಅಂಗನವಾಡಿ
ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಗ್ರಾಜ್ಯುಟಿ ಹಣ ಬಿಡುಗಡೆ ಮಾಡಬೇಕು. ಇಡಿಗಂಟು ನೀಡಬೇಕು. ಸೇರಿದಂತೆ ಹಲವು
ಬೇಡಿಕೆಗಳಿಗಾಗಿ ಸುಮಾರು ವರ್ಷಗಳಿಂದ ಹೋರಾಟ, ಮುಷ್ಕರ ನಡೆಸುತ್ತಾ ಬಂದರೂ ಸರ್ಕಾರ ಮಾತ್ರ ನಮ್ಮ
ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಲು ಮನಸ್ಸು ಮಾಡುತ್ತಿಲ್ಲ. ಈ ಎಲ್ಲ ಬೇಡಿಕೆಗಳಿಗಾಗಿ ಒತ್ತಾಯಿಸಿ ಜನೆವರಿ
23 ರಂದು ಸಂಸದರ ಕಚೇರಿ ಚಲೋ ಮುಖಾಂತರ ಪ್ರತಿಭಟನೆ ಮಾಡಲಾಗುತ್ತಿದೆ. ಜನೆವರಿ 23 ರಂದು ತಾಲೂಕಿನ ಎಲ್ಲ
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಈ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದು, ಅಂದಿನ ದಿನ ಎಲ್ಲಾ
ಅಂಗನವಾಡಿ ಕೇಂದ್ರಗಳ ಎಲ್ಲ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುತ್ತದೆ. ಈ ಹೋರಾಟದಲ್ಲಿ
ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ಹಾಗೂ ಅಕ್ಷರ ದಾಸೋಹ ನೌಕರರು ಭಾಗವಹಿಸಿ
ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಅವರು ಪ್ರಕಟಣೆ ಮೂಲಕ ಮನವಿ ಮಾಡಿದರು.  ಅಂಗನವಾಡಿ ನೌಕರ ಸಂಘದ ತಾಲೂಕ ಅಧ್ಯಕ್ಷೆ ಬಸಲಿಂಗಮ್ಮ ನಾಟೇಕಾರ್, ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದ ಆರನೇ ಗ್ಯಾರೆಂಟಿಯಾದ ಅಂಗನವಾಡಿ ನೌಕರರಿಗೆ 15000 ಹಾಗೂ ಬಿಸಿಊಟ ನೌಕರರಿಗೆ 6000 ವೇತನ ಹೆಚ್ಚಳ ಮತ್ತು ನಿವೃತ್ತಿ ಸೌಲಭ್ಯ ಜಾರಿ ಮಾಡಬೇಕು ಎಂದು ಆಗ್ರಹಿಸಿದರು. ಅಂಗನವಾಡಿ ನೌಕರ ಸಂಘದ ತಾಲೂಕ ಕಾರ್ಯದರ್ಶಿ ಯಮುನಮ್ಮದೋರನಹಳ್ಳಿ, ಖಜಾಂಚಿ ಲಕ್ಷ್ಮೀ ಶಹಾಪುರ, ಸಂಘದ ವಾಡಗೆರಾ ತಾಲೂಕ ಖಜಾಂಚಿ ಮಹದೇವಿ ಕಾಡಮಗೇರ ಇದ್ದರು.

About The Author