ಐಡಿಎಸ್ಎಂಟಿ ನಿವೇಶನ ಅಕ್ರಮ ನೋಂದಣಿ : ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ

ಶಹಾಪುರ : ಐಡಿಎಸ್ಎಂಟಿ ಯೋಜನೆಯಡಿಯಲ್ಲಿ ನಿವೇಶನಗಳು ಅಕ್ರಮವಾಗಿ ನೋಂದಾವಣೆ ಮಾಡಿಕೊಂಡಿರುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಹಾಗೂ ತನಿಖೆ ನಡೆಸಿ ಹರಾಜು ಪ್ರಕ್ರಿಯೆಯನ್ನು ಕೂಡಲೆ ನಿಲ್ಲಿಸಬೇಕು ಎಂದು ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತ ರಕ್ಷಣಾ ಸಮಿತಿ ಅಧ್ಯಕ್ಷರಾದ ಮೌನೇಶ್ ಹಳಿಸಗರ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
25 ನಿವೇಶನಗಳು ಅಕ್ರಮವಾಗಿ ನೋಂದಾವಣಿ ಯಾಗಿವೆ. ರಾಜಕೀಯ ಪ್ರಭಾವ ಬಳಸಿ ಮೂರು ಕೋಟಿಗೂ ಹೆಚ್ಚು ಸರಕಾರದ ಆಸ್ತಿಯನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ಸಂಬಂಧಪಟ್ಟ  ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಪತ್ರಕರ್ತರ ನಿವೇಶನಗಳು ಕೂಡ ಅಕ್ರಮ : ಹಿಂದಿನ ಜಿಲ್ಲಾಧಿಕಾರಿಗಳು ಐಡಿಎಸ್ಎಂಟಿ ನಿವೇಶನಗಳನ್ನು ಪತ್ರಕರ್ತರಿಗೆ ಸರ್ಕಾರದ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿದ್ದಾರೆ. ಕೆಲವು ಪತ್ರಕರ್ತರು ತೆಗೆದುಕೊಂಡ ನಿವೇಶನಗಳನ್ನು ಇತರರಿಗೆ ಮಾರಾಟ ಮಾಡಿಕೊಂಡಿದ್ದಾರೆ.ಇವುಗಳ ಬಗ್ಗೆ ತನಿಖೆ ನಡೆಸಿ ಇವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು.ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು.

About The Author