ಕಾರ್ಮಿಕರ ಸಮಸ್ಯೆಗಳನ್ನು ಹಾಲಿಸುವಂತೆ ಕಾರ್ಮಿಕ ಸಚಿವರಿಗೆ ಮನವಿ

ಶಹಾಪುರ : ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಯಾದಗಿರಿ ಜಿಲ್ಲೆಗೆ ಕಾರ್ಮಿಕರ ಸಮಸ್ಯೆಗಳನ್ನು ಆಲಿಸದೆ ಯಾದಗಿರಿ ಜಿಲ್ಲೆಗೆ ಬರದೇ ಇರುವುದು ದುರದೃಷ್ಟಕರ ಎಂದು ಎಂ ವಿಶ್ವೇಶ್ವರಯ್ಯ ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷರಾದ ಪ್ರದೀಪ್ ಅಣಬಿ ಕಾರ್ಮಿಕ ಸಚಿವರಿಗೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ತಹಸೀಲ್ದಾರರ ಮುಖಾಂತರ ಮನವಿ ಸಲ್ಲಿಸಿ ಮಾತನಾಡಿದ ಅವರು,ಯಾದಗಿರಿ ಜಿಲ್ಲೆಯಲ್ಲಿ ಸುಮಾರು ೧ ಲಕ್ಷ ೭೮ ಸಾವಿರಕ್ಕೂ ಹೆಚ್ಚು ಕಾರ್ಮಿಕ ಫಲಾನುಭವಿಗಳಿದ್ದು, ಅದರಲ್ಲಿ ಯಾದಗಿರಿ – ೬೫ ಸಾವಿರ, ಶಹಾಪುರ – ೪೫ ಸಾವಿರ, ಸುರಪುರ -೬೮ ಸಾವಿರ ಫಲಾನುಭವಿಗಳಿದ್ದು, ಈಗಾಗಲೇ ಸರಕಾರದ ವಿವಿಧ ಯೋಜನೆಗಳು ಕಾರ್ಮಿಕ ಇಲಾಖೆಯಲ್ಲಿದ್ದು, ಕೆಲವೊಂದು ಯೋಜನೆಗಳ ಬಗ್ಗೆ ಮಾಹಿತಿ ಅಧಿಕಾರಿಗಳಿಗೂ ಕೂಡ ಸಿಗದಂತಾಗಿದ್ದು, ಇದರಿಂದ ಅಧಿಕಾರಿಗಳು ಗೊಂದಲದಲ್ಲಿದ್ದಾರೆ. ಕಾರ್ಮಿಕ ಸಚಿವರಾಗಿ ಅಧಿಕಾರ ಪಡೆದ ನಂತರ ಸಚಿವರು ಒಮ್ಮೆಯೂ ಯಾದಗಿರಿ ಜಿಲ್ಲೆಯ ಭೇಟಿ ನೀಡಿರುವುದಿಲ್ಲ.

ಈಗಾಗಲೇ ಜಿಲ್ಲೆಯಲ್ಲಿ ಕಾರ್ಮಿಕ ಫಲಾನುಭವಿಗಳು ಮನೆಯಿಲ್ಲದೇ ಬಾಡಿಗೆ ಮನೆ, ಗುಡಿಸಿಲಿನಲ್ಲಿ ವಾಸ ಮಾಡುತ್ತಿದ್ದಾರೆ. ಇವರುಗಳಿಗೂ ಕಾರ್ಮಿಕ ಇಲಾಖೆಯಿಂದ ಮನೆ ದೊರಕಿಸಿದ್ದೇ ಆದ್ದಲ್ಲಿ ನಗರಗಳಿಗೆ ಗೂಳೆ ಹೋಗುವುದು ತಪ್ಪುತ್ತದೆ. ಕಾರ್ಮಿಕ ಕಛೇರಿಗಳು ಬಾಡಿಗೆ ಪಡೆದುಕೊಂಡು ಕಛೇರಿ ನಡೆಸುತ್ತಿದ್ದಾರೆ ಈ ಬಗ್ಗೆ ಸ್ಥಳೀಯ ಸಂಬಂದಿಸಿದ ಅಧಿಕಾರಿಗಳಿಗೆ ಹಾಗೂ ಜನಪತ್ರಿನಿಧಿಗಳಿಗೆ, ಜಿಲ್ಲಾಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ., ಕಾರ್ಮಿಕ ಸಚಿವರು ಜಿಲ್ಲೆಗೆ ಭೇಟಿ ನಂತರ ಪರಿಹಾರ ನೀಡಬಹುದು ಎಂದರು.ಈಗಾಗಲೆ ಸಚಿವರಿಗೆ ಕಾರ್ಮಿಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು ಯಾವುದೇ ಕ್ರಮ ಕೈಗೊಳ್ಳದಿರುವುದು ಕಳವಳಕಾರಿ ಎಂದರು.ಆದ್ದರಿಂದ ಯಾದಗಿರಿ ಜಿಲ್ಲೆಗೆ ಕಾರ್ಮಿಕ ಸಚಿವರು ಭೇಟಿ ನೀಡಬೇಕೆಂದು ವಿನಂತಿಸಿಕೊಂಡರು

ಈ ಸಂಧರ್ಭದಲ್ಲಿ ಸಂಸ್ಥೆ , ಭೋಜಪ್ಪ ಮುಂಡಾಸ, ಶ್ರೀಶೈಲ್ ಸಗರ, ಭೀಮರಾಯ ಸೈದಾಪುರ, ಅಂಬ್ರೇಶ ಶಿರವಾಳ, ಭೀಮರಾಯ, ಯಕ್ಷಂತಿ, ದೇವಪ್ಪ ಇನ್ನಿತರರು ಇದ್ದರು.

About The Author