ಡಾ.ಮೂರ್ತಿ ಕ್ಲಾಸಿಕಲ್ ಹೋಮಿಯೋಪತಿ ಔಷಧಿಯಿಂದ ಹೊನ್ನಪ್ಪ ಗ್ಯಾಂಗ್ರಿನ್ ಕಾಯಿಲೆಯಿಂದ ಸಂಪೂರ್ಣ ಗುಣಮುಖ

ಶಹಾಪುರ : ರಾಯಚೂರು ಜಿಲ್ಲೆಯ ದೇವದುರ್ಗ
ತಾಲೂಕಿನ ಗಬ್ಬೂರು ಗ್ರಾಮದ ಹೊನ್ನಪ್ಪ ಗಬ್ಬೂರು ಎನ್ನುವ ವ್ಯಕ್ತಿಗೆ ಕಾಲಿನ ಬೆರಳುಗಳ ಸರ್ವೆಗಳಲ್ಲಿ ರಕ್ತ ಸಂಚಾರವಿಲ್ಲದೆ ನರಳುತ್ತಿದ್ದ. ದೇವದುರ್ಗ ತಾಲೂಕಿನ ಈ ವ್ಯಕ್ತಿ ಹಲವು ವೈದ್ಯರಲ್ಲಿ ಭೇಟಿಯಾಗಿ ಕಾಯಿಲೆಗೆ ಚಿಕಿತ್ಸೆಯನ್ನು ತೆಗೆದುಕೊಂಡಿದ್ದ. ಆದರೆ ಕಾಯಿಲೆ ಮಾತ್ರ ಗುಣವಾಗಲಿಲ್ಲ. ದಿನವಿಡೀ ಕಾಯಿಲೆ ವಾಸಿಯಾಗದೆ ಕಪ್ಪಾಗಿರುವ ಬೆರಳಿನ ನೋವು ತಾಳಲಾಗದೆ ಮನೆಯಲ್ಲಿಯೆ ನರಳುತ್ತಿದ್ದ. ದೇವದುರ್ಗ, ರಾಯಚೂರು ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ತೋರಿಸಿಕೊಂಡಿದ್ದ. ಕಾಯಿಲೆ ಗುಣವಾಗದೆ ಪಶ್ಚಾತ್ತಾಪ ಪಡುತ್ತಿದ್ದ. ಹಲವು ವೈದ್ಯರನ್ನು ಸಂಪರ್ಕಿಸಿದಾಗ ವೈದ್ಯರು ಹೇಳಿದ ಪ್ರಕಾರ ಇದು ಗ್ಯಾಂಗ್ರಿನ್ ಕಾಯಿಲೆ ಎಂದು ಗೊತ್ತಾಗಿ ದಿಗ್ಬ್ರಾಂತನಾಗಿದ್ದ.ನನ್ನ ಕಾಲು ಕಳೆದುಹೋಗುತ್ತದೆ ಎಂದು ಚಿಂತೆಯಲ್ಲಿ ಮುಳುಗಿದ್ದ. ಇಂತಹ ಸಂದರ್ಭದಲ್ಲಿ ದೇವದುರ್ಗ ತಾಲೂಕಿನ ವೈದ್ಯರೊಬ್ಬರು ಕಲ್ಬುರ್ಗಿ ಮತ್ತು ಶಹಪುರದಲ್ಲಿರುವ ಡಾ.ಮೂರ್ತಿ ಕ್ಲಾಸಿಕಲ್ ಹೋಮಿಯೋಪತಿ ಆಸ್ಪತ್ರೆಗೆ ಹೋಗಿ ಎಂದು ಸಲಹೆ ನೀಡಿದ್ದರಂತೆ.

ಹೊನ್ನಪ್ಪ ಗಬ್ಬೂರು ಗುಣಮುಖವಾದ ವ್ಯಕ್ತಿ

ಅದರಂತೆ ಹೊನ್ನಪ್ಪ ಗಬ್ಬೂರು ಶಹಾಪುರ ತಾಲೂಕಿನಲ್ಲಿರುವ ಹಳೆಯ ಬಸ್ ನಿಲ್ದಾಣದ ಹತ್ತಿರದಲ್ಲಿರುವ ಡಾ.ಮೂರ್ತಿ ಕ್ಲಾಸಿಕಲ್ ಹೋಮಿಯೋಪತಿ ವೈದ್ಯರಾದ ಡಾ.ಕೃಷ್ಣಮೂರ್ತಿ ಅವರನ್ನು ಭೇಟಿಯಾದ.ವೈದ್ಯರು ಆದಷ್ಟು ಗುಣಪಡಿಸಲು ನಾನು ಪ್ರಯತ್ನಿಸುವೆ.ಆದರೆ ನಾನು ಕೊಡುವ ಔಷಧಿಗಳನ್ನು ಸುಮಾರು ಐದು ತಿಂಗಳುಗಳವರೆಗೆ ಸತತವಾಗಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರಂತೆ.ಆಗಲಿ ಅಂತ ಹೊನ್ನಪ್ಪ ಗಬ್ಬೂರು ಡಾ.ಕೃಷ್ಣಮೂರ್ತಿ ಅವರು ಹೋಮಿಯೋಪತಿ ಔಷಧಿಗಳನ್ನು ಕೊಟ್ಟರು.ಸತತ ಮೂರು ತಿಂಗಳುಗಳ ಕಾಲ ಕಾಲಕ್ಕೆ ಹೋಮಿಯೋಪತಿ ಮಾತ್ರೆಗಳನ್ನು ಬದಲಾಯಿಸುತ್ತಾ ಹೊನ್ನಪ್ಪನಿಗೆ ಚಿಕಿತ್ಸೆ ನೀಡಿದರು.

ಕಾಲಿನ ಬೆರಳುಗಳಿಗೆ ಔಷಧಿಗಳನ್ನು ನೀಡುತ್ತಾ, ಮಾತ್ರೆಗಳನ್ನು ಮುಂದುವರಿಸಿದ್ದರು.ಕೇವಲ ಮೂರು ತಿಂಗಳುಗಳಲ್ಲಿಯೆ ಗ್ಯಾಂಗ್ರಿನ್ ಕಾಯಿಲೆ ಸಂಪೂರ್ಣವಾಗಿ ಗುಣಮುಖವಾಗಿದೆ. ಐದು ಬೆರಳುಗಳಲ್ಲಿ ಕಪ್ಪಾಗಿದ್ದ ಒಂದು ಬೆರಳು ಮಾತ್ರ ಹೋಗಿದೆ. ಉಳಿದ ಎಲ್ಲಾ ಬೆರಳುಗಳ ಜೊತೆಗೆ ನನ್ನ ಕಾಲು ಉಳಿಯಿತು ಎಂದು ಹೊನ್ನಪ್ಪ ಸಂತಸ ವ್ಯಕ್ತಪಡಿಸಿದ್ದಾನೆ. ನನ್ನ ಕಾಲು ಉಳಿಯಿತು ಎಂದುಕೊಂಡ ಹೊನ್ನಪ್ಪ ಇತರರಿಗೆ ಈ ತರಹದ ಕಾಯಿಲೆಗಳು ಇದ್ದರೆ ದಯವಿಟ್ಟು ಕಲಬುರ್ಗಿ ಮತ್ತು ಶಹಪುರ ನಗರದಲ್ಲಿರುವ ಡಾ. ಕ್ಲಾಸಿಕಲ್ ಹೋಮಿಯೋಪತಿ ವೈದ್ಯರನ್ನು ಭೇಟಿಯಾಗಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾನೆ.

ಕಾಲಿನ ಬೆರಳು ಕಪ್ಪಾದ ನಂತರ ರಾಯಚೂರು ದೇವದುರ್ಗದ ಹಲವು ಆಸ್ಪತ್ರೆಯ ವೈದ್ಯರನ್ನು ಭೇಟಿಯಾದೆ.ಕೆಲವು ವೈದ್ಯರು ನಾಲ್ಕು ತಿಂಗಳಿಂದ 5 ತಿಂಗಳು ವರೆಗೆ ಗುಣವಾಗುತ್ತದೆ ಎಂದರು. ಕೆಲವು ವೈದ್ಯರು ಈ ಕಪ್ಪಾದ ಬೆರಳು ಮತ್ತು ಕಾಲನ್ನು ಕಂಡು ಇದೊಂದು ಗ್ಯಾಂಗ್ರಿನ್ ಕಾಯಿಲೆಯಾಗಿದ್ದು ಮೊಣಕಾಲು ಮೇಲೆ ಕಾಲು ಕಡಿಯಬೇಕಾಗುತ್ತದೆ ಎಂದು ಹೇಳಿದರು. ಕಾಲು ಕಡಿದರೆ ಜೀವನ ಬದುಕಲು ಕಷ್ಟ ಎಂದುಕೊಂಡು ದೇವದುರ್ಗ ವೈದ್ಯರೊಬ್ಬರ ಸಲಹೆ ಮೇರೆಗೆ ಕಲಬುರ್ಗಿ ಮತ್ತು ಶಹಪುರದಲ್ಲಿರುವ ಡಾ.ಮೂರ್ತಿ ಕ್ಲಾಸಿಕಲ್ ಹೋಮಿಯೋಪತಿ ಆಸ್ಪತ್ರೆಗೆ ನನ್ನನ್ನು ಕಳುಹಿಸಿಕೊಟ್ಟರು.ಶಹಾಪುರದಲ್ಲಿನ  ಡಾ.ಮೂರ್ತಿ ಕ್ಲಾಸಿಕಲ್ ಹೋಮಿಯೋಪತಿಯ ಡಾ.
ಕೃಷ್ಣಮೂರ್ತಿ ವೈದ್ಯರನ್ನು ಭೇಟಿಯಾಗಿ
ಎರಡು ವಾರಗಳ ಕಾಲ ನನಗೆ ಹೋಮಿಯೊಪತಿ ಮಾತ್ರೆಗಳ ಜೊತೆಗೆ ಚಿಕಿತ್ಸೆ ಕೊಟ್ಟರು. ನಂತರ ನನ್ನ ಕಾಲಿನ ಸ್ಕ್ಯಾನಿಂಗ್ ಮಾಡಿಸಿದಾಗ ಕಾಲಿನ ನರಗಳಲ್ಲಿ ರಕ್ತ ಸಂಚಾರ ಆಗಿದೆ. ಕಾಲು ತೆಗೆಯುವ ಅವಶ್ಯಕತೆ ಇಲ್ಲ ಎಂದು ಹೇಳಿದರು. ಸುಮಾರು ಮೂರು ತಿಂಗಳು ಕಾಲ ನನ್ನ ಬೆರಳು ಮತ್ತು ಕಾಲಿಗೆ ಚಿಕಿತ್ಸೆ ಕೊಟ್ಟರು. ಈಗ ನಾನು ಸಂಪೂರ್ಣವಾಗಿ ಗುಣಮುಖವಾಗಿದ್ದೇನೆ.

ಹೊನ್ನಪ್ಪ ಗಬ್ಬೂರು ತಾ.ದೇವದುರ್ಗ.ಜಿ.ರಾಯಚೂರು.

ಸತತ ಮೂರು ತಿಂಗಳಿನಿಂದ ಹೋಮಿಯೋಪತಿ ಮಾತ್ರೆಗಳನ್ನು ಹಾಗೂ ಕಾಲಿನ ಬೆರಳಿಗೆ ಹೊನ್ನಪ್ಪನ ಕಾಲಿನ ಗ್ಯಾಂಗ್ರಿನ್ ಕಾಯಿಲೆಗೆ ಕೊಡಲಾಗಿತ್ತು. ಬೇರೆ ಆಸ್ಪತ್ರೆಯಲ್ಲಿ ಬೆರಳಿನ ಮೇಲ್ಭಾಗದ ತನಕ ಕಾಲನ್ನು ತೆಗೆಯಬೇಕಾಗುತ್ತದೆ ಎಂದು ಹೇಳಿದ್ದರು. ನನ್ನಲ್ಲಿ ಬಂದಾಗ ಮೊದಲನೇ ಸ್ಕ್ಯಾನಿಂಗ್ ರಿಪೋರ್ಟ್ ನೋಡಿದಾಗ ಕಾಲಿನಲ್ಲಿನ ಮೂರು ರಕ್ತನಾಳಗಳಲ್ಲಿ ರಕ್ತ ಸಂಪರ್ಕ ಕಡಿತವಾಗಿತ್ತು. 15 ದಿನಗಳಲ್ಲಿ ಹೋಮಿಯೋಪತಿ ಮಾತ್ರೆಗಳನ್ನು ಬದಲಾವಣೆ ಮಾಡುತ್ತಾ ಕೊಡಲಾಗಿತ್ತು. ನಂತರ ಪುನಃ ಎರಡನೇ ಸ್ಕ್ಯಾನಿಂಗ್ ಮಾಡಿಸಿದಾಗ 3 ರಕ್ತನಾಳಗಳಲ್ಲಿ ರಕ್ತ ಸಂಚಲನೆ ಆರಂಭವಾಗಿತ್ತು. ಮಾತ್ರೆಗಳನ್ನು ಬದಲಾವಣೆ ಮಾಡುತ್ತಾ ಹೊನ್ನಪ್ಪನಿಗೆ ಚಿಕಿತ್ಸೆ ನೀಡಲಾಗಿದ್ದು, ಈಗ ಹೊನ್ನಪ್ಪ ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ. ಚಿಕಿತ್ಸೆಯನ್ನು ಕೂಡ ನಿಲ್ಲಿಸಲಾಗಿದೆ.

ಡಾ.ಕೃಷ್ಣಮೂರ್ತಿ
ಡಾ.ಮೂರ್ತಿ ಕ್ಲಾಸಿಕಲ್ ಹೋಮಿಯೋಪತಿ ಆಸ್ಪತ್ರೆ ಕಲಬುರ್ಗಿ ಮತ್ತು ಶಹಾಪುರ.
ಪೋ. 99722 15624