ರಾಯಚೂರು : ಜಿಲ್ಲೆಯ ಸಿರವಾರ ತಾಲೂಕಿನ ಅತ್ತನೂರು ಗ್ರಾಮದಲ್ಲಿ ಗುಡ್ಡದ ಮಲ್ಲಯ್ಯನ ಜಾತ್ರೆಯು ಸೋಮವಾರದಂದು ಅದ್ದೂರಿಯಾಗಿ ಜರುಗಲಿದೆ ಎಂದು ಗುಡ್ಡದ ಮಲ್ಲಯ್ಯನ ದೇವಸ್ಥಾನದ ಆಡಳಿತ ಮಂಡಳಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರವಿವಾರ ರಾತ್ರಿ 9:00 ಗಂಟೆಗೆ ದೇವರ ಮನೆಯಿಂದ ಗುಡ್ಡದ ಮಲ್ಲಯ್ಯನ ದೇವಸ್ಥಾನಕ್ಕೆ ಕಳಸಾರೋಹಣ. ಸೋಮವಾರದಂದು ದೇವರ ಮನೆಯಿಂದ ಪಲ್ಲಕ್ಕಿ ಸಮೇತ ಗಂಗಾ ಸ್ನಾನಕ್ಕೆ ಹೋಗಿ ಅನಂತರ ಗಂಗಾ ಸ್ನಾನದ ನಂತರ ಗುಡ್ಡದ ಮಲ್ಲಯ್ಯನ ದೇವಸ್ಥಾನಕ್ಕೆ ಬರಲಾಗುವುದು. ಮಹಾಪೂಜೆ ಕಾರ್ಯಕ್ರಮ.ಮುಂದಿನ ದಿನಗಳ ಬಗ್ಗೆ ಪೂಜಾರಿಗಳು ಹೇಳಿಕೆ ಹೇಳುವರು. ನಂತರ ದೇವಸ್ಥಾನದಲ್ಲಿ ದಾಸೋಹ ಅನ್ನಪ್ರಸಾದ ವ್ಯವಸ್ಥೆ ಇದ್ದು,
ಗುಡ್ಡದ ಮಲ್ಲಯ್ಯನ ಜಾತ್ರೆಯ ಅಂಗವಾಗಿ ಗುಂಡು ಎತ್ತುವ ಸ್ಪರ್ಧೆ, ಉಸುಕಿನ ಚೀಲ ಎತ್ತುವ ಸ್ಪರ್ಧೆ,ಕೈಕಲ್ಲು ಎತ್ತುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ವಿಜೇತರಾದವರಿಗೆ ಸೂಕ್ತ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.