ರಾಮ ಮಂದಿರ ಲೋಕಾರ್ಪಣೆ : ಶಿರವಾಳ ಗ್ರಾಮದಲ್ಲಿ ದೇವಸ್ಥಾನಗಳ ಸ್ವಚ್ಚತಾ ಅಭಿಯಾನ

ಶಹಾಪುರ : ಅಯೋಧ್ಯೆಯಲ್ಲಿ  ರಾಮ ಮಂದಿರ ಲೋಕಾರ್ಪಣೆ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಯವರ ಆದೇಶದಂತೆ ದೇಶದಾದ್ಯಂತ ಮಠ ಮಂದಿರಗಳನ್ನು ಸ್ವಚ್ಛಗೊಳಿಸುವ ಅಭಿಯಾನವು ಜನವರಿ 21 ರ ವರೆಗೂ ನಡೆಯುತ್ತದೆ, ಈ ಅಭಿಯಾನದ ಭಾಗವಾಗಿ ಇಂದು ಶಿರವಾಳ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡಲಾಯಿತು. ನಂತರ ವೀರಭದ್ರೇಶ್ವರ ಭಾವಚಿತ್ರ ಹಾಗೂ ಶ್ರೀ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಸಾದವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಅಯೋದ್ಯೆ ಮಂತ್ರಾಕ್ಷತೆಯ ತಾಲೂಕು ಸಹ ಸಂಚಾಲಕರಾದ ರಮೇಶ್ ಕೊಲ್ಕರ್, ಗ್ರಾಮ ಪಂಚಾಯತ ಸದಸ್ಯರಾದ ರಾಜಶೇಖರ್ ಕೊಲ್ಕರ್,ವಿಶ್ವನಾಥ್ ಹೋತಿನಮಡು, ಸಿದ್ದಲಿಂಗಪ್ಪ ಜೈನಪುರ್,ಈರಣ್ಣ ಸಾಹುಕಾರ್,ದೇವೇಂದ್ರ ಕೊಲ್ಕರ್, ಶರಣಯ್ಯ ಶಾಸ್ತ್ರೀಗಳು, ಅಂಬಣ್ಣ ಡೈರಿ, ಭೀಮರಾಯ ಕೊಲ್ಕರ್, ಅಂಬಣ್ಣ ಬೆಲ್ಲದ, ಸಿದ್ದಲಿಂಗಪ್ಪ ಯಕ್ಕಳ್ಳಿ,ಮೌನೇಶ್ ದಂಡಂಬಳಿ, ನಿತ್ಯಾನಂದ ಪಲ್ಲೆದ್ ಇನ್ನಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *