ಮುಂಗಾರು ಬಿತ್ತನೆ ಆರಂಭ.ಕಳಪೆ ಬೀಜ ಮತ್ತು ರಸಗೊಬ್ಬರ ಮಾರಾಟದ ಶಂಕೆ.ರೈತರು ಮತ್ತು ರಸಗೊಬ್ಬರದ ಅಂಗಡಿಯವರು ಎಚ್ಚರಿಕೆಯಿಂದಿರಲು ಎಸ್ಪಿ ವೇದಮೂರ್ತಿ ಮನವಿ

ಯಾದಗಿರಿ:ಈಗಾಗಲೇ ಮುಂಗಾರು ಪ್ರಾರಂಭವಾಗುವ ಹಂತದಲ್ಲಿದ್ದು ಜಿಲ್ಲೆಯಲ್ಲಿ ಕಳಪೆ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡುವ ಶಂಕೆ ವ್ಯಕ್ತವಾಗಿದ್ದು, ರೈತರು ಮತ್ತು ರಸಗೊಬ್ಬರದ ಅಂಗಡಿಯವರು ಮೋಸ ಹೋಗದಂತೆ ಎಚ್ಚರಿಕೆಯಿಂದಿರಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ  ಡಾ.ವೇದಮೂರ್ತಿ ಎಚ್ಚರಿಕೆ ನೀಡಿದ್ದಾರೆ.

 

ಇದಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ವಡಗೇರ ತಾಲೂಕಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖಾಜಾಹುಸೇನ್ ಎನ್ನುವ ವ್ಯಕ್ತಿ ಕೆಪಿಎನ್ ಆಗ್ರೋ ಎನ್ನುವ ರಸಗೊಬ್ಬರ ಅಂಗಡಿ ಪ್ರಾರಂಭಿಸಿದ್ದು, ರೈತರಿಗೆ ರಸ ಗೊಬ್ಬರ ಒದಗಿಸಲು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ನಾಗನಟಗಿ ಗ್ರಾಮದ ಸಾಯಿಬಣ್ಣ/ಅಂಬ್ಲಪ್ಪ ದೇವದುರ್ಗ ಎನ್ನುವವರನ್ನು ಪರಿಚಿತರಿಂದ ಪರಿಚಯಿಸಿಕೊಂಡಿದ್ದು,ರಸ ಗೊಬ್ಬರಕ್ಕಾಗಿ ಫೋನ್ ಮೂಲಕ ಮನವಿ ಮಾಡಿದ್ದಾನೆ.ಜೊತೆಗೆ ಆತನ ಬ್ಯಾಂಕ್ ಖಾತೆಗೆ ಎರಡು ಲಕ್ಷ ರೂಪಾಯಿ ನಗದು ಹಣವನ್ನು ಹಾಕಿದ್ದರಿಂದ,ಸಾಯಿಬಣ್ಣನು 130 ಚೀಲ ರಸಗೊಬ್ಬರವನ್ನು ಎರಡು ಪಿಕಪ್ ಗಾಡಿಗಳ ಮೂಲಕ ಅಂಗಡಿಗೆ ತಲುಪಿಸಿದ್ದಾನೆ.ಅದರಲ್ಲಿ ಒಂದು ಚೀಲವನ್ನು ತೆಗೆದು ನೋಡಿದಾಗ ಅದರಲ್ಲಿ ದಪ್ಪನೆಯ ಕಾಳುಗಳು ಕಂಡು ಬಂದಿದ್ದು, ಇದು ಡಿಎಪಿ ಗೊಬ್ಬರ ಅಲ್ಲವೆಂದು ವಡಗೇರಾ ಪೋಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಸಾಯಿಬಣ್ಣನು ಫೋನಾ ಸ್ವಿಚ್ ಆಫ್ ಮಾಡಿಕೊಂಡಿದ್ದು, ಆತನನ್ನು ಹಿಡಿಯಲು ಪೋಲೀಸರಿಂದ ಕಾರ್ಯಚರಣೆ ಆರಂಭಿಸಲಾಗಿದೆ ಎಂದು ಎಸ್ಪಿ ಮೂವರು ತಿಳಿಸಿದರು.ಆದ್ದರಿಂದರಸಗೊಬ್ಬರ ಅಂಗಡಿಯವರು ಮತ್ತು ರೈತರು ಈ ರೀತಿಯಾಗಿ ಮೋಸ ಹೋಗಬಾರದು ಎಂದು ಎಸ್ಪಿಯವರು ಎಚ್ಚರಿಸಿದ್ದಾರೆ.

About The Author