ಹಾಲುಮತ ಸಂಸ್ಕೃತಿ ವೈಭವ |ನಾಳೆ  ಯುವ ಜನ ಸಮಾವೇಶ | ಬಿ.ವಾಯ್. ವಿಜಯೇಂದ್ರ ಭಾಗಿ 

ಶಹಾಪುರ : 2024ರ ಹಾಲುಮತ ಸಂಸ್ಕೃತಿ ವೈಭವವು ಅದ್ದೂರಿಯಾಗಿ ತಿಂಥಣಿ ಬ್ರಿಜ್ ನಲ್ಲಿ ನಡೆಯಲಿದ್ದು ನಾಳೆ ಯುವಜನ ಸಮಾವೇಶ ನಡೆಯಲಿದ್ದು, ಈ ಸಮಾವೇಶದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಪಾಲ್ಗೊಳ್ಳಲಿದ್ದು ಹಾಲುಮತ ಸಮಾಜದವರು‌ ಅತಿ ಹೆಚ್ಚಿನ ಸಂಖ್ಯೆಯಲ್ಲಿ  ಪಾಲ್ಗೊಳ್ಳುವಂತೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಕಾರ್ಯದರ್ಶಿಯಾದ ಶರಭಣ್ಣ ರಸ್ತಾಪುರ ಮತ್ತು ಖಜಾಂಚಿಯಾದ ಬಲಭೀಮ ಮಡ್ನಾಳ ಹಾಲುಮತ ಸಮಾಜದ ಬಾಂಧವರಿಗೆ ಕರೆ ನೀಡಿದ್ದಾರೆ.

ನಾಳೆಯ ಯುವ ಜನ ಸಮಾವೇಶದಲ್ಲಿ
ಸಂಸದರಾದ ಭಗವಂತ ಖೂಬಾ,ಅಮರೇಶ ನಾಯಕ,ಮಾಜಿ ಸಚಿವರಾದ ಎಂಟಿಬಿ ನಾಗರಾಜ,ಶಾಸಕರಾದ ದೊಡ್ಡನಗೌಡ ಪಾಟೀಲ್,ಶಾಸಕರು,ಮಾಜಿ ಸಚಿವರು,ಶಾಸಕರು,ಸೇರಿದಂತೆ ಹಲವು ಮುಖಂಡರು,ಸಮಾಜದ ನೇತಾರರು ಯುವಕರು ಹಿತೈಷಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.  ತಿಂತಿಣಿಯ ಕನಕ ಗುರು ಪೀಠದ ಪೂಜ್ಯರಾದ ಶ್ರೀ ಸಿದ್ದರಮಾನಂದಪುರಿ ಸ್ವಾಮೀಜಿಯವರ ನೇತೃತ್ವದಲ್ಲಿ ಕಾರ್ಯಕ್ರಮವು ನಡೆಯಲಿದ್ದು,
ತಿಂತಣಿ ಬ್ರಿಜ್ ನಿಂದ ಕನಕ ಗುರುಪೀಠದ ವರೆಗೆ ಬೈಕ್ ರ್ಯಾಲಿ ಇರುವುದರಿಂದ ಯುವಕರು ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

Leave a Reply

Your email address will not be published. Required fields are marked *