ಗ್ರಾಮ ಪಂಚಾಯಿತಿ ಪಿಡಿಓ, ಸಿಬ್ಬಂದಿ ಬಯೋಮೆಟ್ರಿಕ್ ಹಾಜರಾತಿಯಲ್ಲಿ ಭಾರಿ ಗೋಲ್ಮಾಲ್ ?

ವಡಗೇರಾ : ಗ್ರಾಮೀಣ ಮಟ್ಟದಲ್ಲಿ ಗ್ರಾಮ ಪಂಚಾಯಿತಿಯನ್ನು ಸಬಲೀಕರಣಗೊಳಿಸಲು ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಗ್ರಾಮ ಪಂಚಾಯಿತಿಗೆ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಬಾರದೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು 15 ದಿನಕ್ಕೊಮ್ಮೆ ಬರುವತ್ತಿದ್ದಾರೆ ಎನ್ನುವ ಬಲವಾದ ಆರೋಪಗಳು ರಾಜ್ಯಾದ್ಯಂತ ಕೇಳಿ ಬರುತ್ತಿತ್ತು. ಸರಕಾರ ಇದನ್ನು ಸರಿಪಡಿಸಲು ಕೇಂದ್ರ ಸ್ಥಾನದಲ್ಲಿಯೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇರಬೇಕೆಂದು ಆದೇಶವಿದ್ದರೂ, ಅಧಿಕಾರಿಗಳು ಬರುತ್ತಿರಲಿಲ್ಲ. ಇದನ್ನು ಸುಧಾರಿಸಲು ಸರಕಾರ ಬಯೋಮೆಟ್ರಿಕ್ ಇ- ಹಾಜರಾತಿಯನ್ನು ಜಾರಿಗೆ ತಂದಿತು. ಆದರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಇತರ ಅಧಿಕಾರಿಗಳು ಅದರಲ್ಲಿಯೂ ಗೋಲ್ಮಾಲ್ ಮಾಡಿರುವುದು ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಹಯ್ಯಳ ಬಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಲ್ಲಿ ಕಂಡುಬಂದಿದೆ ಎನ್ನುವ ಬಲವಾದ ಅನುಮಾನ ವ್ಯಕ್ತವಾಗಿದೆ ?

ಗ್ರಾಮ ಪಂಚಾಯಿತಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಳೆದ ಕೆಲ ದಿನಗಳಿಂದ ಗ್ರಾಮ ಪಂಚಾಯಿತಿಗೆ ಹಾಜರಾಗಿಲ್ಲ. ಕಾರಣ ಇಷ್ಟೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ 2 ರಿಂದ 3 ಗ್ರಾಮ ಪಂಚಾಯಿತಿಗಳನ್ನು ನಿಭಾಯಿಸಲು ಜಿಲ್ಲಾ ಪಂಚಾಯಿತಿ ಆಡಳಿತವು ಆದೇಶ ನೀಡಿರುತ್ತದೆ.
ಇದನ್ನೇ ಸದುಪಯೋಗ ಪಡಿಸಿಕೊಂಡ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪಂಚಾಯಿತಿಗಳಿಗೆ ಸರಿಯಾದ ಸಮಯಕ್ಕೆ ಬಾರದೆ ನೆಪ ಹೇಳಿಕೊಂಡು ಪಟ್ಟಣದಲ್ಲಿಯೇ ಉಳಿಯುತ್ತಿದ್ದಾರೆ ?.

ಇಷ್ಟೆಲ್ಲ ಆದರೂ ಗ್ರಾಮ ಪಂಚಾಯಿತಿಯಲ್ಲಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿ ಬೀಳುತ್ತಿದೆ.ಅದು ಹೇಗೆ ಸಾಧ್ಯ ?. ಬಯೋಮೆಟ್ರಿಕ್ ಹಾಜರಾತಿ ಇದ್ದರೆ ಮಾತ್ರ ಸರಕಾರ ಅಧಿಕಾರಿಗಳಿಗೆ ಸಂಬಳ ಕೊಡುತ್ತಿದೆ ಎಂದು ಹೇಳಿರುವುದರಿಂದ, ಅಧಿಕಾರಿಗಳಿಗೆ ಕಷ್ಟಕರ ಕೆಲಸ ಎಂದು ಮತ್ತು ಗ್ರಾಮೀಣ ಪ್ರದೇಶಗಳಿಗೆ ಕರ್ತವ್ಯ ನಿರ್ವಹಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹೋಗುತ್ತಾರೆ ಎನ್ನುವ ಕಾರಣದಿಂದ ಈ ಪದ್ಧತಿ ಜಾರಿಗೆ ತಂದಿತು.ಹಯ್ಯಳ ಬಿ ಗ್ರಾಮ ಪಂಚಾಯತಿಯಲ್ಲಿ 11 ಜನಕ್ಕೂ ಹೆಚ್ಚು ಸಿಬ್ಬಂದಿಗಳುಂಟು.ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಬಯೋಮೆಟ್ರಿಕ್ ಹಾಜರಾತಿ ಪಂಚಾಯಿತಿಯ ಇತರ ಸಿಬ್ಬಂದಿಯವರು ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ !,ಸಿಬ್ಬಂದಿಗಳ ಬಯೋಮೆಟ್ರಿಕ್ ಹಾಜರಾತಿಯನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೇ ನೋಂದಣಿ ಮಾಡುತ್ತಿದ್ದಾರೆ. ತಮ್ಮ ಹಾಜರಾತಿಯನ್ನು ಬೇರೆ ಸಿಬ್ಬಂದಿಯವರ ಬೆರಳಿಗೆ ನೋಂದಣಿ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ !

ಈಗಾಗಲೇ ಕೆಲವರು ಉನ್ನತ ತನಿಖೆಗಾಗಿ ರಾಜ್ಯ ಪಂಚಾಯತ್ ರಾಜ್ ಆಯುಕ್ತರಿಗೆ ಇದರ ಬಗ್ಗೆ ಮಾಹಿತಿ ಕೇಳಲಾಗಿದ್ದು, ಉನ್ನತ ಅಧಿಕಾರಿಗಳು ತನಖೆ ನಡೆಸಿದಾಗ ಸತ್ಯಾಂಶ ಹೊರಬರುತ್ತದೆ ಎನ್ನಲಾಗಿದೆ.

About The Author