ಅದ್ದೂರಿಯಾಗಿ ಜರುಗಿದ ಬಲಭೀಮೇಶ್ವರ ರಥೋತ್ಸವ 

ವಡಗೇರಾ : ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಶನಿವಾರದಂದು ಬಲ ಭೀಮೇಶ್ವರ ಜಾತ್ರೆ ರಥೋತ್ಸವ ಅದ್ದೂರಿಯಾಗಿ ಜರುಗಿತು.ಸಂಜೆ ಐದು ಗಂಟೆಗೆ ದೇವರ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಜೈ ಆಂಜನೇಯ ಎನ್ನುವ ಜಯ ಘೋಷದೊಂದಿಗೆ ರಥೋತ್ಸವ ಜರಗಿತು.ಜನವರಿ ಐದರಿಂದ ದೇವರಿಗೆ ಅಭಿಷೇಕ ಅರ್ಚನೆ ಗಂಗಾಸ್ನಾನ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಜೊತೆಯಲ್ಲಿ ಅನ್ನದಾಸೋಹ ಏರ್ಪಡಿಸಲಾಗಿತ್ತು.ಹಯ್ಯಳ ಬಿ,ಐಕೂರು ಸೇರಿದಂತೆ ಇತರ ಗ್ರಾಮಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *