ಮಹಾಶೈವ ಧರ್ಮಪೀಠದಲ್ಲಿ 76 ನೆಯ ‘ ಶಿವೋಪಶಮನ ಕಾರ್ಯ’

ರಾಯಚೂರು : (ಗಬ್ಬೂರು.ಜನೆವರಿ 07,2024) : ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಜನೆವರಿ 07 ರಂದು ಹೊಸವರ್ಷದ ಮೊದಲ ಹಾಗೂ 76 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ವಿಶ್ವೇಶ್ವರ ಶಿವನ ಸನ್ನಿಧಿಯನ್ನರಸಿ ಶ್ರೀಕ್ಷೇತ್ರ ಕೈಲಾಸಕ್ಕೆ ಬಂದಿದ್ದ ಭಕ್ತರುಗಳಿಗೆ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹವನ್ನು ಕರುಣಿಸಿದರು.

ಮಲದಕಲ್ ಗ್ರಾಮದ ಲಕ್ಷೀ ಬಸ್ಸಪ್ಪ ಹಿರೇಕುರುಬರ ಎನ್ನುವ ಮಹಿಳೆಯು ಪೂರ್ಣಗುಣಮುಖರಾಗಿ ಬಂದಿದ್ದು ಇಂದಿನ ವಿಶೇಷವಾಗಿತ್ತು.ಲಕ್ಷ್ಮೀಯವರು ಕಳೆದ ಮೂರ್ನಾಲ್ಕು ವರ್ಷಗಳಿಂದ ವಿಚಿತ್ರಕಾಯಿಲೆಯಿಂದ ಬಳಲುತ್ತಿದ್ದರು.ಊಟ ಮಾಡಿದ್ದು ಜೀರ್ಣವಾಗುತ್ತಿರಲಿಲ್ಲ,ದಿನಬಿಟ್ಟು ದಿನ ಜ್ವರ ಬರುತ್ತಿತ್ತು,ದೈಹಿಕ ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದರು.ಅವರ ಗಂಡ ಬಸ್ಸಪ್ಪ ಪತ್ನಿ ಲಕ್ಷ್ಮಿಯನ್ನು ವೈದ್ಯರು,ಆಯುರ್ವೇದ- ನಾಟಿ,ತಜ್ಞರು,ದೇವರು – ದಿಂಡರು ಅಂತ ಎಲ್ಲ ಕಡೆ ತಿರುಗಾಡಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿಯೂ ಪ್ರಯೋಜನವಾಗಿರಲಿಲ್ಲ.ಇಡೀ ಕುಟುಂಬಕ್ಕೆ ಇದು ದೊಡ್ಡ ಸಮಸ್ಯೆಯಾಗಿತ್ತು.ಮಹಾಶೈವ ಧರ್ಮಪೀಠದ ಭಕ್ತರಲ್ಲೊಬ್ಬರಾದ ಮಲದಕಲ್ಲಿನ ಈಶಪ್ಪ ವಿಶ್ವಕರ್ಮ ಅವರು ವಿಶ್ವೇಶ್ವರ ಶಿವನ ಸನ್ನಿಧಿಗೆ ಲಕ್ಷ್ಮೀ ಬಸ್ಸಪ್ಪ ದಂಪತಿಗಳನ್ನು ಕರೆತಂದಿದ್ದರು.ಮಹಾಶೈವ ಧರ್ಮಪೀಠದಲ್ಲಿ 03.12.2023 ರಂದು ನಡೆದಿದ್ದ 71 ನೆಯ ‘ಶಿವೋಪಶಮನ ಕಾರ್ಯ’ ಕ್ಕೆ ಬಂದಿದ್ದರು.ಬಸ್ಸಪ್ಪ ತನ್ನ ಹೆಂಡತಿಯ ಸಮಸ್ಯೆಯನ್ನು ಪೀಠಾಧ್ಯಕ್ಷರೆದುರು ನಿವೇದಿಸಿಕೊಂಡರು.ಪೀಠಾಧ್ಯಕ್ಷರು ವಿಶ್ವೇಶ್ವರ ಶಿವನಲ್ಲಿ ಲಕ್ಷ್ಮಿಯವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಶಿವಾಭಯವನ್ನು ಕರುಣಿಸಿದ್ದರು.ಇಂದು ನಡೆದ 76 ನೆಯ ಶಿವೋಪಶಮನದಲ್ಲಿ ಸ್ವತಃ ಲಕ್ಷ್ಮಿಯವರೆ ‘ ತಾತ,ನನಗೆ ಅರಾಮ ಆಗಿದೆ’ ಎಂದು ಪೀಠಾಧ್ಯಕ್ಷರಿಗೆ ಹೇಳಿದಾಗ ಭಕ್ತಗಣ ಸಂತೋಷಭರಿತರಾದರು.ಬಸ್ಸಪ್ಪ ಪೀಠಾಧ್ಯಕ್ಷರನ್ನು ಭಕ್ತಿಭಾವದಿಂದ ಸ್ಮರಿಸಿ ತನ್ನ ಕುಟುಂಬ ಅನುಭವಿಸಿದ ನೋವು,ಹಣ ಖರ್ಚು ಮಾಡಿಕೊಂಡಿದ್ದನ್ನು ಪೀಠಾಧ್ಯಕ್ಷರೆದುರು ತೆರೆದಿಟ್ಟರಲ್ಲದೆ ‘ ಹೆಂಡತಿ ಗುಣವಾಗುವ ಆಸೆಯನ್ನೇ ತೊರೆದಿದ್ದರಂತೆ.ನಿರಾಶೆಗೊಂಡವರ ಬಾಳುಗಳಲ್ಲಿಯೂ ವಿಶ್ವೇಶ್ವರ ಶಿವನು ಭರವಸೆಯ ಬೆಳಕು ಮೂಡಿಸುತ್ತಿರುವ ಸಂಗತಿಗೆ ಲಕ್ಷ್ಮೀ ಬಸ್ಸಪ್ಪ ಹಿರೇಕುರುಬರ ಇಂದಿನ ಉದಾಹರಣೆಯಷ್ಟೆ.

ಮದುವೆಯಾಗದ ಎಂಟು ಜನ ತರುಣರು ಕಂಕಣಬಲವನ್ನು ಅನುಗ್ರಹಿಸಲು ಪ್ರಾರ್ಥಿಸಿ ಶಿವ ಸನ್ನಿಧಿಗೆ ಬಂದಿದ್ದು ಇಂದಿನ ಮತ್ತೊಂದು ವಿಶೇಷವಾಗಿತ್ತು.ಮಕ್ಕಳಾಗದವರಿಗೆ ಸಂತಾನ ಭಾಗ್ಯವನ್ನು ಕರುಣಿಸುತ್ತಿರುವ ವಿಶ್ವೇಶ್ವರ ಶಿವನು ಮದುವೆಯಾಗದ ತರುಣ ತರುಣಿಯರಿಗೆ ತನ್ನ ಸನ್ನಿಧಿಗೆ ಬಂದ ತಿಂಗಳೊಪ್ಪತ್ತಿನಲ್ಲಿಯೇ ಕಂಕಣಬಲ ನೀಡುತ್ತಿರುವುದರಿಂದ ಮದುವೆಯಾಗದ ಯುವಕ ಯುವತಿಯರುಗಳು ಮಹಾಶೈವ ಧರ್ಮಪೀಠದತ್ತ ಬರುತ್ತಿದ್ದಾರೆ.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ,ಮೂಲ ಕಾರ್ಯಕರ್ತರುಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ದಾಸೋಹ ಸಮಿತಿಯ ಅಧ್ಯಕ್ಷ ಗುರುಬಸವ ಹುರಕಡ್ಲಿ,ಗಾಯತ್ರಿ ಪೀಠದ ಅಧ್ಯಕ್ಷ ಉದಯಕುಮಾರ ಪಂಚಾಳ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳು ಭಕ್ತಮುಖ್ಯಸ್ಥರುಗಳಾದ ಶಿವಯ್ಯಸ್ವಾಮಿ ಮಠಪತಿ,ಶರಣಗೌಡ ಹೊನ್ನಟಗಿ, ಉಮೇಶ ಸಾಹುಕಾರ ಅರಷಣಗಿ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ, ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಯಲ್ಲಪ್ಪ ಕರಿಗಾರ, ವಿರುಪಾಕ್ಷಪ್ಪ ಗೌಡ,ಬಸವಲಿಂಗ ಪೂಜಾರಿ ಅಮರಾಪುರ,ಶರಣಪ್ಪಗೌಡ ಮೇಟಿ,ಪತ್ರಕರ್ತರುಗಳಾದ ಏಳುಬಾವೆಪ್ಪ ಗೌಡ,ಬಸವರಾಜ ಬ್ಯಾಗವಾಟ್ ,ರಮೇಶ ಖಾನಾಪುರ, ಮೈನುದ್ದೀನ ಮಲದಕಲ್, ರಂಗನಾಥ ಮಸೀದಪುರ,ವೆಂಕಟೇಶ,ಹನುಮೇಶ,ಬೂದಿಬಸವ ಶಾಂತಪ್ಪ ಕರಿಗಾರ ಮತ್ತು ಶಿವಕುಮಾರ ವಸ್ತಾರ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರುಗಳು ಉಪಸ್ಥಿತರಿದ್ದರು.

About The Author