ಸಿದ್ದೇಶ್ವರ ಸ್ವಾಮಿಗಳ ಆದರ್ಶ ಬೆಳಸಿಕೊಳ್ಳಿ – ಮಲ್ಲಿಕಾರ್ಜುನ ಮದ್ನೂರು

ಶಹಾಪುರ : ಶತಮಾನದ ಸಂತ, ನಡೆದಾಡುವ ದೇವರು ಎಂದೇ ಕರೆಯಲ್ಪಡುವ ಸಿದ್ದೇಶ್ವರ ಸ್ವಾಮೀಜಿಗಳು ಪ್ರಸ್ತುತ ಜನಾಂಗಕ್ಕೆ ಮಾದರಿಯಾಗಿ ನಿಂತಿದ್ದಾರೆ. ಅವರ ಆದರ್ಶಗಳು ಇಂದಿನ ಜನಾಂಗಕ್ಕೆ ಮಾದರಿಯಾಗಿವೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಮುದ್ನೂರು ನುಡಿದರು.

ನಗರದ ಬಸವೇಶ್ವರ ವೃತ್ತದಲ್ಲಿ ಸರ್.ಎಂ ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘಟನೆಯಿಂದ ನಡೆದ ಸಿದ್ದೇಶ್ವರ ಸ್ವಾಮಿಗಳ ಪ್ರಥಮ ಪುಣ್ಯಸ್ಮರಣೆಯಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ಸಿದ್ದೇಶ್ವರ ಸ್ವಾಮಿಗಳು ಬದುಕಿದ ರೀತಿ ನಮೆಲ್ಲರಿಗೂ ಮಾದರಿಯಾಗಿದೆ. ಮಂತ್ರ ಹೇಳದೇ ಜಗತ್ತನ್ನು ಮಧುರವಾಗಿಸಿದ, ಕಾವಿ ತೊಡದೇ ಜೀವನವನ್ನು ಕಾವ್ಯಮಯವಾಗಿಸಿದ, ತಂತ್ರ ಮಾಡದೇ ತತ್ವಜ್ಞಾನಿಯಾದ, ಭವಿಷ್ಯ ಹೇಳದೇ ಭಾರತದ ಭವಿಷ್ಯ ಬರೆದ, ಆಡಂಬರವಿಲ್ಲದೇ ಆಧ್ಯಾತ್ಮಕದ ಬಗ್ಗೆ ಅರಿವು ಮೂಡಿಸಿದ ಇಂತಹ ಸಂತರ ಸ್ಮರಣಿ ಮಾಡುವುದು ಶ್ಲಾಘನೀಯವಾಗಿದೆ ಎಂದು ನುಡಿದರು.

ಈ ಸಂಧರ್ಭದಲ್ಲಿ ಸರ್.ಎಂ ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘಟನೆ ತಾಲೂಕ ಅಧ್ಯಕ್ಷರಾದ ಪ್ರದೀಪ ಅಣಬಿ, ಸುನೀಲ ಹಳಿಸಗರ, ಶ್ರೀಶೈಲ ಸಗರ, ಆಂಜನೇಯ ಇಮ್ಲಾಪುರ, ಮೈಲಾರಿ, ಸಂಗಪ್ಪ, ಅಂಬ್ರೇಶ ಕಟ್ಟಿಮನಿ, ಭೀಮರಾಯ ಕಟ್ಟಿಮನಿ, ಮಲ್ಲು ದೇವಿನಗರ, ಭೋಜಪ್ಪ ಮುಂಡಾಸ, ಅಂಬ್ರೇಶ ಶಿರವಾಳ, ಇನ್ನಿತರು ಹಾಜರಿದ್ದರು.

About The Author