ಎಸ್ ಟಿ ಸೇರ್ಪಡೆಗೆ ಒತ್ತಾಯಿಸಿ ವಡಗೇರಾದಲ್ಲಿ ಕುರುಬ ಸಂಘದಿಂದ ಬೃಹತ್ ಪ್ರತಿಭಟನೆ : ಗೊಂಡ ಪರ್ಯಾದ ಪದವೇ ಕುರುಬ ಪದಕ್ಕೆ ಸಮ

Yadagiri ವಡಗೇರಾ : ಗೊಂಡ ಕುರುಬ,ಜೇನು ಕುರುಬ, ಕಾಡು ಕುರುಬ ಪರ್ಯಾಯ ಪದ ಕುರುಬ ಎಂದು ಪರಿಗಣಿಸಿ ಪರಿಶಿಷ್ಟ ಪಂಗಡಕ್ಕೆ(ST) ಸೇರ್ಪಡೆಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರದೇಶ ಗೊಂಡ ಕುರುಬ ಸಂಘದ ವಡಗೇರಾ ತಾಲೂಕು ವತಿಯಿಂದ ಮಂಗಳವಾರ ಪಟ್ಟಣದಲ್ಲಿ  ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. 
 
 ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ ಕಲ್ಬುರ್ಗಿ ಬೀದರ್ ಜಿಲ್ಲೆಗಳಲ್ಲಿ ಗೊಂಡ ಪರ್ಯಾಯ ಪದ ಕುರುಬ ಎಂದು ಪರಿಗಣಿಸಿ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಪಟ್ಟಣದ ಹೊನ್ನಾಯ ತಾತ ದೇವಸ್ಥಾನದಿಂದ ತಹಸಿಲ್ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿ ಕುರಿಗಳ ಜೊತೆಗೆ ರಾಜ್ಯಪಾಲರಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ತಹಶೀಲ್ದಾರರ ಮುಖಾಂತರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಿಂಥಣಿ ಬ್ರಿಜ್ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರು ಪೀಠದ ಕಿರಿಯ ಶ್ರೀಗಳಾದ ಲಿಂಗಬೀರದೇವರು ಪ್ರತಿಭಟನೆ ಉದ್ದೇಶಿಸಿ ಮಾತನಾಡುತ್ತಾ,ಯಾದಗಿರಿ ಬೀದರ್ ಕಲಬುರ್ಗಿ ಜಿಲ್ಲೆಗಳು ಕುರುಬರನ್ನು ಗೊಂಡ ಪರ್ಯಾಯವಾಗಿ ಪರಿಗಣಿಸಲು1997 ರಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಕೇಂದ್ರ ಸರ್ಕಾರದ ಆದೇಶದ ಮೇರೆಗೆ 2014ರ ಸಿದ್ದರಾಮಯ್ಯನವರ ಸರ್ಕಾರ ಕುಲಶಾಸ್ತ್ರ ಅಧ್ಯಯನದ ವರದಿಯ ಪೂರಕ ದಾಖಲೆಗಳನ್ನು ಮೂರು ಬಾರಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಬ್ರಿಟಿಷ್ ಕಾಲದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿತ್ತು. ಅಲ್ಲದೆ ಡಾ.ಬಿಆರ್ ಅಂಬೇಡ್ಕರ್ ಅವರು  ಸಂವಿಧಾನದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದರು ಎಂದರು.
ಹಿರಿಯರಾದ ಸಿದ್ದಣ್ಣಗೌಡ ಕಾಡಂನೂರ ಮಾತನಾಡಿ, ನಮ್ಮ ಸಮುದಾಯ ತಮ್ಮ  ಹಕ್ಕಿಗಾಗಿ ಹೋರಾಟ ಮಾಡುತ್ತಿದೆ.ಎಲ್ಲಾ ಸರ್ಕಾರಗಳು ನಮ್ಮ ಬೇಡಿಕೆ ಈಡೇರಿಸುವಲ್ಲಿ ತೀವ್ರ ನಿರ್ಲಕ್ಷ್ಯ ವಹಿಸುತ್ತಿವೆ.ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ. ಒಗ್ಗಟ್ಟಿನಿಂದ ಹೊರಟ ಮಾಡಿದಾಗ ಮಾತ್ರ ನಮಗೆ ಜಯ ಸಿಗುತ್ತೆ. ಕೆಲವರು ಸುಳ್ಳು ಜಾತಿ ಪ್ರಮಾಣ ಪತ್ರ ತೆಗೆದುಕೊಳ್ಳುತ್ತಿದ್ದೇವೆ ಎನ್ನುತ್ತಾರೆ. ಶುದ್ಧ ಸುಳ್ಳು. ನ್ಯಾಯಯುತವಾದ ಬೇಡಿಕೆಗೆ ಹೋರಾಟ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕೂಡಾ ಪ್ರತಿಯೊಬ್ಬರೂ  ಇದೇ ರೀತಿಯಾಗಿ ಬೆಂಬಲಿಸುವಂತೆ ಕರೆ ನೀಡಿದರು.
ಈ ಪ್ರತಿಭಟನೆಯಲ್ಲಿ ಕುರುಬ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ, ಮರಿಗೌಡ ಹುಲಕಲ್, ವಿಶ್ವನಾಥ ನೀಲಹಳ್ಳಿ,ತಾಲೂಕು ಅಧ್ಯಕ್ಷ ಸಾಯಬಣ್ಣ ವರಕೇರಿ,ಚಂದ್ರಶೇಖರ ವಾರದ್,  ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಪಾರ್ವತಮ್ಮ ಕಾಡಂನೂರ,ಮರೇಪ್ಪ ಬಿಳಾರ, ಸಿದ್ದರಾಮಪ್ಪ ಅರಿಕೇರಾ,ಸಾಯಬಣ್ಣ ಕೆಂಗೂರಿ, ಸಿದ್ದಪ್ಪ ಸಂಕಿನ್,
ಹಣಮಂತರಾಯಗೌಡ ತೇಕರಾಳ,ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ  ಶಾಂತಮ್ಮ ಕರಿಕಳ್ಳಿ,ಪ್ರಭು ವಾರದ,ಮರೇಪ್ಪ ಜಡಿ ಮಲ್ಲಯ್ಯ ಕಸಬಿ, ದೇವಿಂದ್ರಪ್ಪ ಕಡೇಚೂರ, ಮಲ್ಲಿಕಾರ್ಜುನ ಕರ್ಕಳ್ಳಿ, ಚನ್ನಕೇಶವ ಗೌಡ ಬಾಣತಿಹಾಳ,  ಹೊನ್ನಪ್ಪ ಮುಸ್ಟೂರು,ಶಿವು ಪೂಜಾರಿ ಹೈಯಾಳ, ಭಾಗಣ್ಣ ತಡಿಬಿಡಿ,ಮರಿಲಿಂಗಪ್ಪ ಕುಮನೂರ.,ಬೀರೇಶ್ ಚಿರೇತೆನೂರ,ಹಣಮಂತರಾಯ ಜಡಿ,ನಂದಪ್ಪ ಗೌಡ ಹೊರಟೂರ, ಹಣಮಂತ ಪೂಜಾರಿ ಕಂದಳ್ಳಿ, ಹೊನ್ನಪ್ಪ ಕಡೇಚೂರ,ಅನಿಲಗೌಡ ತೇಕರಾಳ ಬೀರಲಿಂಗ ಮುಂಡರಗಿ,ವೆಂಕುಬ ತುರ್ಕನದೊಡ್ಡಿ, ಮಾಳಿಂಗರಾಯ ಕೊಂಕಲ. ಶರಣಗೌಡ ಕ್ಯಾತನಾಳ ಲಚಮಣ್ಣ ನಸಲಾಯಿ,ಮಲ್ಲಿಕಾರ್ಜುನ ಜೋಳದಡಗಿ,ಅಪ್ಪಾಜಿ ಕಲ್ಲಪ್ಪನೂರ,ರೆಡ್ಡಪ್ಪ ಜಡಿ, ವಿಜಯಕ್ಯಾತನಾಳ,ಮೌನೇಶ್ ಪೂಜಾರಿ, ಶಿವಕುಮಾರ್ ಕೊಂಕಲ,ಮಲ್ಲಿಕಾರ್ಜುನ್ ಗೋಸಿ, ಗಡ್ಡೆಲಿಂಗ ಬೆಂಡೆಬೆಂಬಳಿ,  ಹೊನ್ನಪ್ಪ ಯಡ್ಡಳ್ಳಿ,ಮಾದೇವಪ್ಪ ಗೋನಾಲ,ಬಸವರಾಜ ಗೊಂದೇನೂರ, ಸಿದ್ದಪ್ಪ ತಮಣ್ಣೂರ ಸೇರಿದಂತೆ ತಾಲೂಕಿನ ಸಮಾಜದ ಬಂಧುಗಳು ಮಹಿಳೆಯರು ಹಾಗೂ ಇನ್ನಿತರರು ಭಾಗವಹಿಸಿದ್ದರು.

About The Author