ಗ್ರಾ.ಪಂ. ನಿರ್ಲಕ್ಷ : ಸಿಸಿ ರಸ್ತೆಯ ಮೇಲೆ ಹರಿಯುತ್ತಿರುವ ಚರಂಡಿ ನೀರು

೧.ಸಮಸ್ಯೆಗಳ ಆಗರವಾದ ಹಯ್ಯಳ ಬಿ ಗ್ರಾಮ
೨.ಶುದ್ಧ ಕುಡಿಯುವ ನೀರಿಲ್ಲ
೩.ಗ್ರಾಮ ಪಂಚಾಯಿತಿಯ ಆಡಳಿತದ ನಿರ್ಲಕ್ಷ
೪.ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆ
೫.ಚರಂಡಿಗಳ ದುರಾವಸ್ಥೆ.
೬.ಸಾಂಕ್ರಾಮಿಕ ರೋಗ ಹರಡುವ ಭೀತಿ 

ಶಹಾಪುರ : ತಾಲೂಕಿನ ಹಯ್ಯಳ ಗ್ರಾಮದಲ್ಲಿ ದಿನಕ್ಕೊಂದು ಸಮಸ್ಯೆ ಉದ್ಭವಿಸುತ್ತಿವೆ.ಗ್ರಾಮದೊಳಗೆ ರಸ್ತೆಯ ಮೇಲೆ ಚರಂಡಿ ನೀರು ಹರಿಯುತ್ತಿವೆ. ಮನೆಯ ಮುಂದುಗಡೆಯೆ ನೀರು ಹರಿಯುತ್ತಿರುವುದರಿಂದ ಗ್ರಾಮಸ್ಥರು ಮನೆಯ ಹೊರಗಡೆ ಓಡಾಡದ ಪರಸ್ಥಿತಿ ಉಂಟಾಗಿದೆ. ಸಾರ್ವಜನಿಕರು ಗ್ರಾಮ ಪಂಚಾಯಿತಿಯ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.

ಕರೋನಾ ಭೀತಿಯಿಂದ ಇನ್ನೂ ಸಾರ್ವಜನಿಕರು ಹೊರ ಬಂದಿಲ್ಲ. ಇತ್ತೀಚೆಗೆ ರಾಜ್ಯದಲ್ಲಿ ಕರೋನ ರೂಪಾಂತರ ತಳಿ ಮತ್ತೆ ಆರಂಭವಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಕೂಡ ಗ್ರಾಮ ಪಂಚಾಯಿತಿಯವರು ಚರಂಡಿ ಸ್ವಚ್ಛಗೊಳಿಸುವ ಗೋಜಿಗೆ ಹೋಗದೆ ಇರುವದು ದುರಾಡಳಿತದ ಪರಮಾವದಿ.

ಜೆಜೆಎಂ ಕಳಪೆ ಕಾಮಗಾರಿಯಿಂದಾಗಿ ಸಿಸಿ ರಸ್ತೆಗಳನ್ನು ಅಗೆದು ಪೈಪ್ ಗಳನ್ನು ಜೋಡಿಸಲಾಗಿದೆ. ಆದರೆ ಅಗೆದ ಸಿಸಿ ರಸ್ತೆಯನ್ನು ಹಾಗೆಯೇ ಬಿಡಲಾಗಿದೆ.ಇದನ್ನು ಗ್ರಾಮ ಪಂಚಾಯಿತಿಯವರು ಗಮನ ಹರಿಸಬೇಕಿತ್ತು. ಚರಂಡಿಗಳನ್ನು ಸ್ವಚ್ಛಗೊಳಿಸಬೇಕು.ಇಲ್ಲದಿದ್ದರೆ ಚರಂಡಿ ನೀರಿನಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ. ಗ್ರಾಮಸ್ಥರು ಭಯಭೀತರಾಗಿದ್ದಾರೆ. ಗ್ರಾಮ ಪಂಚಾಯಿತಿಯು ಗಮನಹರಿಸಿ ಚರಂಡಿಗಳನ್ನು ಸ್ವಚ್ಛಗೊಳಿಸುತ್ತದೆಯೋ ಕಾದು ನೋಡಬೇಕಿದೆ.

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಸರಕಾರ ಕೋಟಿಗಟ್ಟಲೆ ಹಣವನ್ನು ಗ್ರಾಮ ಪಂಚಾಯಿತಿಗಳಿಗೆ ನೇರವಾಗಿ ನೀಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿಗಾಗಿ,ಸ್ವಚ್ಛತೆ ಕಾಪಾಡಲು, ಚರಂಡಿ ದುರಸ್ತಿ, ಶೈಕ್ಷಣಿಕವಾಗಿ ಸರಕಾರ ಗ್ರಾಮ ಪಂಚಾಯಿತಿಗಳಿಗೆ ನೇರವಾಗಿ ಹಣ
ನೀಡುತ್ತಿದೆ. ಆದರೆ ಸ್ಥಳೀಯ ಆಡಳಿತದ ನಿರ್ಲಕ್ಷದಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಿಷ್ಕಾಳಜಿಯಿಂದ ಹಳ್ಳಿಗಳು ದುರಾವಸ್ಥೆಗೆ ತಲುಪಿವೆ.

ಸಿಸಿ ರಸ್ತೆಗಳ ಮೇಲೆ ಚರಂಡಿ ನೀರು ಹರಿಯುತ್ತಿವೆ. ಅಲ್ಲಿನ ಜನರ ವೈಯಕ್ತಿಕ ಜಾಗಗಳು ಇರುವುದರಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪರಿಹರಿಸಿ ಚರಂಡಿಗಳನ್ನು ದುರಸ್ತಿ ಮಾಡಬೇಕಿದೆ. ನಾನು ನಾಲ್ಕೈದು ಬಾರಿ ಗ್ರಾಮ ಪಂಚಾಯಿತಿಯ ಗಮನಕ್ಕೆ ತಂದಿದ್ದೇನೆ. ಹಣಕಾಸು ಯೋಜನೆಯನ್ನು ರೂಪಿಸುವ ಕಾಲಕ್ಕೆ ಚರಂಡಿ ನಿರ್ಮಾಣಕ್ಕಾಗಿ ಅಂದಾಜು ಪ್ರತಿಯ ಆದ ಮೇಲೆ ಕೆಲಸ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ

ಮೌನೇಶ ಪೂಜಾರಿ ಮಾಜಿ ಗ್ರಾ.ಪಂ.ಅಧ್ಯಕ್ಷ.ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ