ತಾಲೂಕು ಆರೋಗ್ಯ ಅಧಿಕಾರಿ ವರ್ಗಾವಣೆಗೆ ದಲಿತ ಸಂಘರ್ಷ ಸಮಿತಿ ಆಗ್ರಹ

ಶಹಾಪುರ : ತಾಲೂಕಿನಲ್ಲಿ ತಾಲೂಕು ಆರೋಗ್ಯ ಅಧಿಕಾರಿ ರಮೇಶ್ ಗುತ್ತೇದಾರ್ ಅವರು ಹಲವು ವರ್ಷಗಳಿಂದ ತಾಲೂಕಿನಲ್ಲಿಯೇ ಇದ್ದು ಅವರ ಕಾರ್ಯವೈಖರಿಗೆ ಜನ ಬೇಸತ್ತಿದ್ದು ಕೂಡಲೇ ಅವರನ್ನು ಬೇರೆಡೆ ವರ್ಗಾಯಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬಿ ಕೃಷ್ಣಪ್ಪ ಬಣದವರು ಒತ್ತಾಯಿಸಿದರು. ಇಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ ಅವರು, ಸಮುದಾಯದ ಆರೋಗ್ಯ ಕೇಂದ್ರದ ವೈದ್ಯರ ಪ್ರಭಾವ ಬಳಸಿ ತಾಲೂಕಿನಲ್ಲಿ ಖಾಯಂ ನೆಲೆಯುರಿದ್ದಾರೆ.ಇಲಾಖಾ ವಿಚಾರಣೆ ನಡೆಸಿ ಬೇರೆಡೆ ವರ್ಗಾಯಿಸುವಂತೆ ಒತ್ತಾಯಿಸಿದರು.

ಬಸ್ಸು ನಾಟಿಕರ್ ತಾಲ್ಲೂಕು ಸಂಚಾಲಕರು, ಜಿಂದಾವಲಿಸಾಬ್, ರಾಯಪ್ಪ ಕಂಚನಭಾವಿ, ರಾಹುಲ್ ನಾಟಿಕರ್, ಭೀಮರಾಯ, ಮೌನೇಶ, ಸುರೇಶ ದೊಡ್ಡಮನಿ, ಶರಣಪ್ಪ, ಖಂಡಪ್ಪ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *