ಕನ್ನಡದಲ್ಲಿ ನಾಮಫಲಕ ಹಾಕುವಂತೆ ಕರವೇ ಆಗ್ರಹ

ಶಹಾಪುರ : ತಾಲೂಕಿನಲ್ಲಿ ವಾಣಿಜ್ಯ ವ್ಯಾಪಾರಸ್ಥರು ತಮ್ಮ ಮಳಿಗೆಗಳ ಮೇಲೆ ಕನ್ನಡದಲ್ಲಿ ನಾಮಫಲಕ ಹಾಕುವಂತೆ ತಹಸೀಲ್ದಾರರು ಆದೇಶಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಶಹಪೂರು ತಾಲೂಕು ಘಟಕದಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ತಾಲೂಕಿನ ಸರಕಾರಿ ಕಚೇರಿ ಅಂಗಡಿಗಳ ಮೇಲೆ ಶೇ. 60ರಷ್ಟು ಕನ್ನಡದಲ್ಲಿ ನಾಮಫಲಕ ಇರುವಂತೆ ಸರಕಾರ ಆದೇಶಿಸಬೇಕು. ಅದೇ ರೀತಿಯಾಗಿ ಡಿಸೆಂಬರ್ 27 ರಂದು ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ನಾರಾಯಣಗೌಡ ಅವರನ್ನು ಕನ್ನಡ ನಾಮಪಲಕ ಹಾಕುವಂತೆ ಪ್ರತಿಭಟನೆ ಮಾಡಿದ್ದರೆಂದು ಸರಕಾರ ಅವರನ್ನು ಬಂಧಿಸಿದೆ. ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು‌. ಕರವೇ ತಾಲೂಕು ಅಧ್ಯಕ್ಷರಾದ ಅಬ್ದುಲ ಹಾದಿಮನಿ, ಉಮೇಶ ಮಾಮನಿ, ಮೌನೇಶ್ ನಾಟೇಕರ್, ಭೀಮರಾಯ, ರಾಘವೇಂದ್ರ, ನಾಗರಾಜ, ಮಲ್ಲಯ್ಯ ಸ್ವಾಮಿ,ಕರಿಬಸ್ಸಪ್ಪ,ಮೈನುದ್ದೀನ್, ಜೈವಂತ, ದೇವು,ಖಾಜಾಪಟೇಲ್ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *