ಅಂಬೇಡ್ಕರವರ ಕನಸು ನನಸಾಗಬೇಕೆಂದರೆ ಉನ್ನತ ಶಿಕ್ಷಣ ಪಡೆಡು ಸ್ಥಾನಮಾನಗಳನ್ನು ಗಳಿಸಿ: ಜ್ಙಾನಪ್ರಕಾಶ ಸ್ವಾಮಿಜಿ

ಶಹಾಪುರ: ಅಂಬೇಡ್ಕರವರ ಕನಸು ನನಸಾಗಬೇಕೆಂದರೆ ಉನ್ನತ ಶಿಕ್ಷಣ ಪಡೆಡು ಸ್ಥಾನಮಾನಗಳನ್ನು ಗಳಿಸಿ, ರಾಜಕೀಯವಾಗಿ ಪ್ರಭಲರಾಗಿ ಸಮೂದಾಯ, ಸಮಾಜದ ಮೈಸೂರಿನ ಉರಿಲಿಂಗಪೆದ್ದಿ ಸಂಸ್ಥಾನ ಜ್ಙಾನಪ್ರಕಾಶ ಸ್ವಾಮಿಜಿ ಕರೆ ನೀಡಿದರು.ಜೊತೆಗೆ ದೇಶವನ್ನು ಮುನ್ನಡೆಸುವಲ್ಲಿ ತಲ್ಲಿನರಾಗಿ ಎಂದು ಮೈಸೂರಿನ ಉರಿಲಿಂಗಪೆದ್ದಿ ಸಂಸ್ಥಾನ ಜ್ಙಾನಪ್ರಕಾಶ ಸ್ವಾಮಿಜಿ ಕರೆ ನೀಡಿದರು.

ತಾಲೂಕಿನ ಗೋಗಿ(ಕೆ) ಗ್ರಾಮದಲ್ಲಿ ಅಂಬೇಡ್ಕರವರ ೧೩೧ ನೇ ಜಯಂತೋತ್ಸವ ಹಾಗೂ ಗೌತಮ ಬುದ್ಧರ ಪ್ರತಿಮೆ ಅನಾವರಣ ಕಾರ್ಯಕ್ರಮದ ಸಂವಿಧಾನ ಉಳಿಸಿ- ಅಸ್ಪೃಶ್ಯತೆ ಅಳಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಬರವಣಿಗೆ, ಪುಸ್ತಕ ಮತ್ತು ಜ್ಣಾನದ ಮೂಲಕ ದೇಶದ ಜನತೆ ಅಂಬೇಡ್ಕರನ್ನು ಕಾಣಬೇಕಿದೆ.ಸಿಗುವ ಸೌಲಭ್ಯಗಳನ್ನು ಜನರಿಗೆ ತಿಳಿಸುವುದರೊಂದಿಗೆ ಬಾಬಾ ಸಾಹೇಬರ ಜಯಂತಿ ಆಚರಿಸಬೇಕು.ಶಿಕ್ಷಣದಲ್ಲಿ ಸಾಧನೆ ಮಾಡುವಲ್ಲಿ ಹಿನ್ನಡೆಯಾಗುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಜ್ಞಾನವನ್ನು ನೀಡಿ ಎಂದು ತಿಳಿಸಿದರು.

ಮಾಜಿ ಶಾಸಕ ಗುರು ಪಾಟೀಲ್ ಮಾತನಾಡಿ, ಅಸ್ಪೃಶ್ಯತೆ ಎಂಬ ಕಿಳರಿಮೆ ಮೊದಲು ನಮ್ಮ ಮನಸ್ಸಿನಿಂದ ಹೊರಹಾಕಿದ್ದಲ್ಲಿ ಅಸ್ಪೃಶ್ಯತೆ ಅಳಿಸಬಹುದು. ಬುದ್ಧರ ತತ್ವದಲ್ಲಿ ಎಲ್ಲವನ್ನು ಅಳಿಸಬಹುದು ಹಾಗೆಯೆ ಪ್ರತಿ ಸಮಸ್ಯೆಗೂ ಇದೆ ಎಂದು ನುಡಿದರು.ಈ ಸಂದರ್ಭದಲ್ಲಿ ಪೂಜ್ಯ ಬಂತೇಜಿ ಆದಿತ್ಯ, ಸಾರಿಪುತ್ರ, ಸಂಗಪಾಲ ಹಾಗು ಬೋಧಿನಂದ ದಿವ್ಯ ಸಾನಿಧ್ಯ ವಹಿಸಿದ್ದರು.ಮಲ್ಲಪ್ಪ ಬೀರನೂರ, ಚಂದಪ್ಪಸಿ, ಮಲ್ಲಿಕಾರ್ಜುನ ಉಳಂಡಗೇರಿ, ಮಲ್ಲಿಕಾರ್ಜುನ ಪೂಜಾರಿ, ನೀಲಕಂಠ ಬಡಿಗೇರ, ಬಾಬುಗೌಡ ಭೂತಾಳಿ, ಮಲ್ಲಣ್ಣ, ಜೈಭೀಮ, ದೇವಿಂದ್ರ ಹೆಗ್ಗಡೆ, ರವಿಂದ್ರನಾಥ ಹೊಸ್ಮನಿ, ಶಂಕರ ಸಿಂಘ, ಚಂದಪ್ಪ ಗೌಡ, ಚನ್ನಪ್ಪಗೌಡ ಹೋತಪೇಟೆ, ಖಾಜಾಸಾಬ್, ಶ್ರೀಶೈಲ ಹೊಸಮನಿ, ರವಿಕುಮಾರ್ ಮೂಲಿಮನಿ, ಹಣುಮಂತ, ಬೌದ್ಧ ಉಪಾಸಕರಾದ ಮಲ್ಲಪ್ಪ ಕಾಂಬ್ಳೆ, ದತ್ತಪ್ಪಾ ಸೇರಿದಂತೆ ಇತರರು ಇದ್ದರು.
.

About The Author