ಶಹಾಪುರ:ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕಾದರೆ ಶಿಕ್ಷಕರ ಕಾಳಜಿ ಮುಖ್ಯ.ಜ್ಞಾನಕ್ಷೇತ್ರದಲ್ಲಿ ಇಂದು ಪ್ರಪಂಚ ಅಪಾರ ಬದಲಾವಣೆಗಳಿಗೆ ಒಳಗಾಗುತ್ತಿದ್ದು, ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಪ್ರಸ್ತುತವಾಗಿರುವ ಕಲಿಕೆಯ ಕ್ರಮವನ್ನು ಇನ್ನು ಪ್ರಾಯೋಗಿಕವಾಗಿ ಸಮಗ್ರವಾಗಿ ಕಲಿಯುವವರನ್ನು ಕೇಂದ್ರವಾಗಿಟ್ಟುಕೊ0ಡು ಸುಧಾರಣೆ ತರುವ ಪ್ರಯತ್ನಕ್ಕೆ ಎಲ್ಲ ಶಿಕ್ಷಕ ಸಮುದಾಯದವರ ಕಾಳಜಿ ಅಗತ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಪಾಟೀಲ ತಿಳಿಸಿದರು.
ನಗರದ ಹೊರವಲಯದ ಆದರ್ಶ ವಿದ್ಯಾಲಯದಲ್ಲಿ ಶಿಕ್ಷಣ ಇಲಾಖೆ ಜಿಲ್ಲಾ ಮತ್ತು ಶೀಕ್ಷಣ ತರಬೇತಿ ಸಂಸ್ಥೆ, ಅಜೀಂ ಪ್ರೇಂಜೀ ಫೌಂಡೇಶನ ವತಿಯಿಂದ ಶಿಕ್ಷಕರಿಗಾಗಿ ಕಲಿಕಾ ಚೇತರಿಕೆ ಉಪಕ್ರಮ ಕಾರ್ಯಕ್ರಮದ ತರಬೇತಿ ಆಯೋಜಿಸಿದ ಸಂದರ್ಭದಲ್ಲಿ ತರಬೇತಿ ಕಾರ್ಯಗಾರದ ಅಧ್ಯಕ್ಷತೆವಹಿಸಿ ಮಾತನಾಡಿದರು.ಪ್ರತಿಯೊಂದು ಮಗುವಿಗೂ ಸಮಾನವಾದ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಹಾಗೂ ಜೀವನಪರ್ಯಂತ ಕಲಿಕೆಯ ಸದಾವಕಾಶಗಳನ್ನು ಖಾತ್ರಿಯಾಗಿ ಒದಗಿಸಿಕೊಡುವ ಉದ್ದೇಶ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಡಗಿದ್ದು, ಪ್ರತಿಯೊಬ್ಬ ಶಿಕ್ಷಕರ ಮಹತ್ವಪೂರ್ಣ ಯೋಜನೆಯನ್ನು ಸಾರ್ಥಕ ಪಡಿಸುವಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು.ತರಬೇತಿಯ ಸದುಪಯೋಗ ಸರ್ವರು ಪಡೆಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಯಟ್ ಉಪನ್ಯಾಸಕರಾದ ಇಂದಿರಾ ಬಡಿಗೇರ್,ಕ್ಷೇತ್ರ ಸಮನ್ವಯಾಧಿಕಾರಿ ರೇಣುಕಾ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಶಂಕರಪ್ಪ, ಚಂದಪ್ಪ ಸಾಬ್ ರೆಡ್ಡಿ, ಸೇರಿದಂತೆ ಶಿಕ್ಷಣ ಸಂಯೋಜಕರು, ಸಂಪನ್ಮೂಲ ವ್ಯಕ್ತಿಗಳು, ತರಬೇತಿ ಶಿಕ್ಷಕರು ಪಾಲ್ಗೊಂಡಿದ್ದರು.