ಜನವರಿ 2 ರಂದು ಎಸ್.ಟಿ ಸೇರ್ಪಡೆಗಾಗಿ ಕುರುಬ ಸಮಾಜದವರಿಂದ ಪ್ರತಿಭಟನೆ

ವಡಗೇರಾ : ಪರಿಶಿಷ್ಟ ಪಂಗಡಕ್ಕೆ ಕುರುಬ ಸಮಾಜ ಸೇರ್ಪಡೆಗೆ ಆಗ್ರಹಿಸಿ ಜನವರಿ 2ರಂದು ಪ್ರತಿಭಟನೆಯಲ್ಲಿ ಸಮಾಜದ ಬಾಂಧವರು ಭಾಗವಹಿಸಿ ಗೊಂಡ ಪರ್ಯಾಯ ಪದ ಕುರುಬ ಪರಿಗಣಿಸಿ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿ ವಡಗೇರಾ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಕುಲಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟ ಯಶಸ್ವಿಗೊಳಿಸಬೇಕೆಂದು ಕುರುಬ ಸಮಾಜದ ತಾಲೂಕ ಅಧ್ಯಕ್ಷ ಸಾಬಣ್ಣ ವರಿಕೇರಿ ಹೇಳಿದರು.ವಡಗೇರಾ ಪಟ್ಟಣದ ಶಿವಬಾಲಾಜಿ ಕಲ್ಯಾಣ ಮಂಟಪದಲ್ಲಿ ಕುರುಬ ಸಮಾಜದ ವತಿಯಿಂದ ಗುರುವಾರ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಎಸ್.ಟಿ ಮೀಸಲಾತಿಗಾಗಿ ನಿರಂತರ ಹೋರಾಟ, ಸಮಾವೇಶ‌,ಧರಣಿಗಳ ಮೂಲಕ ಸರಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದೇವೆ .

ಕುರುಬರು ಎಸ್ ಟಿ ಮೀಸಲಾತಿಗಾಗಿ ಕುಲಶಾಸ್ತ್ರೀಯ ಅಧ್ಯಯನಕ್ಕೆ ಆದೇಶ ನೀಡಲಾಗಿತ್ತು. ರಾಜ್ಯ ಸರ್ಕಾರ ಕಲಬುರ್ಗಿ, ಯಾದಗಿರಿ, ಬೀದರ್,ಮೂರು ಜಿಲ್ಲೆಗಳ ಗೊಂಡ ಕುರುಬರ ಬಗ್ಗೆ ಧಾರವಾಡ ವಿಶ್ವವಿದ್ಯಾಲಯದಲ್ಲಿ ಸಂಪೂರ್ಣ ಅಧ್ಯಯನ ಮಾಡಿ ಮಾಹಿತಿ ಕಲೆಹಾಕಿ 2014ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು.ಮೂರು ಬಾರಿ ಪೂರಕ ದಾಖಲೆಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ನಮ್ಮದು ಹೊಸ ಬೇಡಿಕೆಯಲ್ಲ. ನಮ್ಮ ಸಮಾಜದ ಸ್ವಾಮಿಗಳ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಅನೇಕ ಮಂತ್ರಿಗಳನ್ನು ಭೇಟಿಯಾಗಿದ್ದು ಹೋರಾಟ ನಡೆಸುತ್ತಲೇ ಬಂದರೂ ಪ್ರಯೋಜನವಾಗಿಲ್ಲ. ಗೊಂಡ ಕುರುಬ ಪದ ಎಸ್ ಟಿ ಗೆ ಸೇರಿಸುವ ಮೂಲಕ ನಮಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಕೇಂದ್ರ ಸರ್ಕಾರ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.

ಜನವರಿ 2 ರಂದು ಪಟ್ಟಣದ ಹೊನ್ನಯ್ಯ ತಾತನ ಗುಡಿಯಿಂದ ತಹಸೀಲ್ದಾರ್ ಕಚೇರಿವರೆಗೆ ವಡಗೇರಾ ತಾಲೂಕಿನ 17 ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಮಾರು 60ಕ್ಕೂ ಹೆಚ್ಚು ಹಳ್ಳಿಗಳ ಸಮಾಜದ ಕುಲಭಾಂದವರು ಸುಮಾರು 5 ಸಾವಿರ ಜನ ಈ ಹೋರಾಟದಲ್ಲಿ ಭಾಗವಹಿಸಲ್ಲಿದ್ದಾರೆ.ತಹಸಿಲ್ದಾರ್ ಕಚೇರಿ ತಲುಪಿ ಮನವಿ ಪತ್ರ ಸಲ್ಲಿಸಲಾಗುವುದು.

ಈ ಸಂದರ್ಭದಲ್ಲಿ ಕುರುಬ ಸಮಾಜದ ಹಿರಿಯ ಮುಖಂಡ ಸಿದ್ದಣಗೌಡ ಕಾಡಂನೋರ, ಕುರುಬ ಸಮಾಜದ ಜಿಲ್ಲಾ ನಿರ್ಧೇಶಕರಾದ ಮರೆಪ್ಪ ಜಡಿ, ದೇವಪ್ಪ ಕಡೇಚೂರು‌,ಮರೇಪ್ಪ ಕವಡಿ ಬಿಳಾರ, ಹಾಗೂ ಮರಿಲಿಂಗಪ್ಪ ಸಾಹುಕಾರ ಕುಮನೂರ, ಮಲ್ಲಿಕಾರ್ಜುನ ಕರಿಕಳ್ಳಿ, ಸಿದ್ದಪ್ಪ ಕಡೇಚೂರು,ವೆಂಕಟರಾಯ ಗೊಂದೆನೂರು,ಬಸವರಾಜ ಕಾವಲಿ ಹೊರಟೂರು, ಸಿದ್ದಪ್ಪ ತಮ್ಮಣ್ಣೋರ್,ಸಾಬಣ್ಣ ಕಲ್ಲಪ್ಪನೋರ‌ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.

About The Author