ಕರ್ನಾಟಕ 50ರ ಸಂಭ್ರಮ : ಹೈಯ್ಯಾಳ ಗ್ರಾಮದಲ್ಲಿ ಕನ್ನಡ ರಥಯಾತ್ರೆಗೆ ಭವ್ಯ ಸ್ವಾಗತ

ವಡಗೇರಾ :  ರಾಜ್ಯಕ್ಕೆ ಕರ್ನಾಟಕ ಎಂಬ ನಾಮಕರಣವಾಗಿ ಇಲ್ಲಿಗೆ 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯಾದ್ಯಂತ ವರ್ಷಪೂರ್ತಿ ಕನ್ನಡ ಹಬ್ಬ ಆಚರಣೆ ಮಾಡುತ್ತಿರುವ ಕಾರಣ ಹತ್ತಿಗೂಡುರಿನಿಂದ ಮನಮುಟಗಿ ಮಾರ್ಗವಾಗಿ ಹೈಯ್ಯಾಳ ಗ್ರಾಮಕ್ಕೆ ಆಗಮಿಸಿದ ಕನ್ನಡ ರಥಕ್ಕೆ ವಡಗೇರಾ ತಾಲೂಕು ಆಡಳಿತದಿಂದ ತಹಸಿಲ್ದಾರ್ ಶ್ರೀನಿವಾಸ್ ಚಾಪಾಲ್ ರವರ ನೇತೃತ್ವದಲ್ಲಿ ಸ್ವಾಗತಿಸಿದರು.

ನಮ್ಮ ನಾಡು ನುಡಿ ಭಾಷೆ ಸಂಸ್ಕೃತಿ ಅತ್ಯಂತ ಶ್ರೀಮಂತವಾದದ್ದು. ನಾವೆಲ್ಲರೂ ಇಂಗ್ಲಿಷ್ ವ್ಯಾಮೋಹ ಬಿಟ್ಟು ಕನ್ನಡ ಭಾಷೆ ಸಾಹಿತ್ಯ ಕಲೆ ಸಂಸ್ಕೃತಿಯನ್ನು ಬೆಳೆಸೋಣ. ನಾಡು ನುಡಿ ಜಲ ರಕ್ಷಣೆಗೆ ಪ್ರತಿಯೊಬ್ಬರೂ ಪಣತೋಡಬೇಕು. ಕರ್ನಾಟಕ ಏಕೀಕರಣದಲ್ಲಿ ಹಲವಾರು ಮಹಾನ್ ನಾಯಕರ ಹೋರಾಟ ತ್ಯಾಗ ಬಲಿದಾನದಿಂದ ನಮ್ಮ ಕರ್ನಾಟಕ ಏಕೀಕರಣಗೊಂಡಿದೆ. ಹೊರಾಟಗಾರರ  ಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಈ ಕಾರ್ಯಕ್ರಮದಲ್ಲಿ ಕವಿಗಳು ಸಾಹಿತಿಗಳು ಕನ್ನಡಪರ  ರೈತಪರ ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಗೂ ಶಾಲಾ ಮಕ್ಕಳು ಶಿಕ್ಷಕರು ಭಾಗವಹಿಸಿ ಹಬ್ಬದ ವಾತಾವರಣ ಸೃಷ್ಟಿ ಮಾಡಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

ಈ ಸಮಯದಲ್ಲಿ  ವಿವಿಧ ವಾದ್ಯಗಳೊಂದಿಗೆ ಹೈಯ್ಯಾಳ  ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೈಯ್ಯಾಳ ಪ್ರೌಢ ಶಾಲೆ ಮಕ್ಕಳ ವತಿಯಿಂದ ಕನ್ನಡ ರಥ ಮೆರವಣಿಗೆ ಜರುಗಿತು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ, ಸಿ‌ಡಿಪಿಓ ಮೀನಾಕ್ಷಿ ಪಾಟೀಲ್,ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ನಿರ್ದೇಶಕಿ ಉತ್ತರಾದೇವಿ ಹಿರೇಮಠ್, ಕಸಾಪ ವಡಗೇರಾ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಕರಿಕಳ್ಳಿ,ಹೈಯ್ಯಾಳ ಹೋಬಳಿ ಅಧ್ಯಕ್ಷ ಆನಂದ್ ಗುಬ್ಬಿ, ಕೊಂಕಲ್ ವಲಯ ಅಧ್ಯಕ್ಷ ಮಲ್ಲಿಕಾರ್ಜುನ ಕಾವಲಿ‌, ಪಿಡಿಓ ಸಿದ್ದವೀರಪ್ಪ ಪೂಜಾರಿ, ಸಿಆರ್ಪಿ ನಿಂಗಪ್ಪ ವರಕೇರಿ‌,ಮುಖ್ಯ ಗುರು ಶರಣಪ್ಪ ಅಥಣಿ,ಕರವೇ ಮುಖಂಡ ಅಬ್ದುಲ್ ಚಿಗಾನೂರ,ಚಂದ್ರಶೇಖರ್ ಸಾಹುಕಾರ,ಹೇಮಣ್ಣ ಪೂಜಾರಿ,ಹಣಮಂತ ಕಂಡಕ್ಟರ,ಕಂದಾಯ ನಿರೀಕ್ಷಕ ಸಿದ್ದಯ್ಯ ಸ್ವಾಮಿ. ಗ್ರಾಮ ಆಡಳಿತ ಅಧಿಕಾರಿ ಸಿದ್ದಣ್ಣಗೌಡ.ಮೌನೇಶ ಪೂಜಾರಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು,
ಗೊಲ್ಲಾಳಪ್ಪ ಪೂಜಾರಿ. ಡಾ. ಅಖಿಲೇಶ್.  ಹಿರಿಯ ಆರೋಗ್ಯ ನಿರೀಕ್ಷಕ ಭಾಗಪ್ಪ. ಆರೋಗ್ಯ ನಿರೀಕ್ಷಕ ಶಶಿಕಾಂತ್ ಮನಗನಾಳ.ಶಿವಪ್ಪ ಮಾತ್ನೂರ.ದುರ್ಗೇಶ್ ಮಂಗಿಹಾಳ‌. ಕವಿ ಶರಣಪ್ಪ ಕ್ಯಾತ್ನಳಾ. ನಾಗರಾಜ ಗುರಿಕಾರ. ದೇವು ಮಾಚಗುಂಡಾಳ. ಶಿಕ್ಷಕ ಶರಣು ಗೊಂದದೆನೂರು.ಶಿವರಾಜ ಹಾಲಗೇರಾ.ಮೌನೇಶ್ ಪೂಜಾರಿ. ಕಾಮಣ್ಣ ಪೂಜಾರಿ. ಮುಕೇಶ್. ನಾಗು ಬಾಗ್ಲಿ. ನಿಂಗಣ್ಣ ಪೂಜಾರಿ. ಶಿವು ಪೂಜಾರಿ ಪದ್ಮಣ್ಣೂರ. ಭೀಮಶಂಕರ ಸೂಗೂರು. ದೇವು ಪೂಜಾರಿ ಪದ್ಮಣ್ಣೊರ. ಹಾಗೂ ಇನ್ನಿತರ ಉಪಸ್ಥಿತರಿದ್ದರು  ಮೆರವಣಿಗೆ ಉಸ್ತುವಾರಿ  ಹೈಯ್ಯಾಳ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಸಿದ್ದರಾಮಪ್ಪ ಪಾಟೀಲ್. ನಿರ್ವಹಿಸಿದರು.