ಕಾಲುವೆಗೆ  ನೀರು ಹರಿಸುವಂತೆ ಮುಖ್ಯಮಂತ್ರಿಯವರಿಗೆ ಸಚಿವ ದರ್ಶನಾಪೂರ ಮನವಿ

ಶಹಾಪುರ : ತಾಲೂಕಿನಲ್ಲಿ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ದಿದ್ದು,  ಶೇಂಗಾ, ತೊಗರಿ, ಹತ್ತಿ ಇತರೆ ಉತ್ಪನ್ನ ಬೆಳೆಗಳು ಬೆಳೆದಿದ್ದು ಬೆಳೆ ಕೈ ಸೇರುವ  ಸಮಯದಲ್ಲಿ ರೈತರ ಕಣ್ಣೆದುರಿನಲ್ಲಿ ಹಾಳಾಗುತ್ತಿರುವುದನ್ನು ಕಂಡು ಕಂಗಲಾಗಿದ್ದಾರೆ. ನಾರಾಯಣಪುರ ಡ್ಯಾಮಿನಿಂದ ನೀರು ಬಿಡುವಂತೆ ರೈತರು  ಕೆಬಿಜೆನಲ್ ಆಡಳಿತ ಕಚೇರಿ ಮುಂದೆ ಪ್ರತಿನಿತ್ಯ ಧರಣಿ ನಡೆಸುತ್ತಿದ್ದಾರೆ. ರೈತರ ಹಿತ ದೃಷ್ಟಿಯಿಂದ  2024 ಜನವರಿ 1ರಿಂದ 5ನೇ ತಾರೀಖಿನವರೆಗೆ ಎಸ್ಬಿಸಿಎಂಬಿಸಿ ಹಾಗೂ ಜೆಬಿಸಿ ಕಾಲುವೆಗೆ ನೀರು ಹರಿಸುವಂತೆ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಾಪೂರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ಇದೆ ವೇಳೆ ಜೇವರ್ಗಿ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಅಜಯ್ ಸಿಂಗ್ ಇದ್ದರು.

About The Author