ಕರ್ನಾಟಕ ನಾಮಾಂಕಿತವಾಗಿ ೫೦ ವರ್ಷದ ಸಂಭ್ರಮ : ಕನ್ನಡ ರಥಯಾತ್ರೆಗೆ ಶಹಾಪುರದಲ್ಲಿ ಭವ್ಯ ಸ್ವಾಗತ

ಶಹಾಪುರ : ಡಾ.ದೇವರಾಜ ಅರಸು ರವರು ಮುಖ್ಯಮಂತ್ರಿ ಯಾದ ಸಂಧರ್ಭದಲ್ಲಿ ರಾಜ್ಯಕ್ಕೆ ಕರ್ನಾಟಕ ಎಂದು ಕರೆಯಲಾಯಿತು.ಕರ್ನಾಟಕ ಎಂದು ಹೆಸರಿಟ್ಟು ೫೦ ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವರ್ಷವಿಡೀ ಕನ್ನಡ ಹಬ್ಬದ ಸಂಭ್ರಮಾಚರಣೆ ಮಾಡಲಾಗುತ್ತಿದೆ.ಅದಲ ಪ್ರಯುಕ್ತ ಕನ್ನಡ ರಥಯಾತ್ರೆಯು ಶಹಾಪೂರ ನಗರಕ್ಕಿಂದು   ಮಧ್ಯಾಹ್ನ ೧೨.೩೦ ಕ್ಕೆ ಆಗಮಿಸಿತು.

ಸುರಪುರ, ಮಂಡಗಳ್ಳಿ, ಹತ್ತಿಗೂಡುರ, ವಿಭೂತಿಹಳ್ಳಿ ಮಾರ್ಗವಾಗಿ ಆಗಮಿಸಿದ ಕನ್ನಡ ರಥಕ್ಕೆ  ಶಹಾಪುರ ತಾಲೂಕು ಆಡಳಿತದಿಂದ ತಹಶೀಲ್ದಾರ  ಉಮಕಾಂತ ಹಳ್ಳೆ ಸ್ವಾಗತಮಾಡಿಕೊಂಡು ಮಾತನಾಡಿ, ಆಡೋಕೆ ಒಂದೇ ಭಾಷೆ, ಅದುವೇ ಕನ್ನಡ, ಇಂದು ಕನ್ನಡಿಗರೆಲ್ಲಾ ಒಟ್ಟಿಗೆ ಇದ್ದೇವೆ. ಇದಕ್ಕೆ ಕಾರಣ ಎಂದರೆ ಕರ್ನಾಟಕದ ಏಕೀಕರಣ ಒಂದುಗೂಡಿದ ದಿನ. ಕನ್ನಡದ ಸಾರ್ವಭೌಮತೆಯನ್ನು ನಾವೇಲ್ಲರೂ ರಕ್ಷಿಸೋಣ, ನಾಡು, ನುಡಿ, ನೆಲ, ಜಲ, ಭಾಷೆಗಾಗಿ ಕನ್ನಡ ಪರ ಸಂಘಟನೆಗಳು, ಸಾಹಿತಿಗಳು, ವಿಶೇಷವಾಗಿ ಶಾಲಾಮಕ್ಕಳು ಭಾಗವಹಿಸಿ ನಗರದಲ್ಲಿ ಕನ್ನಡದ ಹಬ್ಬದ ವಾತಾವರಣ ನಿರ್ಮಾಣ ಮಾಡಿದಕ್ಕೆ ಅತೀವ ಸಂತೋಷ ತಂದಿದೆ ಎಂದರು.

ಕ.ಸಾ.ಪ ಅಧ್ಯಕ್ಷ ಡಾ.ರವಿಂದ್ರನಾಥ ಹೊಸ್ಮನಿ, ತಾಲೂಕ ಪಂಚಾಯಿತಿ ಅಧಿಕಾರಿ ಸೋಮಶೇಖರ ಬಿರಾದಾರ, ಪ್ರಭಾರಿ ಕ್ಷೇತ್ರಶಿಕ್ಷಣಾಧಿಕಾರಿ ಹಣಮಂತ್ರಾಯ ಸೋಮಾಪುರ ಇದ್ದರು. ನಗರದ ಕನ್ಯಾಕೋಳೂರ ಅಗಸಿಯಿಂದ ಮೋಚಿಗಡ್ಡಾ, ಬಸವೇಶ್ವರ ಚೌಕ್‌ದವರೆಗೆ ರಥಯಾತ್ರೆ ಜರುಗಿತು.

ಸರಕಾರಿ ಇಲಾಖೆಯ ಅಧಿಕಾರಿಗಳು,  ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು,  ಕನ್ನಡ ಪರ ಸಂಘಟನೆಗಳ ಪ್ರಮುಖರು ಮತ್ತು ಶಾಲೆಗಳ ಮಕ್ಕಳು ಕನ್ನಡ ಪರ ಘೋಷಣೆ ಕೂಗುತ್ತಾ ರಥ ಯಾತ್ರೆಯನ್ನು ಸಂಭ್ರಮದಿಂದ ಸ್ವಾಗತಿಸಿದರು.

ಬಿಸಿಲಿಗೆ ಬಸವಳಿದ ಮಕ್ಕಳು:ಶಿಕ್ಷಣ ಇಲಾಖೆಯ ಅಧಿಕಾರಿಗಳ ಆದೇಶದನ್ವಯ ಇಡೀ ನಗರದ ಶಾಲಾ ವಿದ್ಯಾರ್ಥಿಗಳು ೯:೩೦ಕ್ಕೆ ಕನ್ಯಕೋಳೂರು ಅಗಸಿ ಹತ್ತಿರ ರಾಜ್ಯ ಹೆದ್ದಾರಿಗೆ ಜಮಾವಣೆಯಾಗಿದ್ದವು, ಆದರೆ ಕನ್ನಡ ರಥ ೧೨:೩೦ಕ್ಕೆ ಬಂದಿದ್ದರಿಂದ ವಿದ್ಯಾರ್ಥಿಗಳಿಗೆ ಸೂಕ್ತ ಸ್ಥಳದ ಅವಕಾಶವಿಲ್ಲದಿದ್ದರಿಂದ ಪರದಾಡುವಂಥ ಸ್ಥಿತಿಯಾಯಿತು.ದಾರಿಯುದ್ದಕ್ಕೂ ಇಡೀ ರಥಯಾತ್ರೆಗೆ ವಿವಿಧ ಕನ್ನಡ ಪರ ಸಂಘಟನೆಗಳು ಸಾಥ್ ನೀಡಿದ್ದರಿಂದ ಕಾರ್ಯಕ್ರಮ ಯಶಸ್ಸಿಗೆ ಪ್ರೇರಣೆಯಾಯಿತು.

About The Author