ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ:  ಸ್ವಚ್ಛ ಭಾರತ್ ವಾಹನ ಸಂಚಾರ ಸ್ಥಗಿತ : ಹಯ್ಯಳ  ಗ್ರಾಮದಲ್ಲಿ ಸ್ವಚ್ಛತೆ ಮರಿಚಿಕೆ

ವಡಗೇರಾ : ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಹತ್ವಾಕಾಂಕ್ಷೆ ಯೋಜನೆಯಲ್ಲಿ ಸ್ವಚ್ಛ ಭಾರತ್ ಯೋಜನೆ ಒಂದು.ಗ್ರಾಮೀಣ ಮಟ್ಟದಿಂದಿಡಿದು ಜಿಲ್ಲಾ ಮಟ್ಟದವರೆಗೆ ಪ್ರತಿ ಗ್ರಾಮಗಳಲ್ಲಿ ನಗರದ ವಾರ್ಡ್ಗಳಲ್ಲಿ ಸ್ವಚ್ಛವಾಗಿ ಇಡಲು ಸ್ವಚ್ಛತೆಯನ್ನು ಕಾಪಾಡಲು ಕಲುಷಿತವಾಗದಂತೆ ನೋಡಿಕೊಳ್ಳಲು ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಸ್ವಚ್ಛ ಭಾರತ್ ವಾಹನವನ್ನು ನೀಡಲಾಗಿದೆ. ಆದರೆ ಹಯ್ಯಳ ಬಿ ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿ  ನಿರ್ಲಕ್ಷದಿಂದ ಸ್ವಚ್ಛ ಭಾರತ ವಾಹನವು ನಿಂತಲ್ಲೆ ನಿಂತು ಗುಜರಿಗೆ ಹೋಗುವ ಸಂಭವವಿದೆ.

ಗ್ರಾಮದಲ್ಲಿ ಆರಂಭದಲ್ಲಿ ನಾಲ್ಕೈದು ತಿಂಗಳು ಹೊರತುಪಡಿಸಿದರೆ ಇಲ್ಲಿಯವರೆಗೂ ವಾಹನವು ಸಂಚರಿಸಿಲ್ಲ. ಒಂದೇ ಸ್ಥಳದಲ್ಲಿ ನಿಂತಿದೆ. ಗ್ರಾಮದೊಳಗೆ ಸ್ವಚ್ಛತೆಯು ಮರಿಚಿಕೆಯಾಗಿದೆ.ಎಲ್ಲಿಂದರಲ್ಲಿ ಕಸದ ರಾಶಿ ಬಿದ್ದಿದೆ. ಗ್ರಾಮ ಪಂಚಾಯಿತಿಯ ಸ್ಥಳೀಯ ಆಡಳಿತವಾಗಿದ್ದರೂ,ರಸ್ತೆಯ ಮೇಲೆ ಕಸದ ತೊಟ್ಟಿ, ಚರಂಡಿ ನೀರು, ನೀರಿನಲ್ಲಿ ಕಸದ ರಾಶಿ ತುಂಬಿಹೋಗಿದೆ. ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ
ಗ್ರಾಮಸ್ಥರು ಇಡಿ ಶಾಪ ಹಾಕುತ್ತಿದ್ದಾರೆ.

ಐದು ಲಕ್ಷಕ್ಕಿಂತಲೂ ಹೆಚ್ಚು ಹಣವನ್ನು ಸರಕಾರ ಖರ್ಚು ಮಾಡಿ ಗ್ರಾಮೀಣ ಪ್ರದೇಶಗಳನ್ನು ಸ್ವಚ್ಛವಾಗಿ ಇರಬೇಕೆಂದು ಗ್ರಾಮ ಪಂಚಾಯಿತಿಗೆ ಒಂದೊಂದು ವಾಹನವನ್ನು ನೀಡಿದೆ. ಆದರೆ ಗ್ರಾಮ ಪಂಚಾಯಿತಿಯವರು ಲಕ್ಷ ವಹಿಸದೆ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿನ
ಕಸವನ್ನು ಗಾಡಿಯಲ್ಲಿ ತೆಗೆದುಕೊಂಡು ಬರಬೇಕು. ಗ್ರಾಮ ಪಂಚಾಯಿತಿಯವರ ನಿರ್ಲಕ್ಷದಿಂದ ಐದು ಲಕ್ಷ ರೂಪಾಯಿ ಹಣ ಕೋತವಾಗುತ್ತಿದೆ.

ಹಯ್ಯಳ ಬಿ ಗ್ರಾಮದ ಪಂಚಾಯಿತಿಯಲ್ಲಿ ಸ್ವಚ್ಛ ಭಾರತ ವಾಹನ ಪಂಚಾಯಿತಿಯೊಳಗೆ ನಿಲ್ಲಿಸಲಾಗಿದೆ. ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ ವಹಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಸ್ವಚ್ಛ ಭಾರತ್ ವಾಹನ ನಿಂತಲ್ಲಿಯೆ ನಿಂತು ಜಖಂಗೊಂಡು ಹೋಗುತ್ತಿದೆ. ಮುಂದೊಂದು ದಿನ ಗುಜರಿಗೆ ಹೋದರು ಹೋಗಬಹುದು.

ಸರ್ಕಾರದ ಈ ಯೋಜನೆಗೆ ಗ್ರಾಮ ಪಂಚಾಯಿತಿಯ ಆಡಳಿತದ ನಿರ್ಲಕ್ಷವೇ ಕಾರಣ ಎನ್ನಲಾಗಿದ್ದು,ಇದರ ಬಗ್ಗೆ ಮೇಲಾಧಿಕಾರಿಗಳು ಗಮನಹರಿಸಬೇಕು.ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕಿದೆ.ಇಲ್ಲದಿದ್ದರೆ ಅಧಿಕಾರಿಗಳು ಆಡಿದ್ದೆ ಆಟವಾಗುತ್ತದೆ.ತಾಲೂಕು ಮತ್ತು ಜಿಲ್ಲಾ ಪಂಚಾಯತ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

About The Author