ಗ್ರಾಮ ಪಂಚಾಯಿತಿಯ ನಿರ್ಲಕ್ಷ : ಹಯ್ಯಳ ಬಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿಲ್ಲ : ಸ್ಥಗಿತಗೊಂಡ ಶುದ್ಧ ಕುಡಿಯುವ ನೀರಿನ ಘಟಕ : ಸ್ಪಂದಿಸದ ಪಿಡಿಓ

Yadagiri ಶಹಾಪುರ : ಗ್ರಾಮದ ಪಕ್ಕದಲ್ಲಿಯೇ ಕೃಷ್ಣಾ ನದಿ ಹರಿಯುತ್ತಿದೆ.ಆದರೂ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿಲ್ಲ. ಹತ್ತು ವರ್ಷದಿಂದ ನಿರ್ಲಕ್ಷಿಸಲ್ಪಟ್ಟ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತವಾಗಿದೆ.ಪ್ರಾರಂಭಿಸಿದ ಐದಾರು ತಿಂಗಳಲ್ಲಿಯೇ ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಾರಂಭ ಮಾಡುವ ಗೋಜಿಗೆ ಸ್ಥಳೀಯ ಆಡಳಿತ ಹೋಗಿಲ್ಲ.

ಈಗಾಗಲೇ ರಾಜ್ಯ ಸರಕಾರ ಮತ್ತು ಉಸ್ತುವಾರಿ ಸಚಿವರು ಶುದ್ಧ ಕುಡಿಯುವ ನೀರಿನ ಸಮಸ್ಯೆ ಯಾಗದಂತೆ ಗ್ರಾಮೀಣ ಮಟ್ಟದಲ್ಲಿ ನೋಡಿಕೊಳ್ಳಬೇಕು.ಎಲ್ಲಾ ಘಟಕಗಳನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡಿಸಿಕೊಂಡು,ಪ್ರತಿ ಗ್ರಾಮದಲ್ಲೂ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕೆಂದು ಜಿಲ್ಲಾಡಳಿತಕ್ಕೆ ಫಾರ್ಮಾನು ಹೊರಡಿಸಿದ್ದಾರೆ.ಆದರೂ ಹಯ್ಯಳ ಗ್ರಾಮ ಪಂಚಾಯಿತಿ ಆಡಳಿತ ವರ್ಗ ಮೌನವಹಿಸಿದೆ.ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಶುದ್ಧ ಕುಡಿಯುವ ನೀರಿನ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.ಹಯ್ಯಳ ಬಿ ಗ್ರಾಮಕ್ಕೆ ಬೋರ್ವೆಲ್ ನೀರು ಅಥವಾ ಕೃಷ್ಣ ನದಿಯ ನೀರೇ ಗತಿಯಾಗಿದೆ.

ರಾಜ್ಯ ಸರ್ಕಾರ ಶುದ್ಧ ಕುಡಿಯುವ ನೀರಿಗಾಗಿ ಕೋಟಿಗಟ್ಟಲೆ ಹಣವನ್ನು ಗ್ರಾಮ ಪಂಚಾಯಿತಿಗಳಿಗೆ ಕೊಡುತ್ತಿದೆ.ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಆಡಳಿತ ವರ್ಗದವರ ನಿರ್ಲಕ್ಷದಿಂದ ಅಶುದ್ಧ ನೀರನ್ನು ಗ್ರಾಮದ ಜನರು ಕುಡಿಯುವ ಸ್ಥಿತಿ ಒದಗಿದಂತಾಗಿದೆ.

ಗ್ರಾಮ ಪಂಚಾಯಿತಿಯ ನಿರ್ಲಕ್ಷದಿಂದ ಶುದ್ಧ ಕುಡಿಯುವ ನೀರಿನ ಘಟಕ ಸಂಪೂರ್ಣ ಜಖಂ ಆಗಿದೆ.
ಕಳೆದ ಏಳು ವರ್ಷಗಳಿಂದಲೂ ಶುದ್ಧ ಕುಡಿಯುವ ನೀರಿನ ಘಟಕದ ಕಡೆ ಸುಳಿವೇ ಇಲ್ಲದಂತಾಗಿದೆ. ಆರಂಭದಲ್ಲಿಯೇ ಘಟಕವನ್ನು ರಿಪೇರಿ ಮಾಡಬೇಕಿತ್ತು. ಸ್ಥಳೀಯ ಆಡಳಿತ ನಿರ್ಲಕ್ಷ್ಯ ವಹಿಸಿದೆ. ಕೆಟ್ಟು ಹೋದ ತಕ್ಷಣವೇ ಆರಂಭಿಸಬೇಕಾದ ಘಟಕವನ್ನು ಆರೇಳು ವರ್ಷದ ನಂತರ ಪ್ರಾರಂಭಿಸಲು ಹೇಗೆ ಸಾಧ್ಯ.ಇದರ ಬಗ್ಗೆ ಮೇಲಾಧಿಕಾರಿಗಳು ಗಮನ ಹರಿಸಬೇಕಿದೆ.

ಸಾರ್ವಜನಿಕರಿಗೆ ಸ್ಪಂದಿಸದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ಹಯ್ಯಳ ಬಿ ಗ್ರಾಮದ ಶುದ್ಧ ಕುಡಿಯುವ ನೀರಿಗಾಗಿ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಅಭಿವೃದ್ಧಿ ಅಧಿಕಾರಿಗಳು ಸ್ಪಂದಿಸಬೇಕು.ಫೋನ್ ಕರೆ ಕೂಡ ಸ್ವೀಕರಿಸುತ್ತಿಲ್ಲ. ಹೀಗಾದರೆ ಗ್ರಾಮೀಣ ಜನರ ಪಾಡೇನು.ಆ ಕಡೆ ಉನ್ನತ ಅಧಿಕಾರಿಗಳು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪೋನ್ ಕರೆ ಸ್ವೀಕರಿಸದೆ ಇದ್ದರೆ ನಮ್ಮ ಗಮನಕ್ಕೆ ತನ್ನಿ ಎನ್ನುತ್ತಾರೆ.ಮೇಲಾದಿಕಾರಿಗಳ ಆದೇಶಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಡೊಂಟ್ ಕೇರ್ ಎನ್ನುತ್ತಿದ್ದಾರೆ.ಹೇಗಿದೆ ನೋಡಿ ಆಡಳಿತ ವರ್ಗ.ಅದೇ ಚಾಳಿ ಮುಂದುವರಿಸಿದ್ದಾರೆ.ಶುದ್ಧ ಕುಡಿಯುವ ನೀರಿಲ್ಲ ಬೋರ್ವೆಲ್ ನೀರೇ ಅವಲಂಬಿಸಿದ್ದೇವೆ.ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಶುದ್ಧ ಕುಡಿಯುವ ನೀರಿನ ಬಗ್ಗೆ ಗಮನ ಹರಿಸುತ್ತಿಲ್ಲ.ಎಷ್ಟೊ ವರ್ಷಗಳು ಕಳೆದುಹೋಗಿವೆ.ನದಿ,ಬೋರವೇಲ್ ನೀರನ್ನು ಕುಡಿಯುತ್ತಾ ಬಂದಿದ್ದೇವೆ.ನಮ್ಮೂರಲ್ಲಿ ಗ್ರಾಮ ಪಂಚಾಯಿತಿಯು ಇದ್ದು ಇಲ್ಲದಂತಾಗಿದೆ ಎನ್ನುತ್ತಾರೆ ಸಾರ್ವಜನಿಕರು.

ಖಾಸಗಿ ಶುದ್ಧ ಕುಡಿಯುವ ನೀರನ್ನು ಅವಲಂಬಿಸಿದ ಜನ.ಬಡವರ ಪಾಡೇನು ?

ಹಯ್ಯಳ ಬಿ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿದ್ದಾರೆ.ಹಣವಿದ್ದವರು ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕದಿಂದಲೇ ನೀರನ್ನು ತೆಗೆದುಕೊಂಡು ಬಂದು ಕುಡಿಯುತ್ತಾರೆ.20 ಲೀಟರ್ ಟ್ಯಾಂಕರ್ಗೆ ಹದಿನೈದರಿಂದ ಇಪ್ಪತ್ತು ರೂಪಾಯಿ ಕೊಡಬೇಕಾಗುತ್ತದೆ. ಹಣವಂತರು ಇಂತಹ ನೀರನ್ನು ತೆಗೆದುಕೊಂಡು ಬಂದು ಕುಡಿಯುತ್ತಾರೆ. ಹಾಗಾದರೆ ಬಡವರ ಪಾಡೇನು ?. ದಿನಕ್ಕೆ 20 ರೂಪಾಯಿಯಂತೆ 20 ಲೀಟರ್ ಒಂದು ಟ್ಯಾಂಕಿಗೆ ನೀರನ್ನು ತೆಗೆದುಕೊಂಡು ಬಂದು ಕುಡಿಯಲು ಸಾಧ್ಯವೇ?, ಹಾಗಾದರೆ ಗ್ರಾಮ ಪಂಚಾಯಿತಿಯು ಶುದ್ಧ ಕುಡಿಯುವ ನೀರಿನ ಘಟಕವನ್ನು ಏಕೆ ಆರಂಭಿಸುತ್ತಿಲ್ಲ. ಖಾಸಗಿಯವರಿಗೆ ಲಾಭ ಮಾಡಿಕೊಡಲು ಗ್ರಾಮ ಪಂಚಾಯಿತಿಯ ಆಡಳಿತ ವರ್ಗವು ಹೊರಟಿದೆ ಎನ್ನುವ ಅನುಮಾನ ಬಲವಾಗಿ ಕಾಡುತ್ತಿದೆ.

ಹಯ್ಯಳ ಬಿ ಗ್ರಾಮ ಪಂಚಾಯಿತಿಗೆ ನಾನು ಅಧಿಕಾರ ವಹಿಸಿಕೊಂಡು ನಾಲ್ಕೈದು ತಿಂಗಳುಗಳಾಗಿವೆ. ಗ್ರಾಮದಲ್ಲಿ ಒಂದೇ ಶುದ್ಧ ಕುಡಿಯುವ ನೀರಿನ ಘಟಕವಿದೆ.ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕವನ್ನು ಈಗಾಗಲೇ ಪರೀಕ್ಷಿಸಲಾಗಿದ್ದು, ಬಹಳ ದಿನಗಳಿಂದ ನಿಂತಿರುವುದರಿಂದ ಸಂಪೂರ್ಣ ಜಖಂ ಆಗಿದೆ. ಹೊಸ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಬೇಕಾಗುತ್ತದೆ.

ಸಿದ್ದವೀರಪ್ಪ
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಯ್ಯಳ ಬಿ ಗ್ರಾಮ ಪಂಚಾಯಿತಿ

 

ಹಯ್ಯಳ ಬಿ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತವಾಗಿರುವುದರ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದು,ಪುನಃ ಪ್ರಾರಂಭಿಸಲು ಸಾಧ್ಯವೆಂದು ಅರಿತ ನಂತರ ರಿಪೇರಿ ಮಾಡಿ ಆದಷ್ಟು ಬೇಗ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುವುದು. ಹಳೆ ಘಟಕ ದುರಸ್ತಿಯಾಗದೇ ಇದ್ದರೆ ಶಾಸಕರ ಗಮನಕ್ಕೆ ತಂದು ಹೊಸ ಶುದ್ಧ ಕುಡಿಯುವ ನೀರಿನ ಘಟಕವನ್ನು ಬೇಗನೆ ಆರಂಭಿಸಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಿಕೊಡಲಾಗುವುದು.

ಮಲ್ಲಿಕಾರ್ಜುನ ಸಂಗ್ವಾರ
ಕಾರ್ಯನಿರ್ವಾಹಕ ಅಧಿಕಾರಿಗಳು ವಡಗೇರಾ.

About The Author