ಕ್ರಿಸ್ಮಸ್ ಹಬ್ಬದ ಸಂಭ್ರಮ ಆಚರಣೆ

ದೇವದುರ್ಗ: ಯೇಸುಕ್ರಿಸ್ತರ ಜನ್ಮದಿನವಾದ ಕ್ರಿಸ್‌ಮಸ್ ಹಬ್ಬವನ್ನು ದೇವದುರ್ಗ ತಾಲೂಕಿನಾದ್ಯಂತ ಕ್ರೈಸ್ತರು ಭಕ್ತಿ, ಶ್ರದ್ಧೆ, ಸಂಭ್ರಮದಿಂದ ಆಚರಿಸಿದರು.ಭಾನುವಾರ ರಾತ್ರಿಯಿಂದಲೇ ತಾಲೂಕಿನ ಎಲ್ಲಾ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಕ್ರಿಸ್‌ಮಸ್ ಗೀತೆಗಳ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಮುಖವಾಗಿ ತಾಲೂಕಿನ ಹೊನ್ನಟಗಿ ಗ್ರಾಮದಲ್ಲಿ ಸಭಾ ಪಾಲಕರಾದ ರೇ. ರವಿ ಪ್ರಸಾದ್ ಇವರ ನೇತೃತ್ವದಲ್ಲಿ ಕ್ರಿಸ್ಮಸ್ ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಯೇಸುವಿನ ಪ್ರತಿಮೆ ಮುಂದೆ ಭಕ್ತರು ಮೊಂಬತ್ತಿ ಹಿಡಿದು ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಉಗ್ರಾಣಿಕರಾದ ಯೇಶಪ್ಪ, ನಾಗಬಸಪ್ಪ, ದೇವಪುತ್ರಪ್ಪ, ಎವನಪ್ಪ, ಹನುಮಂತ, ಗಂಗಪ್ಪ, ಶಿಕ್ಷಕರಾದ ಪ್ರಕಾಶ ಹೊನ್ನಟಗಿ, ಶಾಂತಕುಮಾರ ಹೊನ್ನಟಗಿ, ಬಾಬು, ಮಾರೆಪ್ಪ, ಯಲ್ಲಪ್ಪ, ಭೀಮಣ್ಣ, ಬೂದೆಪ್ಪ, ಮಹೇಶ, ದೇವರಾಜ, ಅಬ್ರಾಂ, ಅನಿತಾ, ಮರಿಯಾಳಮ್ಮ, ಆಶಾ ಕಾರ್ಯಕರ್ತೆ ಲಲಿತಮ್ಮ, ಗಂಗಮ್ಮ, ಗೀತಾ, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಅನೇಕು ಇದ್ದರು.

Leave a Reply

Your email address will not be published. Required fields are marked *