ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನೀರು ಬಿಡುವುದರ ಬಗ್ಗೆ ತೀರ್ಮಾನಿಸಲಾಗುವುದು

yadagiri ಶಹಾಪುರ : ಸಲಹಾ ಸಮಿತಿಯ ತೀರ್ಮಾನದಂತೆ ಡಿಸೆಂಬರ್ 15 ರವರೆಗೆ ಕಾಲುವಿಗೆ ನೀರು ಹರಿಸಲಾಗಿದೆ. ಜಲಾಶಯದಲ್ಲಿ 49 ಟಿಎಂಸಿ ನೀರು ಇದ್ದು, ಕುಡಿಯುವ ನೀರಿನ ಲಭ್ಯತೆಗೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು.ಆದರೂ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಎರಡರಿಂದ ಮೂರು ದಿನಗಳವರೆಗೆ ಕಾಲುವೆಗೆ ನೀರು ಬಿಡುವಂತೆ ಕೇಳುತ್ತೇನೆ ಎಂದೂ
 ಸಚಿವರಾದ ಶರಣಬಸಪ್ಪಗೌಡ ದರ್ಶನಪುರ ಹೇಳಿದರು. ನಗರದ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಾನುವಾರಗಳಿಗೆ ಮತ್ತು ಕುಡಿಯುವ ನೀರಿನ ಅವಶ್ಯಕತೆ ಇದೆ.ಶೇ. 95 ರಿಂದ 98 ರಷ್ಟು ನೀರನ್ನು ರೈತರ ಬೆಳೆಗಳಿಗೆ ನೀರು ಬಿಟ್ಟಿದ್ದೇವೆ.

*****
ಜೂನ್ ತಿಂಗಳಿಂದ ಜುಲೈ ತಿಂಗಳವರೆಗೆ ಕುಡಿಯುವ ನೀರು ಅವಶ್ಯಕತೆ ಇದೆ. ಆಲಮಟ್ಟಿ ಜಲಾಶಯದ ವ್ಯಾಪ್ತಿ ದೊಡ್ಡದಾಗಿದೆ. ಬಿಜಾಪುರ ರಾಯಚೂರು ಬಾಗಲಕೋಟೆ ಜಿಲ್ಲೆಗಳಿಗೂ ನೀರು ಕೊಡಬೇಕಿದೆ. ಕಳೆದ ಕೆಲವು ದಿನಗಳ ಹಿಂದೆ ಸತತವಾಗಿ 38 ದಿನಗಳ ಕಾಲುವೇಗೆ ನೀರು ಬಿಟ್ಟಿದ್ದೇವೆ.ಕೊನೆ ಭಾಗದ ರೈತರಿಗೂ ನೀರು ಕೊಡಬೇಕಿದೆ ಎಂದು ಹೇಳಿದರು. ರೈತರು ಕೂಡ ನಮ್ಮ  ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಈ ವರ್ಷ ಬರಗಾಲದ ಪರಿಸ್ಥಿತಿ ಇದೆ.ಮಳೆ ಸರಿಯಾಗಿ ಬಂದಿಲ್ಲ.223 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ.ಮೆಣಸಿನಕಾಯಿ ಬೆಳೆಗಾರರಿಗೆ ಕನಿಷ್ಠ ಮಾರ್ಚ್ ತಿಂಗಳವರೆಗಾದರೂ ನೀರು ಕೊಡಬೇಕಾಗುತ್ತದೆ. ಆದ್ದರಿಂದ ಸಲಹಾ ಸಮಿತಿಯ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ ಎಂದರು.

About The Author