ಕಾಲುವಿಗೆ ನೀರು ಹರಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘದಿಂದ ಸಚಿವರಿಗೆ ಮನವಿ

yadagiri ವಡಗೇರಾ : ಕರ್ನಾಟಕ ಪ್ರಾಂತ ರೈತ ಸಂಘದಿಂದ ಇಂದು ಬಸವೇಶ್ವರ ವೃತ್ತದಿಂದ ಕಾಲ್ನಡಿಗೆಯ ಮೂಲಕ ಸಚಿವರ ಗೃಹ ಕಚೇರಿಯವರಿಗೆ ಪ್ರತಿಭಟನೆ ಮಾಡುತ್ತಾ, ಕಾಲುವೆಗಳಿಗೆ ನೀರು ಹರಿಸುವಂತೆ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ಅವರಿಗೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರಾದ ಚೆನ್ನಪ್ಪ ಆನೆಗುಂದಿ ಮಾತನಾಡಿ, ಮೆಣಸಿನಕಾಯಿ ಬೆಳೆದ ರೈತರಿಗೆ ತುಂಬಾ ಕಷ್ಟವಾಗಿದೆ. ಇನ್ನೆರಡು ದಿನಗಳಲ್ಲಿ ಕಾಲುವೆಗೆ ನೀರು ಬಿಡದಿದ್ದರೆ ರೈತರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಾರೆ. ಬೆಳೆಗಳಿಗೆ ಲಕ್ಷಾನುಗಟ್ಟಲೆ ಹಣ ಖರ್ಚು ಮಾಡಲಾಗಿದೆ .ಬೆಳೆ ಕೈಗೆಟುಕುವ ಮುಂಚೆಯೇ ನಷ್ಟವಾದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ.ಸಚಿವರು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಕಾಲುವೆಗಳಿಗೆ ನೀರು ಹರಿಸಬೇಕೆಂದು ಒತ್ತಾಯಿಸಿದರು.

******
ಮನವಿ ಸ್ವೀಕರಿಸಿದ ಸಚಿವರಾದ ಶರಣಬಸಪ್ಪಗೌಡ ದರ್ಶನಪುರ, ರೈತರ ಪರಿಸ್ಥಿತಿ ಅರ್ಥವಾಗುತ್ತದೆ. ರೈತ ಈ ದೇಶದ ಬೆನ್ನೆಲುಬು. ಮುಖ್ಯಮಂತ್ರಿಗಳ ಜೊತೆ  ಮಾತನಾಡುವುದಾಗಿ ತಿಳಿಸಿದರು.ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ
ಸುರಪುರ ತಾಲೂಕಿನ ಅಧ್ಯಕ್ಷರಾದ ಧರ್ಮಣ್ಣ ದೊರೆ, ಶಹಾಪುರ ತಾಲೂಕಿನ ಅಧ್ಯಕ್ಷರಾದ ಭೀಮಣ್ಣ ಶಹಪುರ, ತಾಲೂಕ ಕಾರ್ಯದರ್ಶಿಯಾದ ಭೀಮರಾಯ ಪೂಜಾರಿ, ತಮ್ಮಣ್ಣ ಜಾಗೀರ್ದಾರ, ಹೊನ್ನಪ್ಪ ಮಾನ್ಪಡೆ, ಮಲ್ಲನಗೌಡ ಮಾಲಿ ಪಾಟೀಲ್, ಮಲ್ಲಿಕಾರ್ಜುನ್  ಹೊನ್ನಪ್ಪ  ಲೋಕಾಪುರ ಸೇರಿದಂತೆ ರೈತರು ಮತ್ತು ರೈತ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *