ಮಹಾಶೈವ ಧರ್ಮಪೀಠದಲ್ಲಿ 74 ನೆಯ ‘ ಶಿವೋಪಶಮನ ಕಾರ್ಯ’

ರಾಯಚೂರು 🙁 ಗಬ್ಬೂರು ,ಡಿಸೆಂಬರ್ 24,2023) : ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಡಿಸೆಂಬರ್ 24 ರ ಆದಿತ್ಯವಾರದಂದು 74 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ವಿಶ್ವೇಶ್ವರ ಶಿವನ ಸನ್ನಿಧಿಯನ್ನರಸಿ ದೂರ ದೂರದ ಊರುಗಳಿಂದ ಬಂದಿದ್ದ ಭಕ್ತರುಗಳಿಗೆ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹವನ್ನು ಕರುಣಿಸಿದರು.

ಮಹಾಶೈವ ಧರ್ಮಪೀಠದ ಕ್ಷೇತ್ರೇಶ್ವರ ವಿಶ್ವೇಶ್ವರ ಶಿವನು ತನ್ನ ಸನ್ನಿಧಿಯನ್ನರಸಿ ಬರುವ ಭಕ್ತರ ಎಂತಹದೆ ಕಷ್ಟ,ರೋಗಗಳನ್ನು ನಿವಾರಿಸುತ್ತಿರುವುದರಿಂದ ಅಸಾಧ್ಯರೋಗಪೀಡಿತರು ಪ್ರತಿ ರವಿವಾರ ಮಹಾಶೈವ ಧರ್ಮಪೀಠಕ್ಕೆ ಆಗಮಿಸಿ,ಪರಿಹಾರ ಕಂಡುಕೊಳ್ಳುತ್ತಿದ್ದಾರೆ.ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಕನಕಪುರ ಗ್ರಾಮದ ಕೃಷ್ಣಪ್ಪ ಎನ್ನುವ ಹುಟ್ಟಿನಿಂದ ಮಾತುಬಾರದ ಐದು ವರ್ಷದ ಬಾಲಕ ಇಂದು ವಿಶ್ವೇಶ್ವರ ಶಿವನ ಸನ್ನಿಧಿಗೆ ಬಂದಿದ್ದ.ಪೀಠಾಧ್ಯಕ್ಷರಾದ ಮುಕ್ಕಣ್ಣ ಕರಿಗಾರ ಅವರು ಬಾಲಕನನ್ನು ಪರೀಕ್ಷಿಸಿ,ಶಿವಾಭಯ ಕರುಣಿಸಿದರು.

ಇಂದಿನ ದಾಸೋಹಿಗಳಾದ ವೆಂಕೋಬ ಪಾಟೀಲ ಶಹಾಪುರ ಅವರ ಪರವಾಗಿ ಅವರ ಪುತ್ರ ಶಶಾಂಕ ಮತ್ತು ವೆಂಕೋಬ ಪಾಟೀಲರ ಪತ್ನಿಯವರನ್ನು ಪೀಠಾಧ್ಯಕ್ಷರು ಶಿವಾನುಗ್ರಹಪೂರ್ವಕವಾಗಿ ಸನ್ಮಾನಿಸಿದರು.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ,ಮಹಾಶೈವ ಧರ್ಮಪೀಠದ ಮೂಲಕಾರ್ಯಕರ್ತರುಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ಮಹಾಶೈವ ಧರ್ಮಪೀಠದ ದಾಸೋಹ ಸಮಿತಿಯ ಅಧ್ಯಕ್ಷ ಗುರುಬಸವ ಹುರಕಡ್ಲಿ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳು ಮತ್ತು ಭಕ್ತಪ್ರಮುಖರುಗಳಾದ ಶಿವಯ್ಯ ಸ್ವಾಮಿ ಮಠಪತಿ,ಶರಣಗೌಡ ಹೊನ್ನಟಗಿ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ,ಗಬ್ಬೂರಿನ ಗಾಯತ್ರಿ ಪೀಠದ ಅಧ್ಯಕ್ಷರಾದ ಉದಯಕುಮಾರ ಪಂಚಾಳ,ಮಸೀದಪುರದ ದೇವಿಉಪಾಸಕರಾದ ರಾಮಕೃಷ್ಣ ಗುಂಟ್ರಾಳ,ನರಸರಡ್ಡೆಪ್ಪಗೌಡ ಮಾಲಿಪಾಟೀಲ್,ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಮಲ್ಲಯ್ಯ ಜೇಗರಕಲ್, ಪತ್ರಕರ್ತರುಗಳಾದ ರಮೇಶ ಖಾನಾಪುರ,ಬಸವರಾಜ ಬ್ಯಾಗವಾಟ್,ಯಲ್ಲಪ್ಪ ಕರಿಗಾರ,ಪರಶುರಾಮ ಜಡೇರ, ಸಿದ್ರಾಮಯ್ಯಸ್ವಾಮಿ ಹಳ್ಳಿ,ತಾತಪ್ಪ ಚಿಕ್ಕಹಳ್ಳಿ, ಬಸವರಾಜ ಹದ್ದಿನಾಳ, ರಂಗನಾಥ ಮಸೀದಪುರ ,ಚಿತ್ರಶೇಖರ ಪತ್ತಾರ ಮಲದಕಲ್,ಬೆಟ್ಟಪ್ಪ ಗದಾರ, ಅಮರೇಶ ಚಲುವಾದಿ,ಬೂದಿಬಸವ ಕರಿಗಾರ,ಹನುಮೇಶ,ಶಿವಾನಂದ ಮಸೀದಪುರ,ವೆಂಕಟೇಶ,ಶಿವಕುಮಾರ ವಸ್ತಾರ್ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರುಗಳು ಉಪಸ್ಥಿತರಿದ್ದರು.

About The Author