ಮಹಾಶೈವ ಪರಂಪರೆ : ನಿಗ್ರಹಾನುಗ್ರಹ ಸಮರ್ಥಳಿರುವ ವಿಶ್ವಮಾತೆ ಮಹಾಕಾಳಿಮೂರ್ತಿ ಪ್ರತಿಷ್ಠಾಪನಾ ವಾರ್ಷಿಕೋತ್ಸವ

ಮಹಾಶೈವ ಪರಂಪರೆ ನಿಗ್ರಹಾನುಗ್ರಹ ಸಮರ್ಥಳಿರುವ ವಿಶ್ವಮಾತೆ ಮಹಾಕಾಳಿಮೂರ್ತಿ ಪ್ರತಿಷ್ಠಾಪನಾ ವಾರ್ಷಿಕೋತ್ಸವ : ಮುಕ್ಕಣ್ಣ ಕರಿಗಾರ

ಮಹಾಶೈವ ಧರ್ಮಪೀಠದಲ್ಲಿ ಜಗನ್ಮಾತೆ ಮಹಾಕಾಳಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ನಾಳೆಗೆ ಅಂದರೆ 2023 ರ ಡಿಸೆಂಬರ್ 22 ಕ್ಕೆ ಒಂದು ವರ್ಷವು ಪೂರ್ಣಗೊಳ್ಳಲಿದೆ.ಆ ಪ್ರಯುಕ್ತ ನಾಳೆ ಮಹಾಶೈವ ಧರ್ಮಪೀಠದಲ್ಲಿ ಮಹಾಕಾಳಿದೇವಿಗೆ ವಿಶೇಷ ಪೂಜೆ,ಸೇವೆಗಳನ್ನು ಸಲ್ಲಿಸಲಾಗುತ್ತದೆ.ಶುಭಕೃತ್ ಸಂವತ್ಸರ ಶಕೆ 1944 ರ ಮಾರ್ಗಶಿರ ಶುದ್ಧ ದಶಮಿಯ ದಿನವಾಗಿದ್ದ 02.12.2022 ರ ಶುಕ್ರವಾರದಂದು ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಕ್ಷೇತ್ರೇಶ್ವರ ವಿಶ್ವೇಶ್ವರ ಶಿವ ಹಾಗೂ ಕ್ಷೇತ್ರೇಶ್ವರಿ ದುರ್ಗಾದೇವಿಯರ ದೇವಸ್ಥಾನಗಳ ಮುಂಭಾಗದಲ್ಲಿದ್ದ ಶಮೀವೃಕ್ಷದಡಿ ಪುಟ್ಟದೇವಸ್ಥಾನ ಒಂದನ್ನು ಕಟ್ಟಿ ಮಹಾಕಾಳಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.ಮಹಾಕವಿ ಕಾಳಿದಾಸನ ‘ ಕಾಲಾಮೃತಮ್’ ಕೃತಿಯಲ್ಲಿ ವಿವರಿಸಿದ ಧಾರ್ಮಿಕ ವಿಧಿಗಳಿಗನುಗುಣವಾಗಿ ಕಳೆದ ವರ್ಷದ ಮಾರ್ಗಶಿರ ನವಮಿಯ ಶುಕ್ರವಾರದಂದು ಮಹಾಕಾಳಿದೇವಿಯ ಕಳಾಹ್ವಾನದೊಂದಿಗೆ ಪ್ರಾಣಪ್ರತಿಷ್ಠೆ ನೆರವೇರಿಸಲಾಗಿತ್ತು.

ಮಹಾಕಾಳಿ ಮೂರ್ತಿ ಪ್ರತಿಷ್ಠಾಪನಾ ಪೂರ್ವದ ವಿಗ್ರಹಶುದ್ಧಿ,ಕಳಾಹ್ವಾನಾದಿ ಶಾಸ್ತ್ರೋಕ್ತಕರ್ಮಗಳನ್ನು ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷನಾಗಿರುವ ನಾನೇ ನೆರವೇರಿಸಿದ್ದೆ. ಶುಷ್ಕ ಮಂತ್ರೋಚ್ಛಾರಣೆಯ ಆಹ್ವಾನ ವಿಸರ್ಜನೆ ಕ್ರಿಯೆಗಳನ್ನೆಸಗುವ ಶಾಸ್ತ್ರಿಗಳು ಪುರೋಹಿತರಗಳ ಜಡತ್ವವನ್ನು ನಾನು ನಿರಾಕರಿಸಿರುವುದರಿಂದ ಆಧ್ಯಾತ್ಮಿಕಶಕ್ತಿಸಂಚಯದಿಂದ ನಮ್ಮ ಮಹಾಶೈವ ಧರ್ಮಪೀಠದ ವಿಶ್ವೇಶ್ವರ ಶಿವ ಹಾಗೂ ವಿಶ್ವೇಶ್ವರಿ ದುರ್ಗಾದೇವಿಯರ ಲಿಂಗ ,ಮೂರ್ತಿಗಳನ್ನು ನಾನೇ ಪ್ರತಿಷ್ಠಾಪನೆ ಗೈದಿರುವಂತೆ ಮಹಾಕಾಳಿಮೂರ್ತಿಯ ಪ್ರತಿಷ್ಠಾಪನೆಯನ್ನು ಸಹ ನಾನೇ ನೆರವೇರಿಸಿದ್ದೇನೆ ಮಹಾಶೈವ ಧರ್ಮಪೀಠದಲ್ಲಿ ಆಧ್ಯಾತ್ಮಿಕಶಕ್ತಿಸಂಪನ್ನರಲ್ಲದ ಜಡಜೀವರುಗಳಿಗೆ ಮನ್ನಣೆ ಇಲ್ಲವಾದ್ದರಿಂದ.

ಮಹಾಶೈವ ಧರ್ಮಪೀಠದ ಕ್ಷೇತ್ರೇಶ್ವರ ವಿಶ್ವೇಶ್ವರ ಶಿವನ ಸಂಕಲ್ಪದಂತೆ ಶ್ರೀಕ್ಷೇತ್ರ ಕೈಲಾಸದ ರಕ್ಷಣೆಗಾಗಿ ತಾಯಿ ಮಹಾಕಾಳಿಯ ಆಗಮನವಾಗಿದೆ.೨೦೨೨ ರ ಜೂನ್ ಜುಲೈ ತಿಂಗಳುಗಳಿಂದ ನಾನು ಶ್ರೀಕ್ಷೇತ್ರ ಕೈಲಾಸದಲ್ಲಿ ಶಿವನ ಆಣತಿಯನ್ನನುಸರಿಸಿ ಲೋಕಸಂಕಷ್ಟಪರಿಹಾರಕ ‘ ಶಿವೋಪಶಮನ ಕಾರ್ಯ’ ಎನ್ನುವ ಆಧ್ಯಾತ್ಮಿಕಶಕ್ತಿಯಿಂದ ಲೋಕಾನುಗ್ರಹವನ್ನುಂಟು ಮಾಡುವ ಕಾರ್ಯವನ್ನು ಪ್ರಾರಂಭಿಸಿದೆ.(22.06.2022 ರಿಂದ ಶಿವೋಪಶಮನ ಕಾರ್ಯವು ಅಧಿಕೃತಗೊಂಡಿದೆ)ಕ್ಷುದ್ರಜೀವಿಗಳು‌ ಕೆಲವರು ನನ್ನ ಮೇಲೆ ಅಭಿಚಾರಕರ್ಮಪ್ರಯೋಗ ಮಾಡತೊಡಗಿದರು.ಆಗ ಸ್ವಯಂ ವಿಶ್ವೇಶ್ವರ ಶಿವನೇ ಕ್ಷೇತ್ರರಕ್ಷಣೆಗಾಗಿ ಮಹಾಕಾಳಿಯನ್ನು ಆಹ್ವಾನಿಸಿ,ಪ್ರತಿಷ್ಠಾಪಿಸಲು ಆಜ್ಞಾಪಿಸಿದನು.ಶಿವನ ಆಜ್ಞೆಯಂತೆ ಮಹಾಶೈವ ಶರನ್ನವರಾತ್ರಿಯ ಸಂದರ್ಭದಲ್ಲಿ ವಿಜಯದಶಮಿಯಂದು ಶಮೀಪೂಜೆಗೈಯುತ್ತಿದ್ದ ಶಮೀವೃಕ್ಷದ ಬುಡದಲ್ಲಿಯೇ ಮಹಾಕಾಳಿಯನ್ನು ಪ್ರತಿಷ್ಠಾಪಿಸಿದೆವು.
ದುಷ್ಟಶಿಕ್ಷಕಿ,ಶಿಷ್ಟರಕ್ಷಕಿಯಾಗಿರುವ ತಾಯಿ ಮಹಾಕಾಳಿಯ ಅನುಗ್ರಹದಿಂದ ಈ ಒಂದು ವರ್ಷದ ಅವಧಿಯಲ್ಲಿ ನಮ್ಮ‌ಮಹಾಶೈವ ಧರ್ಮಪೀಠವು ರಾಜ್ಯ ಹೊರರಾಜ್ಯಗಳಲ್ಲಿ ಪ್ರಸಿದ್ಧಿಪಡೆದಿದೆ.ಪ್ರತಿರವಿವಾರ ನೂರಾರು ಜನ ಭಕ್ತರು ಶ್ರೀಕ್ಷೇತ್ರಕೈಲಾಸಕ್ಕೆ ಆಗಮಿಸಿ,ವಿಶ್ವೇಶ್ವರ ಶಿವನಿಂದ ಪರಿಹಾರ ಪಡೆಯುತ್ತಿದ್ದಾರೆ.ಇಲ್ಲಿಯವರೆಗೆ 73 ಶಿವೋಪಶಮನಕಾರ್ಯಗಳಾಗಿವೆ.ಜಗದ್ರಕ್ಷಕಿಯಾಗಿರುವ ತಾಯಿ ಮಹಾಕಾಳಿಯು ಶ್ರೀಕ್ಷೇತ್ರಕೈಲಾಸವನ್ನು ಅದರ ಪೀಠಾಧ್ಯಕ್ಷನಾದ ನನ್ನನ್ನು ಕುಟುಂಬಸಮೇತವಾಗಿ ರಕ್ಷಿಸಿ,ಪೊರೆಯುತ್ತಿದ್ದಾಳೆ.ಮಹಾಶೈವ ಧರ್ಮಪೀಠದ ಸಿದ್ಧಿ ಪ್ರಸಿದ್ಧಿಗಳ ಹಿಂದೆ ತಾಯಿ ಮಹಾಕಾಳಿಯ ಅನುಗ್ರಹವಿದೆ.ನಮ್ಮ ಮಠದ ಏಳಿಗೆಯನ್ನು ಸಹಿಸದ ಕ್ಷುದ್ರಜಂತುಗಳು ಕೆಲವು ಇವೆ ಗಬ್ಬೂರಿನಲ್ಲಿ.ಪ್ರತಿ ರವಿವಾರ ಜನರು ಎಲ್ಲಾ ದಿಕ್ಕುಗಳಿಂದಲೂ ನಮ್ಮ ಮಠಕ್ಕೆ ಆಗಮಿಸುತ್ತಿರುವುದನ್ನು ಕಂಡು ಸಹಿಸದ ಅಲ್ಪರು ನಾನಾ ರೀತಿಯ ಅಭಿಚಾರಕರ್ಮ,ಕ್ಷುದ್ರವಿದ್ಯಾ ಪ್ರಯೋಗಗಳನ್ನು ಮಾಡಿದರು.ನಾನು ಶಿವೋಪಶಮನ ಕಾರ್ಯನಡೆಸದಂತೆ ನನಗೆ ತೊಂದರೆ ಕೊಡಲು ಹಲವು ಹತ್ತು ತಾಂತ್ರಿಕ ಪ್ರಯೋಗಗಳನ್ನು ಮಾಡಿದರು.ತಾಯಿ ಮಹಾಕಾಳಿಯು ಸ್ಮಶಾನಕಾಳಿಯ ಅತ್ಯುಗ್ರರೂಪತಳೆದು ಕ್ಷುದ್ರವಿದ್ಯೆಗಳನ್ನೆಲ್ಲ ಸುಟ್ಟುಬೂದಿಮಾಡಿದಳು.ನಮ್ಮ ಮಠಕ್ಕೆ ಯಾರಾದರೂ ಕೆಟ್ಟದ್ದನ್ನು ಮಾಡಲು ಯೋಚಿಸುತ್ತಿದ್ದರೆ ನನಗೆ ಮುಂಚಿತವಾಗಿಯೇ ಆ ಸುಳಿವು ನೀಡಿ ಕೈಗೊಳ್ಳಬೇಕಾದ ಪರಿಹಾರಕ್ರಮಗಳನ್ನು ಸೂಚಿಸುತ್ತಿದ್ದಳು.ಹೀಗಾಗಿ ನಮ್ಮ ಕ್ಷೇತ್ರದ ಮೇಲೆ ಪ್ರಯೋಗಿಸುತ್ತಿದ್ದ ಎಂತಹದೆ ಕ್ಷುದ್ರವಿದ್ಯೆಯ ಪ್ರಯೋಗ ನಾಟದೆ,ನಿಷ್ಫಲಗೊಳ್ಳುತ್ತಿತ್ತು.ಜೊತೆಗೆ ನಮ್ಮ ಪೀಠಕ್ಕೆ ಕೆಟ್ಟದು ಮಾಡುವವರನ್ನೆಲ್ಲ ತಾಯಿ ಮಹಾಕಾಳಿಯು ಶಿಕ್ಷಿಸುತ್ತ ಬಂದಿದ್ದರಿಂದ ಇಂದು ಮಹಾಶೈವ ಧರ್ಮಪೀಠಕ್ಕೆ ಕೇಡು ಎಸಗಲು ಜನರು ಹಿಂಜರಿಯುತ್ತಿದ್ದಾರೆ.ನಿತ್ಯಜಾಗೃತಳಾಗಿರುವ ತಾಯಿ ಮಹಾಕಾಳಿಯು ದುಷ್ಟಜನರನ್ನು ನಿಗ್ರಹಿಸುವುದಷ್ಟೇ ಸ್ವತಃ ಪೀಠಾಧ್ಯಕ್ಷನಾಗಿರುವ ನಾನೇ ಯಾವುದಾದರೂ ಪೂಜೆಯಲ್ಲಿ ಲೋಪ ಅಥವಾ ಯಾವ ಸಂಪ್ರದಾಯಕ್ಕಾದರೂ ಭಂಗವನ್ನುಂಟುಮಾಡಿದರೆ ತಕ್ಷಣವೆ ಆವೇಶಗೊಂಡು ನನ್ನನ್ನೂ ಎಚ್ಚರಿಸುತ್ತಾಳೆ.

ತಾಯಿ ಮಹಾಕಾಳಿಯ ಆಗಮನದಿಂದ ಮಹಾಶೈವ ಧರ್ಮಪೀಠದಲ್ಲಿ ಅಸಾಧ್ಯಕಾರ್ಯಗಳು ಕರಸುಲಭವಾಗಿ ಕೈಗೂಡಿವೆ.ಕಳೆದ ನಾಲ್ಕೈದು ವರ್ಷಗಳಿಂದಲೂ ವಿಘ್ನಗಳಿಗೆ ಗುರಿಯಾಗಿದ್ದ ವಿಶ್ವೇಶ್ವರ ಶಿವ- ವಿಶ್ವೇಶ್ವರಿ ದುರ್ಗಾದೇವಿಯರ ದೇವಸ್ಥಾನಗಳ ಶಿಖರ,ಗೋಪುರನಿರ್ಮಾಣ ಮತ್ತು ಕಳಶಾರೋಹಣ ಕಾರ್ಯವು ಸಾಂಗವಾಗಿ ನೆರವೇರಿತು.ತಾಯಿ ಮಹಾಕಾಳಿಯ ಆಗಮನಪೂರ್ವದಲ್ಲಿ ಕೇವಲ ಒಂದೆರಡು ಕೊಂಬೆ ರೆಂಬೆಗಳಲ್ಲಿ ಹಸಿರೆಲೆಗಳನ್ನು ಹೊಂದಿ ಬೋಟುಮರವಾಗಿದ್ದ ಶಮೀವೃಕ್ಷವು ತಾಯಿಯ ಸಾನ್ನಿಧ್ಯದಿಂದ ಕೆಂಬೆರೆಂಬೆಗಳು ಚಿಗಿತು,ಬಲಿತು ಹಸಿರಿನಿಂದ ನಳನಳಿಸುತ್ತಿದೆ.

ತಾಯಿ ಮಹಾಕಾಳಿಯ ಆಗಮನದಿಂದ ಅಸಾಧ್ಯವಾದ ರಾಜಕೀಯ ಸಂಕಲ್ಪವೂ ಸಿದ್ಧಿಸಿದೆ.ಸಿದ್ಧರಾಮಯ್ಯನವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಲು ಮತ್ತು ಶ್ರೀಮತಿ ಕರಿಯಮ್ಮ ಜಿ ನಾಯಕ್ ಅವರು ದೇವದುರ್ಗದ ಶಾಸಕರಾಗಿ ಆಯ್ಕೆಯಾಗಲು ನಾನು ತಾಯಿ ಮಹಾಕಾಳಿಯ ಸನ್ನಿಧಿಯಲ್ಲಿ ಒಂದು ತಿಂಗಳ ಕಾಲ ಅಖಂಡ ಶ್ರೀದೇವಿ ಪುರಾಣ ಪಾರಾಯಣವ್ರತವನ್ನು ಕೈಗೊಂಡೆ.ನನ್ನ ಸಂಕಲ್ಪಕ್ಕೆ ಸಿದ್ಧಿಯನ್ನು ಅನುಗ್ರಹಿಸಿದ ತಾಯಿ ಮಹಾಕಾಳಿಯು ‘ ಮಗನೆ,ನಾನು ನಿನ್ನ ಸಂಕಲ್ಪವನ್ನು ಈಡೇರಿಸುವೆ.ಆದರೆ ಅವರಿಬ್ಬರೂ ನಿನ್ನನ್ನು ಮರೆಯುತ್ತಾರೆ’ ಎಂದು ಎಚ್ಚರಿಸಿದ್ದಳು.’ ಏನಾದರಾಗಲಿ ತಾಯಿ,ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಲಿ,ಕರಿಯಮ್ಮನವರು ದೇವದುರ್ಗದ ಶಾಸಕರಾಗಲಿ’ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸಿದ್ದೆ.ಸಿದ್ಧರಾಮಯ್ಯನವರಿಗೆ ಎದುರಾಗಿದ್ದ ಸಾವಿರ ಅಡೆತಡೆಗಳನ್ನು ನಿವಾರಿಸಿ ತಾಯಿಮಹಾಕಾಳಿಯು ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದಳು.ಗೆದ್ದೇಗೆಲ್ಲುವೆನೆಂಬ ಅತ್ಯುತ್ಸಾಹದಲ್ಲಿ ನಮ್ಮ ಮಠವನ್ನು ನಿರ್ಲಕ್ಷಿಸಿದ್ದ ಶಿವನಗೌಡ ನಾಯಕರ ವಿರುದ್ಧ ಕರಿಯಮ್ಮನಾಯಕ ಅವರನ್ನು ಮುವ್ವತ್ತುಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲಿಸಿದಳು ತಾಯಿ ಮಹಾಕಾಳಿ.ಸಿದ್ಧರಾಮಯ್ಯನವರು ಅಧಿಕಾರಮದೋನ್ಮತ್ತರಾಗಿ ನನ್ನ ಉಪಕಾರವನ್ನು,ತಾಯಿ ಮಹಾಕಾಳಿಯ ಅನುಗ್ರಹವನ್ನು ಮರೆತರು.ಫಲವಾಗಿ ಐದುವರ್ಷಗಳ ಆಳ್ವಿಕೆಯ ಅವಕಾಶವನ್ನು ಕಳೆದುಕೊಂಡು ಅವಧಿಪೂರ್ವವಾಗಿ ಅಧಿಕಾರದಿಂದ ನಿರ್ಗಮಿಸುವ ದುಸ್ಥಿತಿಯನ್ನು ಬರಮಾಡಿಕೊಂಡರು.ಮಹಾಶೈವ ಧರ್ಮಪೀಠದ ವಿಜಯದುರ್ಗೆ ಎಂದು ಲೋಕಪ್ರಖ್ಯಾತಳಾದ ತಾಯಿ ದುರ್ಗಾದೇವಿಯ ಅನುಗ್ರಹ ಮತ್ತು ಮಹಾಕಾಳಿಯ ಶ್ರೀರಕ್ಷೆಯಿಂದ ಪ್ರಚಂಡ ಬಹುಮತದಿಂದ ಗೆದ್ದು ಶಾಸಕಿಯಾದ ಬಳಿಕ ನಮ್ಮ ಮಹಾಶೈವ ಧರ್ಮಪೀಠದಲ್ಲಿ ಮೊದಲ ಕಾಮಗಾರಿಯನ್ನು ಪ್ರಾರಂಭಿಸುವ ಮೂಲಕ ಶಾಸಕಸ್ಥಾನದ ಕಾರ್ಯನಿರ್ವಹಣೆ ಮಾಡುತ್ತೇನೆ ಎಂದು ತಮಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ್ದ ಶ್ರೀಮತಿ ಕರಿಯಮ್ಮ ನಾಯಕ್ ಅವರು ನಮ್ಮ ಮಠದಲ್ಲಿ ಸಮುದಾಯಭವನ ಇಲ್ಲವೆ ಯಾತ್ರಿನಿವಾಸ ನಿರ್ಮಿಸುವ ತಮ್ಮ ಮಾತನ್ನು ಉಳಿಸಿಕೊಳ್ಳಲಿಲ್ಲ.ದೈವೇಚ್ಚೆ ಏನಿರಬಹುದೆಂದು ಯಾರು ಬಲ್ಲರು?ದೈವವನ್ನು ಮರೆತವರು ಉದ್ಧಾರವಾಗುವುದಿಲ್ಲ.ನಾನು ಸಿದ್ಧರಾಮಯ್ಯನವರನ್ನಾಗಲಿ,ಕರಿಯಮ್ಮ ನಾಯಕ್ ಅವರನ್ನಾಗಲಿ ನಂಬಿ ಮಹಾಶೈವ ಧರ್ಮಪೀಠವನ್ನು ಕಟ್ಟಿಲ್ಲ.ಹಾಗಾಗಿ ಅವರು ಕೊಡುವ ಅನುದಾನವನ್ನೇ ನಚ್ಚಿಕುಳಿತುಕೊಳ್ಳುವ ದೈನೇಸಿ ಸ್ಥಿತಿಯೂ ನನಗಿಲ್ಲ. ವಿಶ್ವನಿಯಾಮಕನಾಗಿರುವ ವಿಶ್ವೇಶ್ವರ ಶಿವನು ಸರ್ವಶಕ್ತನಿದ್ದಾನೆ.ನನ್ನ ಆಧ್ಯಾತ್ಮಿಕ ಶಕ್ತಿಯಲ್ಲಿ ನನಗೆ ಅಚಲ ನಂಬಿಕೆ ಇದೆ.ಮಹಾಶೈವ ಧರ್ಮಪೀಠದ ಸರ್ವತೋಮುಖ ಅಭಿವೃದ್ಧಿಗಾಗಿಯೇ ಆಗಮಿಸಿ,ಕ್ಷೇತ್ರವನ್ನು ರಕ್ಷಿಸಿ,ಪೊರೆಯುತ್ತಿರುವ ತಾಯಿ ಮಹಾಕಾಳಿಯ ಅನವರತಶ್ರೀರಕ್ಷೆಯೂ ನಮಗಿದೆ.ವಿಶ್ವನಿಯಾಮಕಿಯಾಗಿರುವ ತಾಯಿಮಹಾಕಾಳಿಯು ಶ್ರೀಕ್ಷೇತ್ರ ಕೈಲಾಸವನ್ನು ರಕ್ಷಿಸಿ,ಪೊರೆಯುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಮಹಾಶೈವ ಧರ್ಮಪೀಠವು ಶಿವಸರ್ವೋತ್ತಮತತ್ತ್ವಪ್ರತಿಪಾದನೆಯ ಜಗತ್ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿ ಬೆಳೆಯಲಿದೆ.

About The Author