ನ್ಯಾಯ ಕೇಳಿದ ಪೌರಕಾರ್ಮಿಕರಿಗೆ ವರ್ಗಾವಣೆ ಶಿಕ್ಷೆ : ಮೇಲಧಿಕಾರಿಗಳ ದೌರ್ಜನ್ಯ ಖಂಡಿಸಿ ಬೆಳ್ಳಂಬೆಳಗ್ಗೆ ಧರಣಿ

*ಶಹಾಪುರ ನಗರಸಭೆ ಎದುರು ಬೆಳ್ಳಂಬೆಳಗ್ಗೆ ಕಾರ್ಮಿಕರಿಂದ ಧರಣಿ
*ಪೌರಕಾರ್ಮಿಕರೇ ಹುಷಾರ್. ಉಸಿರೆತ್ತಿದರೆ ವರ್ಗಾವಣೆ ಗ್ಯಾರಂಟಿ ?

ಶಹಾಪುರ : ನ್ಯಾಯಯುತವಾದ ಬೇಡಿಕೆಗಳನ್ನು ಕೇಳಲು ಮುಂದಾದ ಪೌರ ಕಾರ್ಮಿಕರಿಗೆ ವರ್ಗಾವಣೆ ಶಿಕ್ಷೆ ನೀಡುವ ಮೂಲಕ ಅಧಿಕಾರಿ ವರ್ಗ ಪೌರಕಾರ್ಮಿಕರ ಮೇಲೆ ದರ್ಪ ಮೆರೆದಿರುವ ಸುದ್ದಿ ನಗರದಲ್ಲಿ ಹರಿದಾಡುತ್ತಿದೆ. ನಗರದ ನಗರಸಭೆ ಪೌರ ಕಾರ್ಮಿಕರ ಮೇಲಿನ ಮೇಲಾಧಿಕಾರಿಗಳ ದೌರ್ಜನ್ಯ ಖಂಡಿಸಿ ಕಾರ್ಮಿಕರು ಇಂದು ಬುಧವಾರ ಬೆಳ್ಳಂಬೆಳಗ್ಗೆ ಧರಣಿ ಆರಂಭಿಸಿದ್ದಾರೆ.ನಮ್ಮ ವೇತನದಲ್ಲಿ ಕಡಿತಗೊಳಿಸಿರುವ ಐಪಿಎಫ್, ಇಎಸ್ ಹಣ ಜಮೆ ಮಾಡುವಂತೆ ಕಳೆದ 7-8 ತಿಂಗಳಿಂದ ಮೌಖಿಕವಾಗಿ ಹೇಳಿದರೂ, ಮನವಿ ಪತ್ರ ಕೊಟ್ಟಿದ್ದರೂ ಯಾವುದೇ ಪ್ರಯೋಜನೆ ಆಗದಿದ್ದಾಗ ಧರಣಿ ನಡೆಸಿದಾಗ ಎಲ್ಲರ ಎದುರೇ ಭರವಸೆ ನೀಡಿ, ಈಗ ನಮ್ಮ ಪೌರಕಾರ್ಮಿಕ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿಯವರಿಗೆ ಕಾರಣ ಕೇಳುವ ನೋಟಿಸ್ ನೀಡುವ ಮೂಲಕ ನಮ್ಮ ಹೋರಾಟದ ಹಕ್ಕುಗಳನ್ನು ಕಿತ್ತಿಕೊಂಡಿದ್ದಾರೆ. ಇಷ್ಟೇ ಸಾಲದೆಂಬುದ್ದಕ್ಕೆ ಈಗ ಅವರನ್ನು ವರ್ಗಾವಣೆ ಮಾಡುವ ಮೂಲಕ ಪೌರಕಾರ್ಮಿಕರ ಹಕ್ಕುಗಳನ್ನು ಕಿತ್ತಿಕೊಂಡಿದ್ದಾರೆ.

ನಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಟ ಮಾಡುವುದು ತಪ್ಪಾ? ನ್ಯಾಯ ಕೇಳುವ ಅಧಿಕಾರ ನಮಗಿಲ್ಲವೇ. ನಮ್ಮ ಪೌರಕಾರ್ಮಿಕ ಸಂಘವನ್ನು ಒಡೆಯಲು ಕಾಣದ ಕೈಯೊಂದು ತೆರೆಮರೆಯಲ್ಲಿ ಕೆಲಸ ಮಾಡಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ನಮ್ಮ ಸಂಘದ ಅಧ್ಯಕ್ಷ, ಕಾರ್ಯದರ್ಶಿಯವರ ವರ್ಗಾವಣೆ ರದ್ದುಪಡಿಸದಿದ್ದರೆ ಅನಿರ್ದಿಷ್ಟ ಪ್ರತಿಭಟನೆ ನಡೆಸುವದಾಗಿ ಪೌರಕಾರ್ಮಿಕರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.ಡಿಸೆಂಬರ್ 19 ಮಂಗಳವಾರ ನಗರ ಸಭೆಯಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ ಸಣ್ಣ ಕೈಗಾರಿಕೆಗಳ ಸಚಿವ ಶರಣಬಸಪ್ಪಗೌಡ ದರ್ಶನಾಪುರ ವರೆದುರು ಅಳಲು ತೋಡಿಕೊಂಡ ಎರಡು ತಾಸಿನಲ್ಲಿ ನಮ್ಮ ಸಂಘದ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಇಬ್ಬರನ್ನು ಬೇರಡೆ ವರ್ಗಾವಣೆ ಮಾಡಿ ಆದೇಶ ಪ್ರತಿ ನೀಡಿ ಇವತ್ತೇ ಬಿಡುಗಡೆಗೊಳಿಸಬೇಕು ನಡಿರಿ ಯಾವುದಾದರೂ ಮಾತಾಡೋದಿಲ್ಲವೆಂದು ದರ್ಪ ತೋರುತ್ತಿದ್ದಾರೆ ಎಂದು ಧರಣಿನಿರತರು ಆರೋಪಿಸಿದ್ದಾರೆ.

ಸಚಿವರ ಮುಂದೆ ನಮ್ಮ ಗೋಳು ತೋಡಿಕೊಂಡ ಬೆನ್ನಲ್ಲೇ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿಯನ್ನು ಬೇರೆ ಕಡೆ ವರ್ಗಾವಣೆ ಮಾಡಿರುವುದನ್ನು ನೋಡಿದರೆ ನಗರ ಸಭೆ ಅಧಿಕಾರಿಗಳ ಆಡಳಿತ ವೈಖರಿ ಸ್ಪಷ್ಟವಾಗುತ್ತದೆ. ಇದರಲ್ಲಿ ಕಾಣದ ಕೈವಾಡವಿರುವ ಬಗ್ಗೆ ಬಲವಾದ ಅನುಮಾನಗಳು ಬರುತ್ತಿವೆ.ಸಮಸ್ಯೆ ದೊಡ್ಡದಾಗುವ ಮೊದಲೇ ಸಚಿವರು ಪೌರಕಾರ್ಮಿಕರ ಸಮಸ್ಯೆ ಬಗೆಹರಿಸಬೇಕು ಎಂದು ಕಾರ್ಮಿಕ ಸಂಘಗಳು ಮನವಿ ಮಾಡಿವೆ.
ನಮ್ಮ ನ್ಯಾಯಯುತ ಬೇಡಿಕೆ ಸಲ್ಲಿಸಿರುವ ಹಿನ್ನೆಲೆ’ ಜೊತೆಗೆ ಸಚಿವರಾದ ದರ್ಶನಾಪುರ ಅವರ ಮುಂದೆ ಅಳಲು ತೊಡಿಕೊಂಡ ಹಿನ್ನೆಲೆ ನಮ್ಮನ್ನು ಹೆಚ್ಚು ತುಚ್ಛವಾಗಿ ಕಾಣುತ್ತಿರುವಾಗ, ಚರಂಡಿ ಮಾಡುವ ಕಾರ್ಮಿಕರಾದ ತಮಗೆ ಇಷ್ಟು ಸೊಕ್ಕು ಇದ್ದರೆ ನಿಮ್ಮ ಜೀವ ನಮ್ಮ ಕೈಯಲ್ಲಿದೆ, ಯಾರೋ ಮಾತು ಕೇಳಿ ನಮಗೆ ಕೇಳುವಷ್ಟು ಶಕ್ತಿ ಬಂದಿದೆಯೇ ಎಂದು ಈ ಕುರಿತು ಬೆದರಿಕೆ ಹಾಕಿದ್ದಾರೆ. ಎಂದು ಕಾರ್ಮಿಕರ ಆರೋಪವಾಗಿದೆ.ಜೊತೆಗೆ ಪರಿಸರ ಅಭಿಯಂತರರು , ಪೌರಾಯುಕ್ತರು ಕೂಡಲೇ ಸರಿ ಪಡಿಸುವೆ ಎಂದು ಭರವಸೆ ನೀಡಿ ನಮ್ಮಲ್ಲಿಯೇ ದೌರ್ಜನ್ಯ ಎಸಗುವ’ ಬೆದರಿಕೆಯೊಡ್ಡುವ ಕಾರ್ಯಾಲಯದ ಕಾರಣ ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಅಭಿವೃದ್ಧಿ ಯೋಜನಾ ನಿರ್ದೇಶಕರು ಆಗಮಿಸಿ ನಮ್ಮ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದರು.

ನ್ಯಾಯಯುತ ಬೇಡಿಕೆ ಇಟ್ಟಿರುವ ಕಾರ್ಮಿಕ ಸಂಘದ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಇಬ್ಬರನ್ನು ಬೇರಡೆ ವರ್ಗಾವಣೆ ಮಾಡುವ ಮೂಲಕ ನಮ್ಮನ್ನು ಒಕ್ಮಲೆಬ್ಬಿಸುವ ಹುನ್ನಾರ ನಡೆಸಿದ್ದು, ಈ ಕೂಡಲೇ ವರ್ಗಾವಣೆ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಇಲ್ಲಿಯೇ ಯಥಾರೀತಿ ಮುಂದುವರೆಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಿರತರಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೌರಾಯುಕ್ತ ರಮೇಶ ಬಡಿಗೇರ ಇದೀಗ ಭೇಟಿ ನೀಡಿದ್ದು ಧರಣಿನಿರತರ ಮಧ್ಯ ಮಾತಿನ ಚಕಮಕಿ ನಡೆಯುತ್ತಿದೆ.

About The Author