ಮಾಜಿ ಗ್ರಾ.ಪಂ.ಅಧ್ಯಕ್ಷರಿಂದ ಆರೋಪ : ತುಮಕೂರು ಗ್ರಾಪಂ 80 ಲಕ್ಷಕ್ಕೂ ಹೆಚ್ಚು ಅವ್ಯವಹಾರಕ್ಕೆ ಪಿಡಿಓ ನೇರ ಹೊಣೆ,ತನಿಖೆಗೆ ಒತ್ತಾಯ

yadagiri ವಡಗೇರಾ : ತಾಲೂಕಿನ ತುಮಕೂರು ಗ್ರಾಮ ಪಂಚಾಯತಿಯಲ್ಲಿ ಸುಮಾರು 80 ಲಕ್ಷಕ್ಕೂ ಅಧಿಕ ಹಣ ದುರುಪಯೊಗವಾಗಿದ್ದು ಇದಕ್ಕೆ ನೇರ ಹೊಣೆ ಇಂದಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಣಮಂತಪ್ಪ ಕಡೆಚೂರ ಕಾರಣರಾಗಿದ್ದಾರೆ ಎಂದು ಮಾಜಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷೆ ಮರೇಮ್ಮ ಗಂಡ ಮಲ್ಲಯ್ಯ ಪಿಲ್ಲಿ ಹಾಗೂ ಸದಸ್ಯರು ಆರೋಪಿಸಿದ್ದು,ತುಮಕೂರಿನಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ ಸಭೆಗೆ ಆಗಮಿಸಿದ್ದ ಜಿಲ್ಲಾ ಪಂಚಾಯಿತಿ ಸಿಇಒ ಗರಿಮಾ ಪನ್ವಾರ ಅವರಿಗೆ ಈ ಕುರಿತು ಮನವಿ ಸಲ್ಲಿಸಿದರು.

ನರೇಗಾ ಹಾಗೂ 15ನೇ ಹಣಕಾಸು ಯೋಜನೆಯಲ್ಲಿ ಬೃಹತ್ ಮಟ್ಟದ ಅವ್ಯವಹಾರ ಆಗಿದೆ. ಯಾವುದೇ ರೀತಿಯಾದ ದಾಖಲಾತಿ ಇಲ್ಲದೆ ಮತ್ತು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಗ್ರಾಮ ಸಭೆಗಳನ್ನು ಮಾಡದೆ ಸದಸ್ಯರ ಗಮನಕ್ಕೆ ತರದೆ ಮನಸ್ಸಿಗೆ ಬಂದಂತೆ ಖಾಸಗಿ ವ್ಯಕ್ತಿ ಸೈದಪ್ಪ ಬಳಬಟ್ಟಿ ಎಂಬ ವ್ಯಕ್ತಿಯ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಿರುತ್ತಾರೆ. ಇದರ ಹಿಂದೆ ಪ್ರಬಲವಾದ ರಾಜಕೀಯ ಮುಖಂಡರುಗಳ ಸಹಕಾರವು ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಲೋಕಾಯುಕ್ತ ಅಧಿಕಾರಿಗಳು ಈ ಕುರಿತು ತನಿಖೆಗೆ ಒಳಪಡಿಸಿ ಇದರಲ್ಲಿ ಶಾಮೀಲಾದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ದುರುಪಯೋಗಪಡಿಸಿಕೊಂಡ ಹಣವನ್ನು ಮರಳಿ ಸರ್ಕಾರಕ್ಕೆ ನೀಡುವಂತೆ ಒತ್ತಾಯಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಗಂಗಮ್ಮ ಗಂಡ ವೆಂಕಟೇಶ್,ಊಮಾದೇವಿ ಗಂಡ ಮೊನಪ್ಪ, ಶೀಲಾದೇವಿ ಗಂಡ ದೇವೇಂದ್ರಪ್ಪ ಇದ್ದರು.

About The Author