ಸ್ಪೂರ್ತಿ ಚನ್ನಾರಡ್ಡಿಗೆ ಬಿಇ ಪದವಿಯಲ್ಲಿ ಚಿನ್ನದ ಪದಕ

ಶಹಪುರ : ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ.ಚನ್ನಾರಡ್ಡಿ ತಂಗಡಗಿ ಅವರ ಸುಪುತ್ರಿ ಕು.ಸ್ಪೂರ್ತಿ ಚನ್ನರಡ್ಡಿ ಶರಣಬಸವ ವಿಶ್ವವಿದ್ಯಾಲಯದಿಂದ ಬಿಇ ಸಿವಿಲ್ ಪದವಿಯಲ್ಲಿ (ಸಿಜಿಪಿಎ) 9.73 ಅಂಕಗಳನ್ನು ಪಡೆದು ಪ್ರಥಮ ರ‍್ಯಾಂಕ್‌ನಲ್ಲಿ ಉತ್ತೀರ್ಣಳಾಗಿ ಚಿನ್ನದ ಪದಕ ಮತ್ತು ಐದುಸಾವಿರ ರೂ. ನಗದು ಬಹುಮಾನ ಪಡೆದು ತಾಲೂಕಿಗೆ ಹಾಗೂ ಯಾದಗಿರಿ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಸೋಮವಾರ ನಡೆದ ಶರಣಬಸವ ವಿಶ್ವವಿದ್ಯಾಲಯದ ಐದನೇ ಘಟಿಕೋತ್ಸವ ಸಮಾರಂಭದಲ್ಲಿ ಕು.ಸ್ಪೂರ್ತಿ ವಿಶ್ವವಿದ್ಯಾಲಯದ ಕುಲಾಧಿಪತಿ ಪೂಜ್ಯ ಡಾ.ಶರಣಬಸಪ್ಪ ಅಪ್ಪ ಹಾಗೂ ಕುಲಪತಿಗಳು ಮತ್ತು ಕುಲಸಚಿವರು ಹಾಗೂ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಪ್ರಿಯಾಂಕ ಖರ್ಗೆ,ಮುಖ್ಯ ಅತಿಥಿಗಳು ಚಿನ್ನದ ಪದಕ ಮತ್ತು ನಗದು ಬಹುಮಾನ ನೀಡಿ ಗೌರವಿಸಿದರು.  ಬಹುಹಿಂದೆ ವಿದ್ಯಾರ್ಥಿನಿಯ ತಂದೆ ಪ್ರೊ.ಚನ್ನಾರಡ್ಡಿ ತಂಗಡಗಿ ಎಮ್.ಎ. ಇತಿಹಾಸ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದು ಶಹಾಪುರಕ್ಕೆ ಕೀರ್ತಿ ತಂದಿದ್ದರು. ತಂದೆಯಂತೆ ಮಗಳು ಸಹ ಚಿನ್ನದ ಪದಕ ಪಡೆದು ತಾಲೂಕಿಗೆ ಕೀರ್ತಿ ತಂದಿರುವುದು ಹೆಮ್ಮೆಯ ಸಂಗತಿ. ಕು. ಸ್ಪೂರ್ತಿಯ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ಸಂಗಪ್ಪ  ರಾಂಪೂರೆ ಮತ್ತು ಅಧ್ಯಾಪಕರಾದ ಪ್ರೊ.ಸಿದ್ದಪ್ಪ ದಿಗ್ಗಿ, ಡಾ.ಬಸಂತ ಸಾಗರ, ಹಣಮಂತಿ ಗುತ್ತೇದಾರ, ಡಾ.ಶೈಲಜಾ ಬಾಗೇವಾಡಿ,ಡಾ.ದೇವಪ್ಪ ಹೊಸಮನಿ, ಅರ್ಜುನ ಕನ್ಯಾಕೋಳೂರು,ಮರೆಪ್ಪ ಜಾಲಿಮಂಚಿ, ರಾಘವೇಂದ್ರ ಹಾರಣಗೇರಾ,ಡಾ.ಶರಣಪ್ಪ ಸಂಘರ್ಷ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

About The Author