ಸಚಿವರಿಂದ ಅಲೆಮಾರಿ ಕುಟುಂಬದವರಿಗೆ ನಿವೇಶನ ಹಕ್ಕುಪತ್ರ,ಹೊಲಿಗೆ ತರಬೇತಿ ಪ್ರಮಾಣ ಪತ್ರ ವಿತರಣೆ ಬಡವರ ಕಲ್ಯಾಣಕ್ಕಾಗಿ ಸರ್ಕಾರ ಬದ್ಧ : ನಿವೇಶನ ರಹಿತರಿಗೆ ನಿವೇಶನ ಮಂಜೂರು : ದರ್ಶನಪುರ

yadagiri ಶಹಾಪುರ : ನಗರ ಪ್ರದೇಶದಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟವರು ಅಥವಾ ಬಾಡಿಗೆ ಮನೆಯಲ್ಲಿ ಇರುವವರು ಮತ್ತು ನಿವೇಶನ ರಹಿತರನ್ನು ಗುರುತಿಸಿ ನಿವೇಶನ ಕೊಡಲಾಗುವುದು ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಮೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.ನಗರಸಭೆ ವತಿಯಿಂದ ನಗರಸಭೆ ಆವರಣದಲ್ಲಿ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಅಲೆಮಾರಿ ಅರೆ ಅಲೆಮಾರಿ ಸಮಾಜದವರಿಗೆ ನಿವೇಶನ ಹಕ್ಕುಪತ್ರ ವಿತರಣೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೂರು ವರ್ಷದ ಹಿಂದೆ ನಗರದ ಆಡಳಿತಾಧಿಕಾರಿಗಳ ವತಿಯಿಂದ ನಿವೇಶನ ರಹಿತರನ್ನು ಸರ್ವೇ ಮಾಡಲಾಗಿತ್ತು.ಒಟ್ಟಾರೆ 3500 ಅರ್ಜಿಗಳು ಬಂದಿದ್ದು,ಅದರಲ್ಲಿ 950 ಜನರನ್ನು ಗುರುತಿಸಲಾಗಿತ್ತು.600 ನಿವೇಶನಗಳಿಗಾಗಿ ಲಾಟರಿ ಮೂಲಕ ನಿವೇಶನ ಹಂಚುವ ಕಾರ್ಯಕ್ಕೆ ನಗರಸಭೆ ಮುಂದಾಗಿತ್ತು.ಆದರೆ ನ್ಯಾಯಾಲಯದಿಂದ ತಡೆ ಆಗಿತ್ತು.ಮುಂದಿನ ದಿನಗಳಲ್ಲಿ ಅರ್ಜಿ ಹಾಕಿದವರೆಲ್ಲರಿಗೂ ನಿವೇಶನ ರಹಿತರನ್ನು ಗುರುತಿಸಿ ನಿವೇಶನ ನೀಡಲಾಗುವುದು. ನಿವೇಶನದ ಜೊತೆಗೆ ವಿದ್ಯುತ್ ಸೌಕರ್ಯ ಸಿಸಿ ರಸ್ತೆ ಕುಡಿಯುವ ನೀರಿನ ಮೂಲ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ತಿಳಿಸಿದರು.

ಪೌರಾಯುಕ್ತರಾದ ರಮೇಶ್ ಬಡಿಗೇರ, ಪ್ರಾಸ್ತಾವಿಕವಾಗಿ ಮಾತನಾಡಿದರು.ಸಚಿವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಅಲೆಮಾರಿ- ಅರೆ ಅಲೆಮಾರಿ ಕುಟುಂಬದವರಿಗೆ ನಿವೇಶನ ಹಕ್ಕು ಪತ್ರ,ಹೊಲಿಗೆ ಯಂತ್ರ ತರಬೇತಿ ಮತ್ತು ಬ್ಯೂಟಿಷಯನ್ ತರಬೇತಿ ಪಡೆದವರಿಗೆ ಪ್ರಮಾಣಪತ್ರ,ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಲ್ಯಾಪ್ಟಾಪ್ ವಿತರಿಸಿದರು ಹಾಗೂ ಬೀದಿ ವ್ಯಾಪಾರಿಗಳಿಗೆ ಗುರುತಿದ ಚೀಟಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಬಿ.ಸುಶೀಲಾ,ತಹಸೀಲ್ದಾರರಾದ ಉಮಾಕಾಂತ್ ಹಳ್ಳೆ.ನಗರಸಭೆಯ ಆಶ್ರಯ ಯೋಜನೆಯ ಅಧ್ಯಕ್ಷರಾದ ವಸಂತ್ ಕುಮಾರ್ ಸುರಪುರ,ತಾಲೂಕು ಕಾರ್ಯನಿರ್ವಹಣಾ ಅಧಿಕಾರಿ ಸೋಮಶೇಖರ್ ಬಿರಾದರ್,ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕರಾದ ಲಕ್ಷ್ಮಿಕಾಂತ,ನಾನಾ ಸಾಹೇಬ್ ಎಇ,ನಗರಸಭೆಯ ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.

* 2021-22ನೇ ಸಾಲಿನ 16ಲಕ್ಷ ಅನುದಾನದಲ್ಲಿ 13 ಜನರಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಲ್ಯಾಪ್ಟಾಪ್ ವಿತರಣೆ
*46 ಜನರಿಗೆ ಬ್ಯೂಟೇಷಿಯನ್ ತರಬೇತಿ ಪತ್ರ ವಿತರಣೆ.
* 62 ಜನರಿಗೆ ಹೊಲಿಗೆ ತರಬೇತಿ ಪತ್ರ ವಿತರಣೆ
*45 ಜನರಿಗೆ ಅಲೆಮಾರಿ ಮತ್ತು ಅರೆಮಾರಿ ಸಮುದಾಯದವರಿಗೆ ನಿವೇಶನ ಹಕ್ಕುಪತ್ರ ವಿತರಣೆ
*ವಸತಿ ರಹಿತರಿಗೆ 12 ಎಕರೆ ಭೂಮಿ ಮಂಜೂರು
*ನಗರದಲ್ಲಿ ಜಗಮಗಿಸುವ ವಿದ್ಯುತ್ ಗಾಗಿ ನಗರೋತ್ಥಾನದಡಿ 1.5 ಕೋಟಿ ಮಂಜೂರು
*2024ರ ಫೆಬ್ರುವರಿ ತಿಂಗಳಿನಲ್ಲಿ ನಗರದ ಜನತೆ ದಿನದ 24 ಗಂಟೆಗಳ ಕುಡಿಯುವ ನೀರಿನ ಸೌಲಭ್ಯ
*ಅಮೃತ ಯೋಜನೆ ಅಡಿ 88 ಕೋಟಿ ಮಂಜೂರು

About The Author